ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BCCI ಅಧ್ಯಕ್ಷರೇ ಫ್ಯಾಂಟಸಿ ಗೇಮಿಂಗ್ ಜಾಹೀರಾತಿನಲ್ಲಿ ಭಾಗಿಯಾದ್ರೆ, ಇತರ ಆಟಗಾರರು ಏಕೆ ಮಾಡಬಾರದು...?

Gautam gambhir

ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ತುಂಬಾ ನೇರವಾದ ವ್ಯಕ್ತಿ ಎಂದು ಎಲ್ಲರಿಗೂ ತಿಳಿದಿದೆ. ಯಾವುದೇ ಮಾತನ್ನು ನಿರ್ಭಯವಾಗಿ ಹೇಳುವ ಸ್ವಭಾವದವನು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಟೀಕಿಸಲು ಗಂಭೀರ್ ಹಿಂಜರಿಯಲಿಲ್ಲ.

ವಾಸ್ತವವಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಹೆಚ್ಚಿನ ಪ್ರಾಯೋಜಕತ್ವದ ಹಣವು ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಾದ ಡ್ರೀಮ್ 11, ಮೈ ಇಲೆವೆನ್ ಸರ್ಕಲ್ ಮತ್ತು ಇತರ ವೆಬ್‌ಸೈಟ್‌ಗಳಿಂದ ಬರುತ್ತದೆ ಎಂದು ಗಂಭೀರ್ ಹೇಳಿದರು. ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಜಾಹೀರಾತು ಮಾಡುತ್ತಿದ್ದು, ಇತರ ಆಟಗಾರರು ಅವುಗಳನ್ನು ಜಾಹೀರಾತು ಮಾಡಬಾರದು ಎಂದು ಹೇಳುವುದು ಸರಿಯಲ್ಲ ಎಂದು ಗಂಭೀರ್ ಹೇಳಿದರು.

Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!

''ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ಇವುಗಳಿಗೆ ಜಾಹೀರಾತು ನೀಡುತ್ತಿದ್ದರೆ, ಇತರ ಆಟಗಾರರು ಏಕೆ ಮಾಡಬಾರದು...? ಖಂಡಿತ ಮಾಡುತ್ತಾರೆ. ಇಂತಹ ಫ್ಯಾಂಟಸಿ ಆಟಗಳನ್ನು ಪ್ರಚಾರ ಮಾಡುವ ಮೂಲಕ ಕೆಲವರು ಲಾಭ ಪಡೆಯುತ್ತಿದ್ದರೆ, ಲಕ್ಷಾಂತರ ಜನರು ತಮ್ಮ ದುಡಿಮೆಯ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಜಾಹೀರಾತು ಬೇಡ ಎಂದು ಹಿರಿಯರು ಹೇಳಿದರೆ ಗಂಗೂಲಿ ಸೇರಿದಂತೆ ಎಲ್ಲರೂ ಪಾಲಿಸಬೇಕು. ಆ ಬದಲಾವಣೆ ಮೇಲಿಂದ ಮೇಲೆ ಬರಬೇಕು ಅಥವಾ ಭಾರತದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೆಲವು ರಾಜ್ಯಗಳಲ್ಲಿ ನಿಷೇಧಿಸಿ ಬೇರೆ ರಾಜ್ಯಗಳಲ್ಲಿ ನಡೆಸಿದರೆ ಹೇಗೆ? ಬೇಡವೆಂದರೂ ಎಲ್ಲದಕ್ಕೂ ಹಾಗೆ ಆಗಬೇಕು '' ಎಂದು ಹೇಳಿದರು. ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

"ಐಪಿಎಲ್‌ನಲ್ಲಿ, ಡ್ರೀಮ್ 11 ನಂತಹ ಫ್ಯಾಂಟಸಿ ಲೀಗ್ ಆಟದ ಸಂಘಟಕರಿಂದ ದೊಡ್ಡ ಪ್ರಾಯೋಜಕತ್ವಗಳು ಬರುತ್ತಿವೆ. ಆದರೆ ಬಿಸಿಸಿಐ ನಾಯಕರು ಇಂತಹ ವಿಷಯಗಳನ್ನು ಪ್ರಚಾರ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಸಾಮೂಹಿಕವಾಗಿ ನಿರ್ಧರಿಸಬೇಕು'' ಎಂದು ಗಂಭೀರ್ ತಿಳಿಸಿದ್ದಾರೆ.

ಖ್ಯಾತ ಆಟಗಾರರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಇತರರು ಕೆಲವು ಸಮಯದಿಂದ ಡ್ರೀಮ್ 11, ಎಂಪಿಎಲ್, ಮೈ 11 ಸರ್ಕಲ್‌ನಂತಹ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಜಾಹೀರಾತು ನೀಡಿದ್ದಾರೆ ಎಂದು ತಿಳಿದಿದೆ. ಈ ಪ್ಲಾಟ್‌ಫಾರ್ಮ್‌ಗಳು ಮಿಲಿಯನ್‌ಗಟ್ಟಲೆ ಅಭಿಮಾನಿಗಳನ್ನ ಸೆಳೆಯುವಲ್ಲಿ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಲವು ರಾಜ್ಯಗಳು ನಿಯಮಾನುಸಾರ ಅವುಗಳನ್ನು ನಿಷೇಧಿಸಿವೆ.

Story first published: Wednesday, September 21, 2022, 14:33 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X