ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ. ಆಫ್ರಿಕಾದ ಸಾರ್ವಕಾಲಿಕ ವಿಕೆಟ್ ಟೇಕರ್ ಆಗುವ ಆಸೆ ವ್ಯಕ್ತಪಡಿಸಿದ ಕೇಶವ್ ಮಹಾರಾಜ್

I’d love to become SA’s all time leading wicket taker: Keshav Maharaj

ದಕ್ಷಿಣ ಆಫ್ರಿಕಾದ ಪ್ರಮುಖ ಸ್ಪಿನ್ನರ್‌ ಕೇಶವ್ ಮಹಾರಾಜ್ ಅವರು ತಮ್ಮ ದೇಶದ ಪರ ಸಾರ್ವಕಾಲಿಕ ಪ್ರಮುಖ ವಿಕೆಟ್ ಟೇಕರ್ ಆಗುವ ತಮ್ಮ ದೀರ್ಘಾವಧಿಯ ಗುರಿಯನ್ನು ತಿಳಿಸಿದ್ದಾರೆ.

ಪ್ರಸ್ತುತ ಐಸಿಸಿಯ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ 28 ನೇ ಸ್ಥಾನದಲ್ಲಿರುವ ಕೇಶವ್ ಮಹಾರಾಜ್ ತಮ್ಮ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ಬಹಿರಂಗಪಡಿಸಿದ್ದು, ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಆಗುವುದು ತನ್ನ ಅಲ್ಪಾವಧಿಯ ಗುರಿಯಾಗಿದೆ ಮತ್ತು ಟೆಸ್ಟ್‌ನಲ್ಲಿ ಶತಕ ಗಳಿಸುವ ಬಯಕೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

ತಮ್ಮ ವೃತ್ತಿಜೀವನದ ಪ್ರಮುಖ ಗುರಿಯು ತಮ್ಮ ರಾಷ್ಟ್ರೀಯ ತಂಡವನ್ನು ಟೆಸ್ಟ್‌ಗಳಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವುದಾಗಿದೆ. ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಪ್ರಮುಖ ವಿಕೆಟ್ ಟೇಕರ್ ಆಗುವುದು ಅವರ ದೀರ್ಘಾವಧಿಯ ಗುರಿ ಎಂದು ಹೇಳಿದ್ದಾರೆ.

ಪ್ರಸ್ತುತ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಪಟ್ಟಿಯಲ್ಲಿ ಡೇಲ್ ಸ್ಟೇನ್ 93 ಟೆಸ್ಟ್‌ಗಳಲ್ಲಿ 439 ವಿಕೆಟ್‌ ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ. ನಂತರ ಶಾನ್ ಪೊಲಾಕ್ 108 ಟೆಸ್ಟ್‌ಗಳಲ್ಲಿ 421 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇನ್ನೂ ದೂರದ ಪಯಣ ನಡೆಸಬೇಕಿರುವ 32 ವರ್ಷದ ಮಹಾರಾಜ್ ಅವರು 42 ಟೆಸ್ಟ್‌ಗಳಲ್ಲಿ 30.67 ಸರಾಸರಿಯಲ್ಲಿ 150 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ .

ಆದಾಗ್ಯೂ, ಬಾಂಗ್ಲಾದೇಶದ ವಿರುದ್ಧ ಜಯಶಾಲಿಯಾಗಿರುವ ಇತ್ತೀಚಿನ ಎರಡು ಟೆಸ್ಟ್ ಸರಣಿಯಲ್ಲಿ ಕೇಶವ್ ಉತ್ತಮ ಫಾರ್ಮ್‌ನಲ್ಲಿದ್ದರು. 16 ವಿಕೆಟ್‌ಗಳನ್ನು ಪಡೆದ ಎಡಗೈ ಸ್ಪಿನ್ನರ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಕೇವಲ ಬೌಲಿಂಗ್ ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ನ್ಲಲಿಯೂ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 108 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು ಆಲ್‌ರೌಂಡರ್‌ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.

Dewald Brevis ಒಂದೇ ಓವರ್‌ನಲ್ಲಿ 4 ಸಿಕ್ಸರ್ | Brevis show against Punjab | Oneindia Kannada

ಕಡಿಮೆ ಸಮಯದಲ್ಲಿ ನಾನು ದಿನದಿಂದ ದಿನಕ್ಕೆ ಆಟವನ್ನು ಸುಧಾರಿಸಿಕೊಳ್ಳಲು ಬಯಸುತ್ತೇನೆ. ನಾನು ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಆಗಲು ಇಷ್ಟಪಡುತ್ತೇನೆ ಮತ್ತು ಉತ್ತಮ ಬ್ಯಾಟ್ಸ್‌ಮನ್ ಆಗಿ ಟೆಸ್ಟ್‌ನಲ್ಲಿ ಶತಕವನ್ನು ಗಳಿಸಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನ ವಿಶ್ವದ ನಂ 1 ಸ್ಥಾನಕ್ಕೇರಿಸಲು ನನ್ನಿಂದ ಆಗುವ ಸಹಾಯ ಮಾಡಲು ಸಿದ್ದನಾಗಿರುವೆ, ಇದು ನನ್ನ ಜೀವನದ ಪ್ರಮುಖ ಗುರಿಯಾಗಿದೆ ಎಂದಿದ್ದಾರೆ.

Story first published: Thursday, April 14, 2022, 10:08 [IST]
Other articles published on Apr 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X