ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?

ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಯಾಗಿದೆ. ಟೆಸ್ಟ್‌ ಕ್ರಿಕೆಟ್, ಏಕದಿನ ಮತ್ತು ಟಿ20ಐ ಮೂರೂ ಮಾದರಿಗಳಿಗೂ ನಾಯಕರಾಗಿದ್ದ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಮುಂಬರಲಿರುವ ಟಿ20 ವಿಶ್ವಕಪ್‌ ಬಳಿಕ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಟಿ20 ಮಾದರಿಯಲ್ಲಿ ಭಾರತೀಯ ತಂಡವನ್ನು ನೂತನ ನಾಯಕ ಮುನ್ನಡೆಸಲಿದ್ದಾರೆ. ಭಾರತ ಟಿ20 ತಂಡಕ್ಕೆ ಮುಂದಿನ ನಾಯಕ ಯಾರು ಅನ್ನೋದು ಇನ್ನೂ ಘೋಷಣೆಯಾಗಿಲ್ಲ.

ಎಂಐ 6ನೇ ಐಪಿಎಲ್ ಟ್ರೋಫಿ ಗೆಲ್ಲದಂತೆ ತಡೆಯಬಲ್ಲ ತಂಡ ಹೆಸರಿಸಿದ ಬ್ರಾಡ್ ಹಾಗ್!ಎಂಐ 6ನೇ ಐಪಿಎಲ್ ಟ್ರೋಫಿ ಗೆಲ್ಲದಂತೆ ತಡೆಯಬಲ್ಲ ತಂಡ ಹೆಸರಿಸಿದ ಬ್ರಾಡ್ ಹಾಗ್!

ಟಿ20 ವಿಶ್ವಕಪ್‌ ಬಳಿಕ ಯಾಕೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಾರೆ? ಟಿ20 ವಿಶ್ವಕಪ್‌ ಫಲಿತಾಂಶವನ್ನಾಧರಿಸಿ ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಲ್ಲೂ ಬದಲಾವಣೆಯಾಗಲಿದೆಯಾ? ಹೀಗೊಂದು ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ.

50 ಓವರ್‌ಗಳ ಕ್ರಿಕೆಟ್ ಮಾದರಿಗೆ ಇಬ್ಬರು ಉಪ ನಾಯಕರಿಗೆ ಸಲಹೆ?

50 ಓವರ್‌ಗಳ ಕ್ರಿಕೆಟ್ ಮಾದರಿಗೆ ಇಬ್ಬರು ಉಪ ನಾಯಕರಿಗೆ ಸಲಹೆ?

