ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಹಾನೆ ಹೊಗಳಿದರೆ ಮುಂಬೈಯವನ ಹೊಗಳಿದೆ ಎನ್ನುತ್ತಾರೆ: ಗವಾಸ್ಕರ್

If I praise Ajinkya Rahane, I will be accused of backing a Mumbaikar: Sunil Gavaskar

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆಯವರ ಫೀಲ್ಡ್‌ ಸೆಟ್ಟಿಂಗ್‌ಗೆ ಮಾಜಿ ಬ್ಯಾಟ್ಸ್‌ಮನ್ ಸುನಿಲ್‌ ಗವಾಸ್ಕರ್ ಪ್ರಭಾವಿತರಾಗಿದ್ದಾರೆ. ಹಾಗಂತ ರಹಾನೆಯನ್ನು ಹೊಗಳಿದರೆ ಅದನ್ನೂ ತಪ್ಪಾಗಿ ಅರ್ಥೈಸಲಾಗುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಮೊದಲ ದಿನದ ಆಟಕ್ಕೆ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆಭಾರತ vs ಆಸ್ಟ್ರೇಲಿಯಾ: ಮೊದಲ ದಿನದ ಆಟಕ್ಕೆ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ

ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತಂಡ ದ್ವಿತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್, ಫೀಲ್ಡಿಂಗ್‌ ಪ್ರದರ್ಶಿಸಿತ್ತು. ಆರಂಭಿಕ ಟೆಸ್ಟ್‌ನಲ್ಲಿ ಎಂದಿನ ನಾಯಕ ವಿರಾಟ್ ಕೊಹ್ಲಿ ತಂಡ ಮುನ್ನಡೆಸಿದ್ದರೆ, ದ್ವಿತೀಯ ಟೆಸ್ಟ್‌ನಲ್ಲಿ ನಾಯಕತ್ವದ ಜವಾಬ್ದಾರಿ ಅಜಿಂಕ್ಯ ರಹಾನೆ ವಹಿಸಿಕೊಂಡಿದ್ದರು.

ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್ ತಮಾಷೆಯಾಗಿ, 'ಯಾವುದೇ ವಿಚಾರಕ್ಕೂ ನಾವು ಒಂದೇ ಕ್ಷಣಕ್ಕೆ ನಿರ್ಧಾರಕ್ಕೆ ಬರಬಾರದು. ನಾನು ಒಂದು ವೇಳೆ ಅಜಿಂಕ್ಯ ರಹಾನೆ ನಾಯಕತ್ವ ಅದ್ಭುತವಾಗಿದೆ ಎಂದರೆ, ನಾನು ಮುಂಬೈ ಹುಡುಗನಿಗೆ ಬೆಂಬಲಿಸುತ್ತಿದ್ದೇನೆ ಎಂದು ದೂರಲ್ಪಡುತ್ತೇನೆ. ಚರ್ಚೆಗಳಾಗುತ್ತವೆ,' ಎಂದಿದ್ದಾರೆ.

ಮೆಲ್ಬರ್ನ್ ಅಂಗಳದಲ್ಲಿ ಸೆಹ್ವಾಗ್ ಏಕಾಂಗಿ ಸಾಧನೆಗೆ ಸಮವಾದ ಆಸ್ಟ್ರೇಲಿಯಾ ಮೊತ್ತಮೆಲ್ಬರ್ನ್ ಅಂಗಳದಲ್ಲಿ ಸೆಹ್ವಾಗ್ ಏಕಾಂಗಿ ಸಾಧನೆಗೆ ಸಮವಾದ ಆಸ್ಟ್ರೇಲಿಯಾ ಮೊತ್ತ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಆಸ್ಟ್ರೇಲಿಯಾವನ್ನು ಟೀಮ್ ಇಂಡಿಯಾ 195 ರನ್‌ಗೆ ಕಟ್ಟಿ ಹಾಕಿತ್ತು. ರವಿಚಂದ್ರನ್ ಅಶ್ವಿನ್ 3, ಜಸ್‌ಪ್ರೀತ್‌ ಬೂಮ್ರಾ 4 ವಿಕೆಟ್‌ ಪಡೆದು ಮಿಂಚಿದ್ದರೆ, ಅಜಿಂಕ್ಯ ರಹಾನೆಯ ನಾಯಕತ್ವ, ಫೀಲ್ಡ್‌ ಸೆಟ್ಟಿಂಗ್‌ ಕೂಡ ಗಮನ ಸೆಳೆದಿತ್ತು. ರಹಾನೆಯನ್ನು ವೀರೇಂದ್ರ ಸೆಹ್ವಾಗ್, ಗ್ಲೆನ್ ಮೆಗ್ರಾತ್, ವಿವಿಎಸ್‌ಲಕ್ಷ್ಮಣ್ ಸೇರಿದಂತೆ ಹಲವಾರು ಮಂದಿ ಶ್ಲಾಘಿಸಿದ್ದರು.

Story first published: Sunday, December 27, 2020, 8:51 [IST]
Other articles published on Dec 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X