ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿ

ಇದು ಟಾಪ್ ಸೀಕ್ರೆಟ್ ನಾನು ಇದನ್ನ ಯಾರಿಗೂ ಹೇಳೊಲ್ಲ..!
 Chennai won’t buy me at the auction: MS Dhoni

ಚೆನ್ನೈ, ಏಪ್ರಿಲ್‌ 24: ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಟೂರ್ನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಚೊಚ್ಚಲ ಆವೃತ್ತಿಯಿಂದಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡು ದಾಖಲೆ ಸಂಖ್ಯೆಯಲ್ಲಿ ಪ್ಲೇ ಆಫ್ಸ್‌ ತಲುಪಿರುವುದರ ರಹಸ್ಯವೇನು ಎಂಬುದಕ್ಕೆ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ ಅತ್ಯಂತ ಚಾಣಾಕ್ಷತನದ ಉತ್ತರ ನಿಡಿದ್ದಾರೆ.

ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌ಬೇರೆ ತಂಡದಲ್ಲಿ ಕಿತ್ತೊಗೆಯುತ್ತಿದ್ದರು: ಶೇನ್‌ ವ್ಯಾಟ್ಸನ್‌

ಮಂಗಳವಾರ ನಡೆದ ಐಪಿಎಲ್‌ 2019ರ 41ನೇ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಅಪಾಯಕಾರಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿಯಿತು. ಶೇನ್‌ ವ್ಯಾಟ್ಸನ್‌ ಅಮೋಘ 96 ರನ್‌ಗಳನ್ನು ಸಿಡಿಸಿ ಜಯದ ರೂವಾರಿಯಾದರು. ಈ ಮೂಲಕ ಸಿಎಸ್‌ಕೆ ಪ್ಲೇಆಫ್ಸ್‌ ಅರ್ಹತೆಯನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದೆ.

ಸಿಎಸ್‌ಕೆ ತಂಡ ಈ ಬಾರಿ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟರೆ ಐಪಿಎಲ್‌ನ 12 ಆವೃತ್ತಿಗಳಲ್ಲಿ ದಾಖಲೆಯ 10ನೇ ಬಾರಿ ಈ ಸಾಧನೆ ಮಾಡಿದಂತಾಗುತ್ತದೆ. ಅಂದಹಾಗೆ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣ ಸಂಬಂಧ 2016 ಮತ್ತು 2017 ಆವೃತ್ತಿಯಲ್ಲಿ ಪಾಲ್ಗೊಳ್ಳದಂತೆ ಸಿಎಸ್‌ಕೆ ವಿರುದ್ಧ ನಿಷೇಧ ಹೇರಲಾಗಿತ್ತು.

ಸಚಿನ್‌ ತೆಂಡೂಲ್ಕರ್‌ ಹುಟ್ಟು ಹಬ್ಬಕ್ಕೆ ಶುಭ ಕೋರಿದವರು ಯಾರು?ಸಚಿನ್‌ ತೆಂಡೂಲ್ಕರ್‌ ಹುಟ್ಟು ಹಬ್ಬಕ್ಕೆ ಶುಭ ಕೋರಿದವರು ಯಾರು?

ಇನ್ನು ಸೂಪರ್ ಕಿಂಗ್ಸ್‌ ತಂಡದ ಈ ಸೂಪರ್‌ ಸ್ಥಿರ ಪ್ರದರ್ಶನದ ರಹಸ್ಯ ವಾದರೂ ಏನೆಂದು ನಾಯಕ ಎಂ.ಎಸ್‌ ಧೋನಿ ಅವರನ್ನು ಪ್ರಶ್ನಿಸಿದಾಗ ಅತ್ಯಂತ ತಮಾಷೆಯ ಉತ್ತರ ನೀಡಿದ್ದಾರೆ.

"ಈ ರಹಸ್ಯವನ್ನು ಬಿಟ್ಟುಕೊಟ್ಟರೆ ಆಟಗಾರರ ಹರಾಜಿನಲ್ಲಿ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ. ಇದು ಟ್ರೇಡ್‌ ಸೀಕ್ರೆಟ್‌. ಅಭಿಮಾನಿಗಳ ಬೆಂಬಲ ಮತ್ತು ಫ್ರಾಂಚೈಸಿ ತಂಡದ ಬಲವೂ ಇದರಲ್ಲಿ ಅಡಗಿದೆ,'' ಎಂದು ಅತ್ಯಂತ ಜಾಣ್ಮೆಯಿಂದ ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಧೋನಿ ಉತ್ತರ ನೀಡಿದ್ದಾರೆ.

"ತಂಡದ ಯಶಸ್ಸಿಗೆ ಶ್ರಮಿಸಿರುವ ತಂಡದ ಸಹಾಯಕ ಸಿಬ್ಬಂದಿಗೆ ಇದರ ಬಹುಪಾಲು ಶ್ರೇಯಸ್ಸು ಸಲ್ಲಬೇಕು. ಇನ್ನುಳಿದದ್ದನು ನನ್ನ ನಿವೃತ್ತಿ ಬಳಿಕ ಮಾತ್ರವೇ ಹೇಳಬಲ್ಲೆ,'' ಎಂದು ಹೇಳಿದ್ದಾರೆ.

Story first published: Wednesday, April 24, 2019, 16:50 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X