50 ಓವರ್‌ಗಳ ಕ್ರಿಕೆಟ್ ಮಾದರಿಗೆ 2 ವೈಟ್‌ಬಾಲ್ ನಾಯಕರನ್ನು ನೇಮಿಸುವಂತೆ ಭಾರತೀಯ ಕ್ರಿಕೆಟ್‌ ಬೋರ್ಡ್‌ಗೆ ಸಲಹೆ ಬಂದಿತ್ತು ಎಂದು ಮೂಲವೊಂದು ತಿಳಿಸಿದೆ. ಆದರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇದಕ್ಕೆ ಒಪ್ಪಿಲ್ಲ. ಹಾಗಂತ ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಟ್ರೋಫಿ ಗೆಲ್ಲದಿದ್ದರೆ ಮತ್ತೆ ಏಕದಿನ ಕ್ರಿಕೆಟ್‌ ನಾಯಕತ್ವದಿಂದಲೂ ವಿರಾಟ್ ಕೊಹ್ಲಿ ಕೆಳಗಿಳಿಯುತ್ತಾರಾ ಅಥವಾ ಒಡಿಐನಲ್ಲಿ ನಾಯಕರಾಗಿ ಮುಂದುವರೆಯುತ್ತಾರಾ ಎನ್ನುವ ಪ್ರಶ್ನೆಯೀಗ ಕ್ರಿಕೆಟ್ ವಲಯದಲ್ಲಿ ಎದ್ದಿದೆ. ಟಿ20 ವಿಶ್ವಕಪ್‌ನಲ್ಲಿ ಒಂದು ವೇಳೆ ಭಾರತ ಕೆಟ್ಟ ಪ್ರದರ್ಶನ ನೀಡಿ ಸೋತರೆ ಏಕದಿನ ತಂಡದ ನಾಯಕತ್ವದಿಂದಲೂ ಕೊಹ್ಲಿ ಇಳಿಯಬಹುದು ಅಥವಾ ಮುಂದುವರೆಯಲೂಬಹುದು. ಟಿ20 ವಿಶ್ವಕಪ್‌ ಬಳಿಕ ಏಕದಿನ ನಾಯಕತ್ವದಲ್ಲೂ ಬದಲಾವಣೆಯಾಗುವ ಸಾಧ್ಯತೆ ಯಾಕೆ ಇದೆಯೆಂದರೆ; ಸಾಮಾನ್ಯವಾಗಿ ರೆಡ್ ಬಾಲ್ ಮತ್ತು ವೈಟ್‌ಬಾಲ್‌ ಕ್ರಿಕೆಟ್‌ ಮಾದರಿಗಳಲ್ಲಿ ನಾಯಕರನ್ನು ರಾಷ್ಟ್ರೀಯ ಕ್ರಿಕೆಟ್ ತಂಡವೊಂದು ನೇಮಿಸುತ್ತದೆ. ಇದರರ್ಥ, ಟಿ20 ವಿಶ್ವಕಪ್‌ ಬಳಿಕ ಟಿ20ಐ ಮತ್ತು ಏಕದಿನಕ್ಕೆ ಬೇರೆ ನಾಯಕರು ಆಯ್ಕೆಯಾಗಿ, ಕೊಹ್ಲಿ ಬರೀ ಟೆಸ್ಟ್‌ನಲ್ಲಷ್ಟೇ ನಾಯಕತ್ವ ಮುಂದುವರೆಸಬಹುದು. ಒಟ್ಟಿನಲ್ಲಿ ಇವೆಲ್ಲ ಸದ್ಯ ಹರಿದಾಡುತ್ತಿರುವ ಗಾಳಿ ಸುದ್ದಿಗಳಷ್ಟೇ. ಮುಂದೇನಾಗುತ್ತದೆ ಕಾದು ನೋಡಬೇಕಷ್ಟೇ.

ಮುಂದಿನ ವೈಟ್‌ಬಾಲ್ ನಾಯಕ ಯಾರಾಗ್ತಾರೆ?

ಮುಂದಿನ ವೈಟ್‌ಬಾಲ್ ನಾಯಕ ಯಾರಾಗ್ತಾರೆ?

ವಿರಾಟ್ ಕೊಹ್ಲಿ ಸೆಪ್ಟೆಂಬರ್‌ 16ರ ಬುಧವಾರ ತಾನು ಟಿ20 ವಿಶ್ವಕಪ್‌ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಕೊಹ್ಲಿ ಈ ಸಂಗತಿ ಹೇಳಿಕೊಂಡಿದ್ದರು. ಆದರೆ ಈ ಸಂಗತಿ ಆಘಾತಕಾರಿಯೇನೂ ಅನಿಸಿರಲಿಲ್ಲ. ಕಾರಣ ವರ್ಷದಿಂದೀಚೆಗೆ ಭಾರತಕ್ಕೆ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಬೇರೆ ನಾಯಕ ಬೇಕು. ರೋಹಿತ್ ಶರ್ಮಾ ಭಾರತೀಯ ವೈಟ್‌ಬಾಲ್ ಕ್ರಿಕೆಟ್‌ಗೆ ನಾಯಕರಾದರೆ ಚೆನ್ನ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಅದಕ್ಕೆ ತಕ್ಕಂತೆ, ಭಾರತದ ವೈಟ್‌ಬಾಲ್ ಕ್ರಿಕೆಟ್‌ ನಾಯಕರಾಗಿ ರೋಹಿತ್ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐ ಮೂಲ ಈ ಮೊದಲು ತಿಳಿಸಿತ್ತು. ಈಗ ಕೊಹ್ಲಿ ಟಿ20 ನಾಯಕತ್ವ ತ್ಯಜಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಕೊಹ್ಲಿ ತಾನು ಟೆಸ್ಟ್ ಮತ್ತು ಏಕದಿನ ನಾಯಕತ್ವದಲ್ಲಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಮುಂದೊಮ್ಮೆ ವೈಟ್‌ಬಾಲ್ ನಾಯಕತ್ವದ ರೋಹಿತ್ ಪಾಲಾಗುವ ನಿರೀಕ್ಷೆಯಿದೆ. ಟಿ20 ನಾಯಕತ್ವ ಕೂಡ ಮುಂದೆ ಯಾರು ವಹಿಸಿಕೊಳ್ಳುತ್ತಾರೆ ಅನ್ನೋದು ಇನ್ನೂ ಘೋಷಣೆಯಾಗಿಲ್ಲ. ಆದರೆ ಟಿ20ಗೆ ಹಿಟ್‌ಮ್ಯಾನ್ ರೋಹಿತ್ ನಾಯಕರಾಗೋದು ಬಹುತೇಕ ಖಚಿತ.

