ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹೊರಕ್ಕೆ!

If Rajasthan Royals win, Mumbai Indians and Punjab Kings will be officially out of the IPL 2021

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕುತೂಹಲಕಾರಿ ಘಟಕ್ಕೆ ಪ್ರವೇಶಿಸುತ್ತಿದೆ. ಲೀಗ್‌ ಹಂತದ ಪಂದ್ಯಗಳು ಇನ್ನೇನು ಮುಗಿಯಲಿದ್ದು, ನಾಕೌಟ್ ಹಂತದ ಪಂದ್ಯಗಳು ಶುರುವಾಗಲಿವೆ. ಪ್ಲೇ ಆಫ್ಸ್‌ ಹಂತಕ್ಕೆ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ರವೇಶಿಸಿವೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್‌ ಮಧ್ಯೆ ಅದೃಷ್ಟದಾಟ ನಡೆಯಲಿದೆ.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ಪ್ರತೀ ತಂಡಗಳಿಗೂ ಲೀಗ್‌ ಹಂತದಲ್ಲಿ 14 ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಪಂದ್ಯಗಳು ಮುಗಿದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್ಸ್‌ ಅಹರ್ತೆ ಪಡೆದುಕೊಳ್ಳುತ್ತವೆ. ಪ್ಲೇ ಆಫ್ಸ್‌ಗೆ ಅಗ್ರ ನಾಲ್ಕು ಸ್ಥಾನಗಳು ಗೆದ್ದ ಪಂದ್ಯಗಳಿಗಾನುಸಾರ ಸಿಗುವ ಪಾಯಿಂಟ್ಸ್ ಮತ್ತು ನೆಟ್ ರನ್‌ರೇಟ್ ಅನ್ನು ಅವಲಂಭಿಸಿರುತ್ತವೆ.

ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್ ಹೊರಕ್ಕೆ

ರಾಜಸ್ಥಾನ್ ರಾಯಲ್ಸ್ ಗೆದ್ದರೆ ಮುಂಬೈ ಇಂಡಿಯನ್ಸ್ ಹೊರಕ್ಕೆ

ಅಕ್ಟೋಬರ್‌ 5ರ ಮಂಗಳವಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 51ನೇ ಪಂದ್ಯ ನಡೆಯಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುವುದರಲ್ಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ರಾಜಸ್ಥಾನ್ ರಾಯಲ್ಸ್ ಪಂದ್ಯ ಗೆದ್ದರೆ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಪ್ಲೇ ಆಫ್ಸ್‌ ಅವಕಾಶವನ್ನು ಕಳೆದುಕೊಳ್ಳಲಿವೆ. ಐಪಿಎಲ್ 2021ರ ಸೀಸನ್‌ನಿಂದ ಮುಂಬೈ, ಪಂಜಾಬ್ ತಂಡಗಳು ಅಧಿಕೃತವಾಗಿ ಹೊರ ಬೀಳಲಿವೆ. ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಮುಂಬೈ 7ನೇ ಸ್ಥಾನದಲ್ಲಿ, ರಾಜಸ್ಥಾನ್ 6ನೇ ಸ್ಥಾನದಲ್ಲಿ, ಪಂಜಾಬ್ 5ನೇ ಸ್ಥಾನದಲ್ಲಿ ಉಳಿದುಕೊಂಡಿವೆ.

ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹೊರ ಬೀಳೋದು ಯಾಕೆ?

ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹೊರ ಬೀಳೋದು ಯಾಕೆ?

ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ, ಮುಂಬೈ ಮತ್ತು ಪಂಜಾಬ್ ತಂಡಗಳು ಪ್ಲೇ ಆಫ್ಸ್‌ ಅವಕಾಶ ಕಳೆದುಕೊಳ್ಳುತ್ತವೆ ಯಾಕಂದರೆ ಪಂಜಾಬ್ 13 ಲೀಗ್‌ ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಪಾಯಿಂಟ್ಸ್ ಮತ್ತು -0.241 ನೆಟ್ ರನ್‌ ರೇಟ್ ಹೊಂದಿದೆ. ಮುಂಬೈ ತಂಡ 12 ಪಂದ್ಯಗಳಲ್ಲಿ 5 ಗೆಲುವು, 10 ಅಂಕ ಮತ್ತು -0.453 ನೆಟ್ ರನ್‌ ರೇಟ್ ಗಳಿಸಿದೆ. ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಪಾಯಿಂಟ್ಸ್, -0.337 ನೆಟ್ ರನ್‌ರೇಟ್ ಹೊಂದಿದೆ. ಹೀಗಾಗಿ ಮುಂಬೈ ವಿರುದ್ಧ ರಾಜಸ್ಥಾನ್ ಗೆದ್ದರೆ ಮುಂಬೈ ಮತ್ತು ಪಂಜಾಬ್ ಕಿಂಗ್ಸ್ ನೆಟ್ ರನ್‌ ರೇಟ್‌ಗೆ ಹೊಡೆತ ಬೀಳುತ್ತದೆ. ಮುಂದಿನ ಪಂದ್ಯಗಳಲ್ಲಿ ಮುಂಬೈ, ಪಂಜಾಬ್ ಗೆದ್ದರೂ ಎರಡಕ್ಕೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯೋದು ಸಾಧ್ಯವಿಲ್ಲ.

ಪ್ಲೇ ಆಫ್ಸ್‌ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟ್ರಿ

ಪ್ಲೇ ಆಫ್ಸ್‌ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟ್ರಿ

ಲೀಗ್‌ ಹಂತದಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶ ಸದ್ಯ ಉಳಿದಿರೋದು ಕೋಲ್ಕತ್ತಾನ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಮಾತ್ರ. ಅದರಲ್ಲೂ ರಾಜಸ್ಥಾನ್ ತಂಡ ಮುಂದಿನ ಎರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ನೆಟ್ ರನ್‌ ರೇಟ್ ಅನ್ನು ಭಾರೀ ಅಂತರದಲ್ಲಿ ಹೆಚ್ಚಿಸಿಕೊಳ್ಳಬೇಕು. ಆದರೆ ಇದು ಕಷ್ಟ ಸಾಧ್ಯ. ಒಂದು ವೇಳೆ ಆರ್‌ಆರ್ ಮುಂದಿನ ಎರಡು ಪಂದ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಗಳಿಸಿದರೆ 14 ಪಾಯಿಂಟ್ಸ್ ಗಳಿಸಲಿದೆ. ಆದರೆ ಸದ್ಯ 12 ಪಾಯಿಂಟ್ಸ್‌ ಮತ್ತು ಪ್ಲಸ್ ನೆಟ್ ರನ್ ರೇಟ್ ಹೊಂದಿರುವ ಕೆಕೆಆರ್‌ಗೆ ಇನ್ನೊಂದು ಪಂದ್ಯ ಉಳಿದಿದೆ. ಈ ಪಂದ್ಯದಲ್ಲಿ ಕೆಕೆಆರ್ ಸೋತರೆ ಆರ್‌ಆರ್‌ಗೆ ಅನುಕೂಲವಾಗಲಿದೆ, ಗೆದ್ದರೆ ಕೆಕೆಆರ್ ಪ್ಲೇ ಆಫ್ಸ್‌ಗೆ ಪ್ರವೇಶಿಸಲಿದೆ. ಒಟ್ಟಿನಲ್ಲಿ ಇಲ್ಲಿ ಪ್ಲೇ ಆಫ್ಸ್‌ ಅವಕಾಶ ಕೆಕೆಆರ್‌ಗೆ ಹೆಚ್ಚಿದೆ.

Story first published: Wednesday, October 6, 2021, 10:10 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X