ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಲಿಯಮ್ಸನ್ ಭಾರತೀಯನಾಗಿದ್ರೆ ಕೊಹ್ಲಿಯನ್ನೂ ಹಿಂದಿಕ್ಕಿರುತ್ತಿದ್ದರು ಎಂದ ಮಾಜಿ ಕ್ರಿಕೆಟಿಗ

If Kane Williamson was Indian, he would be the greatest player in the world says Michael Vaughan

ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರೂ ಸಹ ಕ್ರಿಕೆಟ್ ಜಗತ್ತಿನಲ್ಲಿ ಪ್ರಸ್ತುತ ಅತ್ಯುತ್ತಮ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ಯಶಸ್ವಿಯಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದರೆ, ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ತಮ್ಮ ನಾಯಕತ್ವದಲ್ಲಿ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಇಬ್ಬರ ನಾಯಕತ್ವ ಅತ್ಯುತ್ತಮವಾಗಿದೆ ಎಂಬುದಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಾಲಿಟ್ಟಿರುವುದೇ ಸಾಕ್ಷಿ.

ಇನ್ನು ಇತ್ತೀಚಿಗಷ್ಟೆ ಐಪಿಎಲ್ ಮುಂದೂಡಲ್ಪಟ್ಟ ನಂತರ ತಮ್ಮ ತಮ್ಮ ತವರು ಸೇರಿರುವ ಈ ಇಬ್ಬರು ಕ್ರಿಕೆಟಿಗರು ಜೂನ್ 18ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಬೃಹತ್ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ. ಅತ್ತ ನ್ಯೂಜಿಲೆಂಡ್ ತಂಡ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಕೈವಶ ಮಾಡಿಕೊಳ್ಳಲು ಕಾಯುತ್ತಿದೆ. ಇನ್ನು ಟೀಂ ಇಂಡಿಯಾ ಅಭಿಮಾನಿಗಳು 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿದ್ದ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಸರಿಯಾದ ವೇದಿಕೆ ಎಂದು ಕಾಯುತ್ತಿದ್ದಾರೆ.

ಈ ಎಲ್ಲ ವಿದ್ಯಮಾನಗಳ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಮೈಕಲ್ ವಾನ್ ಇಬ್ಬರ ನಡುವೆ ಹೋಲಿಕೆ ಮಾಡಿ ಮಾತನಾಡಿರುವುದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರೆ ಯಾವುದೇ ಆಶ್ಚರ್ಯವಿಲ್ಲ. ಅಷ್ಟಕ್ಕೂ ಮೈಕಲ್ ವಾನ್ ಈ ಇಬ್ಬರು ಆಟಗಾರರ ನಡುವೆ ಹೋಲಿಸಿ ಹೇಳಿರುವುದಾದರೂ ಏನು ಎಂಬುದರ ಮಾಹಿತಿ ಮುಂದೆ ಇದೆ ಓದಿ...

ಕೇನ್ ವಿಲಿಯಮ್ಸನ್ ಭಾರತೀಯನಾಗಿರಬೇಕಿತ್ತು

ಕೇನ್ ವಿಲಿಯಮ್ಸನ್ ಭಾರತೀಯನಾಗಿರಬೇಕಿತ್ತು

ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿಯಷ್ಟೇ ಅತ್ಯುತ್ತಮ ಆಟಗಾರ, ಕೊಹ್ಲಿಗಿಂತ ವಿಲಿಯಮ್ಸನ್ ಯಾವುದರಲ್ಲೂ ಕಡಿಮೆಯಿಲ್ಲ ಆದರೆ ವಿಲಿಯಮ್ಸನ್ ನ್ಯೂಜಿಲೆಂಡ್ ಆಟಗಾರನಾದ ಕಾರಣ ಕೊಹ್ಲಿಯಷ್ಟು ಕ್ರೇಜ್ ಸಿಕ್ಕಿಲ್ಲ, ಒಂದುವೇಳೆ ವಿಲಿಯಮ್ಸನ್ ಭಾರತೀಯ ಆಟಗಾರನಾಗಿದ್ದಾರೆ ವಿರಾಟ್ ಕೊಹ್ಲಿಯಷ್ಟೇ ಜನಪ್ರಿಯತೆಯನ್ನು ಗಳಿಕೆ ಮಾಡುತ್ತಿದ್ದರು ಎಂದು ಮೈಕಲ್ ವಾನ್ ಹೇಳಿದ್ದಾರೆ.

ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್

ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್

ಕೊಹ್ಲಿ ಮತ್ತು ವಿಲಿಯಮ್ಸನ್ ನಡುವೆ ಮತ್ತಷ್ಟು ಹೋಲಿಕೆ ಮಾಡಿ ಮಾತನಾಡಿರುವ ಮೈಕಲ್ ವಾನ್ ಕೊಹ್ಲಿ ಮತ್ತು ವಿಲಿಯಮ್ಸನ್ ಇಬ್ಬರೂ ಸಮನಾದ ಆಟಗಾರರು ಆದರೆ ವಿರಾಟ್ ಕೊಹ್ಲಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಅಭಿಮಾನಿ ಬಳಗವಿದೆ ಹೀಗಾಗಿ ವಿಲಿಯಮ್ಸನ್‌ಗಿಂತ ವಿರಾಟ್ ಕೊಹ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ ಎಂದು ಮೈಕಲ್ ವಾನ್ ತಿಳಿಸಿದ್ದಾರೆ.

ವಿಲಿಯಮ್ಸನ್ 30 - 40 ಮಿಲಿಯನ್ ಡಾಲರ್ ಗಳಿಸುವುದಿಲ್ಲ

ವಿಲಿಯಮ್ಸನ್ 30 - 40 ಮಿಲಿಯನ್ ಡಾಲರ್ ಗಳಿಸುವುದಿಲ್ಲ

ಕೊಹ್ಲಿ ಮತ್ತು ವಿಲಿಯಮ್ಸನ್ ನಡುವೆ ಹೋಲಿಕೆ ಮಾಡಿ ಮಾತನಾಡುವಾಗ ಮೈಕಲ್ ವಾನ್ ವಿರಾಟ್ ಕೊಹ್ಲಿ ಅವರ ಜಾಹೀರಾತು ಸಂಭಾವನೆ ಕುರಿತು ಉಲ್ಲೇಖಿಸಿದ್ದಾರೆ. ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ ಮತ್ತು 40 ಮಿಲಿಯನ್ ಡಾಲರ್ ಜಾಹೀರಾತು ಸಂಭಾವನೆಯನ್ನು ಪಡೆಯುತ್ತಾರೆ, ಆದರೆ ಈ ಸಂಭಾವನೆಯನ್ನು ಕೇನ್ ವಿಲಿಯಮ್ಸನ್ ಪಡೆಯುವುದಿಲ್ಲ. ಇದನ್ನು ಬಿಟ್ಟರೆ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ನಡುವೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಮೈಕಲ್ ವಾನ್ ಹೇಳಿದ್ದಾರೆ.

ಈ ಮೂಲಕ ಮೈಕಲ್ ವಾನ್ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರು ಸಹ ಒಂದೇ ಮಟ್ಟದ ಆಟಗಾರರು ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

Story first published: Friday, May 14, 2021, 15:44 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X