ವಿರಾಟ್ ಕೊಹ್ಲಿ ನಾಯಕರಾಗಿ ಭಾರತ ಗೆದ್ದ ಅಂಕಿ-ಅಂಶಗಳು

ವಿರಾಟ್ ಕೊಹ್ಲಿ ನಾಯಕರಾಗಿ ಭಾರತ ಗೆದ್ದ ಅಂಕಿ-ಅಂಶಗಳು

ವಿರಾಟ್ ಇದ್ದಕ್ಕಿದ್ದಂತೆ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ತಾಳಿದರೋ ಗೊತ್ತಿಲ್ಲ. ಕೆಲಸದ ಹೊರೆಯ ಒತ್ತಡದಿಂದ ತಾನು ಒಂದು ಕ್ರಿಕೆಟ್ ಮಾದರಿಯ ನಾಯಕತ್ವ ಬಿಟ್ಟುಕೊಡುತ್ತಿರುವುದಾಗಿ ಕೊಹ್ಲಿ ಹೇಳಿದ್ದರು. ಆದರೆ ಕೊಹ್ಲಿಯ ಈ ನಿರ್ಧಾರಕ್ಕೆ ಮತ್ತೊಂದು ಕಾರಣವಿದೆ. ಅದೇನೆಂದರೆ, ಇತ್ತೀಚೆಗೆ ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಘೋಷಣೆಯಾದಾಗ ಅದರಲ್ಲಿ ರಶೀದ್ ಖಾನ್ ನಾಯಕರಾಗಿ ಹೆಸರಿಲ್ಪಟ್ಟಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಶೀದ್ ಕೂಡಲೇ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಾನು ನಾಯಕನಾಗಿರದೆ ಸಾಮಾನ್ಯ ಆಟಗಾರನಾಗಿ ತಂಡದಲ್ಲಿದ್ದು ಆಟದ ಕಡೆಗೆ ಗಮನ ಕೊಡಬೇಕು ಅನ್ನೋದು ರಶೀದ್ ನಿಲುವಾಗಿತ್ತು. ಇದೇ ಕಾರಣಕ್ಕೆ ಕೊಹ್ಲಿ ಕೂಡ ಒಂದು ಕ್ರಿಕೆಟ್ ಮಾದರಿಯ ನಾಯಕತ್ವ ಬಿಟ್ಟುಕೊಡಲು ಯೋಚಿಸಿರಬಹುದು.

ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ 65 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಇದರಲ್ಲಿ 38 ಪಂದ್ಯಗಳಲ್ಲಿ ಭಾರತ ಗೆದ್ದಿತ್ತು. ಇನ್ನು ಕೊಹ್ಲಿ 95 ಏಕದಿನದಲ್ಲಿ ನಾಯಕರಾಗಿದ್ದರು. ಇದರಲ್ಲಿ ಭಾರತ 65 ಪಂದ್ಯ ಗೆದ್ದು, 27 ಪಂದ್ಯ ಸೋತಿತ್ತು. 1 ಪಂದ್ಯ ಟೈ, 2 ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತ್ತು. ಕೊಹ್ಲಿ ನಾಯಕತ್ವದ ವಹಿಸಿದ್ದ 45 ಟಿ20ಐ ಪಂದ್ಯಗಳಲ್ಲಿ ಭಾರತ 27ರಲ್ಲಿ ಗೆದ್ದು, 14ರಲ್ಲಿ ಸೋತಿತ್ತು. 2 ಪಂದ್ಯಗಳು ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದ್ದವು. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ತಂಡ 132 ಪಂದ್ಯಗಳನ್ನಾಡಿದೆ, ಇದರಲ್ಲಿ 62 ಪಂದ್ಯಗಳನ್ನು ಗೆದ್ದಿದೆ, 66 ಪಂದ್ಯಗಳನ್ನು ಸೋತಿದೆ. 4 ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದೆ.

'ನಿಮಗೆ ಇಷ್ಟವಿಲ್ಲದಿದ್ದರೆ ಏಕದಿನ ನಾಯಕತ್ವದಿಂದಲೂ ನನ್ನನ್ನು ತೆಗೆಯಿರಿ'

'ನಿಮಗೆ ಇಷ್ಟವಿಲ್ಲದಿದ್ದರೆ ಏಕದಿನ ನಾಯಕತ್ವದಿಂದಲೂ ನನ್ನನ್ನು ತೆಗೆಯಿರಿ'

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ತಾನು ಟಿ20 ವಿಶ್ವಕಪ್‌ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ಉದ್ದ ಸಂದೇಶ ಬರೆದುಕೊಂಡಿರುವ ಕೊಹ್ಲಿ, ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯ ಬಳಿಕ ತಾನು ಟಿ20 ನಾಯಕತ್ವದದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ. ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕೊಹ್ಲಿ, 'ನನಗೆ ಭಾರತವನ್ನು ಪ್ರತಿನಿಧಿಸುವ ಅವಕಾಶವಷ್ಟೇ ಅಲ್ಲ, ಟೀಮ್ ಇಂಡಿಯಾವನ್ನು ಮುನ್ನಡೆಸುವ ಅದೃಷ್ಟವೂ ಸಿಕ್ಕಿತ್ತು. ಟೀಮ್ ಇಂಡಿಯಾದ ನಾಯಕನಾಗಿದ್ದಾಗ ನನಗೆ ಬೆಂಬಲಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ತಂಡದ ಸಹ ಆಟಗಾರರು, ಬೆಂಬಲ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ಕೋಚ್‌ಗಳು ಮತ್ತು ನಮ್ಮ ಗೆಲುವಿಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬ ಭಾರತೀಯನಿಗೂ ಧನ್ಯವಾದ. ನೀವಿಲ್ಲದೆ ನಾನೀ ಪ್ರಯಾಣ ಪೂರ್ಣಗೊಳಿಸಲಾಗುತ್ತಿರಲಿಲ್ಲ' ಎಂದು ಬರೆದುಕೊಂಡಿದ್ದಾರೆ. ಈಗಿನ ಬೆಳವಣಿಗೆಯ ಪ್ರಕಾರ, ಏಕದಿನದಿಂದಲೂ ಕೆಳಗಿಳಿಸಲು ಯೋಚಿಸುತ್ತಿರುವ ಬಿಸಿಸಿಐಗೆ ಕೊಹ್ಲಿ, 'ನಿಮಗೆ ತೆಗೆಯಬೇಕೆನಿಸದರೆ ನನ್ನನ್ನು ಏಕದಿನ ನಾಯಕತ್ವದಿಂದಲೂ ತೆಗೆಯಿರಿ,' ಎಂದು ಹೇಳಿದ್ದಾರೆ ಎನ್ನಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, September 17, 2021, 11:17 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X