ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೀವ್ ಬರಲ್ಲಾ ಅಂದ್ರೆ ನಾವೂ ಬರಲ್ಲ: ಭಾರತಕ್ಕೆ ಪಾಕ್ ಹೇಳಿದ್ಯಾಕೆ!

If India Skip Asia Cup, Pakistan Wont Play 2021 T20 World Cup: Pcb

ಏಷ್ಯಾ ಆತಿಥ್ಯ ಎಲ್ಲಿ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿಗದಿಯ ಪ್ರಕಾರ ಈ ಬಾರಿಯ ಏಷ್ಯಾ ಕಪ್ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡಬೇಕಾಗಿತ್ತು. ಆದರೆ ಎರಡು ದೇಶಗಳ ಮಧ್ಯೆ ರಾಜಕೀಯ ಪರಿಸ್ಥಿತಿ ತೀರಾ ಹದಗೆಟ್ಟಿರುವ ಕಾರಣ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ತೆರಳಲು ಸಿದ್ಧವಿಲ್ಲ.

ಈ ಪರಿಸ್ಥಿತಿಯಿಂದಾಗಿ ಏಷ್ಯಾಕಪ್ ಆಯೋಜನೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಆದರೆ ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ನ ಅಧ್ಯಕ್ಷ ವಾಸಿಮ್ ಖಾನ್ ಹೇಳಿಕೆಯನ್ನು ನೀಡಿದ್ದಾರೆ. ಭಾರತ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸವನ್ನು ಕೈಗೊಳ್ಳದಿದ್ದರೆ ಪಾಕಿಸ್ತಾನವೂ 2021ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.

ನಮಗಾಗಿ ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿ ಪಾಕ್‌ಗೆ ತೆರಳಿದ ಬಾಂಗ್ಲಾ ತಂಡನಮಗಾಗಿ ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿ ಪಾಕ್‌ಗೆ ತೆರಳಿದ ಬಾಂಗ್ಲಾ ತಂಡ

ಕಳೆದ ವಾರವಷ್ಟೇ ಬಿಸಿಸಿಐ ಪಾಕಿಸ್ತಾನ ನೆಲದಲ್ಲಿ ಭಾರತ ಕ್ರಿಕೆಟ್‌ ಆಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಏಷ್ಯಾಕಪ್ ಆಯೋಜನೆಯನ್ನು ಬಹುತೇಕ ಕಳೆದುಕೊಳ್ಳುವುದು ಖಚಿತ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ವಾಸಿಮ್ ಖಾನ್ ಈ ರೀತಿ ಹೇಳಿಕೆಯನ್ನು ನೀಡಿದ್ದಾರೆ.

ಏಷ್ಯಾ ಕಪ್ ಟೂರ್ನಿಯ ಅಯೋಜನೆಯನ್ನು ಬದಲಾವಣೆ ಮಾಡುವ ನಿರ್ಧಾರ ಐಸಿಸಿ ಅಥವಾ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ನ ನಿರ್ಧಾರವಲ್ಲ. ಅದು ಏಷ್ಯನ್ ಕ್ರಿಕೆಟ್‌ ಕೌನ್ಸಿಲ್(ಎಸಿಸಿ)ನ ನಿರ್ಧಾರ ಎಂದು ವಾಸಿಮ್ ಖಾನ್ ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್

ಪಾಕಿಸ್ತಾನದಲ್ಲಿ ಹೆಚ್ಚಾಗಿರುವ ಭಯೋತ್ಪಾದಕ ಕೃತ್ಯಗಳ ಕಾರಣದಿಂದ ದಶಕಗಳ ಕಾಲ ಪಾಕಿಸ್ತಾನಕ್ಕೆ ಯಾವ ದೇಶವೂ ಕ್ರಿಕೆಟ್ ಆಡಲು ಕಾಲಿಟ್ಟಿಲ್ಲ. ಕಳೆದ ವರ್ಷವಷ್ಟೇ ಪಾಕಿಸ್ತಾನದಲ್ಲಿ ದಶಕದ ನಂತರ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್ ಆಯೋಜನೆ ಮಾಡಲಾಗಿತ್ತು. ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ಪ್ರವಾಸಕ್ಕೆ ತೆರಳಲು ಒಪ್ಪಿಕೊಂಡಿತ್ತು.

Story first published: Saturday, January 25, 2020, 18:41 [IST]
Other articles published on Jan 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X