ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಟೀಂ ಇಂಡಿಯಾ ಆಟಗಾರರಿಗೆ ಕಪಿಲ್ ದೇವ್ ಯಾಕೆ ಈ ಮಾತನ್ನು ಹೇಳಿದರು?

If Indian Players Thinks International Cricket Is Too Much, They Can Skip IPL: Kapil Dev

ಇಂಡಿಯನ್ ಪ್ರೀಮಿಯರ್ ಲೀಗ್ - 2020ನೇ ಆವೃತ್ತಿ ಬರುವ ಮಾರ್ಚ್ 29ರಂದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ಈ ಆರಂಭಿಕ ಪಂದ್ಯ ನಡೆಯಲಿದೆ.

52 ದಿನಗಳ ಸುದೀರ್ಘ ಈ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ಹೊರತಾಗಿ, ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಹೆಚ್ಚಿನ ದೇಶದ ಆಟಗಾರರು ಆಡುತ್ತಿದ್ದಾರೆ. ಪಾಕಿಸ್ತಾನ ತಂಡದ ಆಟಗಾರರಿಗೆ ಈ ಟೂರ್ನಿಯಲ್ಲಿ ಆಡಲು ಅವಕಾಶವಿಲ್ಲ.

ಕೆ.ಎಲ್ ರಾಹುಲ್ ಟೆಸ್ಟ್‌ಗೆ ಕಡೆಗಣನೆ: ಆಯ್ಕೆಯ ಪ್ರಕ್ರಿಯೆ ಬಗ್ಗೆ ಕಪಿಲ್‌ದೇವ್ ಕೆಂಡಕೆ.ಎಲ್ ರಾಹುಲ್ ಟೆಸ್ಟ್‌ಗೆ ಕಡೆಗಣನೆ: ಆಯ್ಕೆಯ ಪ್ರಕ್ರಿಯೆ ಬಗ್ಗೆ ಕಪಿಲ್‌ದೇವ್ ಕೆಂಡ

ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ, ಶನಿವಾರದಂದು ಒಂದು ಪಂದ್ಯ ಮಾತ್ರ ಆಡಿಸಲಾಗುವುದು. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಈಗ ಜಂಟಲ್‌ಮ್ಯಾನ್ ಆಟವಾಗಿ ಉಳಿದುಕೊಂಡಿಲ್ಲ : ಕಪಿಲ್ ದೇವ್ಕ್ರಿಕೆಟ್ ಈಗ ಜಂಟಲ್‌ಮ್ಯಾನ್ ಆಟವಾಗಿ ಉಳಿದುಕೊಂಡಿಲ್ಲ : ಕಪಿಲ್ ದೇವ್

ಇನ್ನು, ಬಿಡುವಿಲ್ಲದ ಐಪಿಎಲ್ ಪಂದ್ಯಗಳ ನಡುವೆ, ಆಟಗಾರರು ಫಿಟ್ ಆಗಬೇಕಾಗಿರುವುದು ಬಹುಮುಖ್ಯ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಟೂರ್ನಮೆಂಟ್ ಆರಂಭವಾಗುವುದಕ್ಕೆ ಮುನ್ನ, ಆಟಗಾರರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ.

ಐಪಿಎಲ್ ಸುದೀರ್ಘವಾಗಿ ಸಾಗುವ ಟೂರ್ನಮೆಂಟ್

ಐಪಿಎಲ್ ಸುದೀರ್ಘವಾಗಿ ಸಾಗುವ ಟೂರ್ನಮೆಂಟ್

"ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಬಹುತೇಕ ಎಲ್ಲಾ ಆಟಗಾರರು, ಸದ್ಯ ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಆಡುತ್ತಿದ್ದಾರೆ. ಐಪಿಎಲ್ ಸುದೀರ್ಘವಾಗಿ ಸಾಗುವ ಟೂರ್ನಮೆಂಟ್. ಹಾಗಾಗಿ, ಇಲ್ಲಿ ಆಟಗಾರರ ಫಿಟ್ನೆಸ್ ಬಹುಮುಖ್ಯವಾಗಿರುತ್ತದೆ. ಇದನ್ನು ಆಟಗಾರರು ಗಮನದಲ್ಲಿ ಇಟ್ಟುಕೊಂಡು, ಐಪಿಎಲ್ ನಲ್ಲಿ ಭಾಗವಹಿಸಬೇಕಿದೆ" ಎಂದು ಕಪಿಲ್ ದೇವ್ ಹೇಳಿದ್ದಾರೆ.

