ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಯಲ್ಲಿ ಇರದಿದ್ದರೆ ಸಿಎಸ್‌ಕೆಯಲ್ಲಿರುತ್ತಿದ್ದೆ: ಯುಜುವೇಂದ್ರ ಚಾಹಲ್

If not RCB, I would like to play for CSK in the IPL, says Yuzvendra Chahal
CSK ಎಂದು ಹೇಳಿ RCB ಗೆ ಟಾಂಗ್ ಕೊಟ್ಟ ಚಾಹಲ್ | Oneindia Kannada

ನವದೆಹಲಿ: ಟೀಮ್ ಇಂಡಿಯಾದಲ್ಲಿ ಯುಜುವೇಂದ್ರ ಚಾಹಲ್ ಏರಿಳಿತಗಳನ್ನು ಕಂಡ ಆಟಗಾರ. ಲೆಗ್ ಸ್ಪಿನ್ನರ್ ಆಗಿರುವ ಚಾಹಲ್ ಇಂಡಿಯನ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದಾರೆ.

ಸರ್ಫರಾಜ್ ಅಹ್ಮದ್-ವಿರಾಟ್ ಕೊಹ್ಲಿಯ ನಾಯಕತ್ವ ಒಂದೇ ರೀತಿ: ಫಾಫ್ ಡು ಪ್ಲೆಸಿಸ್ಸರ್ಫರಾಜ್ ಅಹ್ಮದ್-ವಿರಾಟ್ ಕೊಹ್ಲಿಯ ನಾಯಕತ್ವ ಒಂದೇ ರೀತಿ: ಫಾಫ್ ಡು ಪ್ಲೆಸಿಸ್

30ರ ಹರೆಯದ ಯುಜುವೇಂದ್ರ ಚಾಹಲ್ 54 ಏಕದಿನ ಪಂದ್ಯಗಳಲ್ಲಿ 92 ವಿಕೆಟ್, 42 ಟಿ20ಐ ಪಂದ್ಯಗಳಲ್ಲಿ 62 ವಿಕೆಟ್, 106 ಐಪಿಎಲ್ ಪಂದ್ಯಗಳಲ್ಲಿ 125 ವಿಕೆಟ್ ದಾಖಲೆ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್‌ನೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಈಗ ಚಾಹಲ್ ಆರ್‌ಸಿಬಿಯಲ್ಲಿ ನೆಲೆಯಾಗಿದ್ದಾರೆ.

ಇಂಗ್ಲೆಂಡ್‌ಗೆ ಪ್ರವಾಸ ಹೋಗಿರುವ ಭಾರತೀಯ ಟೆಸ್ಟ್ ತಂಡದಲ್ಲಿ ಚಾಹಲ್ ಇಲ್ಲ. ಆದರೆ ಮುಂಬರಲಿರುವ ಶ್ರೀಲಂಕಾ ಪ್ರವಾಸ ಸರಣಿಯಲ್ಲಿ ಚಾಹಲ್ ಆಡಲಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಚಾಹಲ್ ಒಂದಿಷ್ಟು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಮಾತುಕತೆಯ ಆಡಿಯೋ ತುಣುಕು ಲೀಕ್!ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಮಾತುಕತೆಯ ಆಡಿಯೋ ತುಣುಕು ಲೀಕ್!

ಸಂದರ್ಶನದ ವೇಳೆ ಚಾಹಲ್‌ಗೆ, 'ಆರ್‌ಸಿಬಿಯಲ್ಲಿ ಇರದಿದ್ದರೆ ನೀವು ಯಾವ ತಂಡದಲ್ಲಿ ಆಡಲು ಬಯಸುತ್ತಿದ್ದಿರಿ?,' ಎಂದು ಪ್ರಶ್ನಿಸಲಾಯ್ತು. ಇದಕ್ಕೆ ಚಾಹಲ್, 'ಚೆನ್ನೈ ಸೂಪರ್ ಕಿಂಗ್ಸ್‌' ಎಂದು ಪ್ರತಿಕ್ರಿಯಿಸಿದ್ದಾರೆ. ಎಂಎಸ್ ಧೋನಿ ನಾಯತ್ವದ ಸಿಎಸ್‌ಕೆ ಐಪಿಎಲ್‌ನಲ್ಲಿ 3 ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಆರ್‌ಸಿಬಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

Story first published: Saturday, June 5, 2021, 15:50 [IST]
Other articles published on Jun 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X