ದಣಿದಿದ್ದರೆ ಐಪಿಎಲ್ ನಿಂದ ದೂರವುಳಿಯಿರಿ

ದಣಿದಿದ್ದರೆ ಐಪಿಎಲ್ ನಿಂದ ದೂರವುಳಿಯಿರಿ

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಪಿಲ್ ದೇವ್, "ಟೀಂ ಇಂಡಿಯಾದ ಖಾಯಂ ಆಟಗಾರರು ಬ್ಯಾಕ್ ಟು ಬ್ಯಾಕ್ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುತ್ತಿದ್ದಾರೆ. ಹಾಗಾಗಿ, ಇವರು ದಣಿದಿದ್ದರೆ, ಐಪಿಎಲ್ ನಿಂದ ದೂರವುಳಿಯುವುದು ಉತ್ತಮ" ಎಂದು ಕಪಿಲ್ ದೇವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಫ್ರಾಂಚೈಸ್ ಅನ್ನು ಪ್ರತಿನಿಧಿಸಿ ಆಡುವುದಕ್ಕೂ ವ್ಯತ್ಯಾಸವಿದೆ

ಫ್ರಾಂಚೈಸ್ ಅನ್ನು ಪ್ರತಿನಿಧಿಸಿ ಆಡುವುದಕ್ಕೂ ವ್ಯತ್ಯಾಸವಿದೆ

"ದೇಶವನ್ನು ಪ್ರತಿನಿಧಿಸಿ ಆಡುವುದಕ್ಕೂ, ಫ್ರಾಂಚೈಸ್ ಅನ್ನು ಪ್ರತಿನಿಧಿಸಿ ಆಡುವುದಕ್ಕೂ ವ್ಯತ್ಯಾಸವಿದೆ. ದೇಶವನ್ನು ಪ್ರತಿನಿಧಿಸಿ ಆಡುವಾಗ ಆಗುವ ಖುಷಿ, ಅನುಭವವೇ ಬೇರೆ. ಹಾಗಾಗಿ, ಐಪಿಎಲ್ ನಲ್ಲಿ ಆಡುವುದು ಸುಸ್ತು ಎನಿಸಿದರೆ, ಆಟಗಾರರು ವಿಶ್ರಾಂತಿ ತೆಗೆದುಕೊಳ್ಳಬಹುದು" ಎನ್ನುವ ಅಭಿಪ್ರಾಯವನ್ನು ಕಪಿಲ್ ದೇವ್ ವ್ಯಕ್ತಪಡಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಬೇಸರ

ನಾಯಕ ವಿರಾಟ್ ಕೊಹ್ಲಿ ಬೇಸರ

"ಐಪಿಎಲ್ ನಲ್ಲಿ ಆಡಬೇಕಾದರೆ, ಬೇರೆಯದೇ ಆದ ಗೇಮ್ ಪ್ಲ್ಯಾನ್ ಮಾಡಿಕೊಳ್ಳಬೇಕಾಗಿದೆ. ನೆಟ್ ಪ್ರಾಕ್ಟೀಸ್ ಮಾಡಬೇಕಾಗಿದೆ, ಸಹ ಆಟಗಾರರು ಯಾವ ವಿಭಾಗದಲ್ಲಿ ಬಲಿಷ್ಠರಾಗಿದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕಾಗುತ್ತದೆ. ಆದರೆ, ಇದ್ಯಾವುದಕ್ಕೂ ಸಮಯವಿಲ್ಲದೇ, ನೇರೆ ಮೈದಾನಕ್ಕೆ ಇಳಿಯುವಂತಾಗಿದೆ" ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು.

Story first published: Friday, February 28, 2020, 11:35 [IST]
Other articles published on Feb 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X