ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಹಿಂದಿನ ಫಾರ್ಮ್‌ಗೆ ಮರಳಿದರೆ ಶತಕ, ದ್ವಿಶತಕವಲ್ಲ 300 ರನ್‌ ಚಚ್ಚುತ್ತಾರೆ: ಕಪಿಲ್ ದೇವ್

If Virat returns to his old form he will not only score a century he hit 300 said Kapil Dev

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನು ಬಾರಿಸದೆ ಸುದೀರ್ಘ ಕಾಲವಾಗಿದೆ. ಶತಕದ ಮೇಲೆ ಶತಕ ಬಾರಿಸುತ್ತಾ ಸಾಗುತ್ತಿದ್ದ ವಿರಾಟ್ ಕೊಹ್ಲಿ ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಅರ್ಧ ಶತಕಗಳನ್ನು ಗಳಿಸುತ್ತಿದ್ದರೂ ಅದನ್ನು ಶತಕವನ್ನಾಗಿ ಪರಿವರ್ತಿಸಲು ಕೊಹ್ಲಿ ವಿಫಲವಾಗಿದ್ದಾರೆ. ಹೀಗಾಗಿ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಇತ್ತೀಚೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾ ನಾಯಕನ ಬ್ಯಾಟಿಂಗ್ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯವನ್ನು ಅನುಭವಿಸುತ್ತಿದ್ದರೂ ಮಾಜಿ ನಾಯಕ ಕಪಿಲ್ ದೇವ್ ಕೊಹ್ಲಿ ಬಗ್ಗೆ ತಮ್ಮ ನಿರೀಕ್ಷೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ನಾಯಕತ್ವದ ಹೊಣೆ ಭಾರವಾಗುತ್ತಿದ್ದು ಈ ಕಾರಣದಿಂದಾಗಿ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ಧಾರಿ ಹೊರೆಯಾಗುತ್ತಿದ್ದಲ್ಲಿ ನಾಯಕನಾದ ಬಳಿಕ ಕೊಹ್ಲಿ ಇಷ್ಟು ರನ್‌ಗಳನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ ಕಪಿಲ್ ದೇವ್.

ನಾಯಕನಾಗಿ ವಿರಾಟ್ ಕೊಹ್ಲಿ 65 ಟೆಸ್ಟ್ ಪಂದ್ಯಗಳಲ್ಲಿ 5500ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದು 20 ಶತಕ ಹಾಗೂ 17 ಅರ್ಧ ಶತಕ ಸಿಡಿಸಿದ್ದಾರೆ. ಭಾರತದ ಏಕದಿನ ತಮಡದ ನಾಯಕನಾಗಿ ವಿರಾಟ್ ಕೊಹ್ಲಿ 21 ಶತಕ ಹಾಗೂ 27 ಅರ್ಧ ಶತಕ ಸಿಡಿಸಿದ್ದಾರೆ. 95 ಪಂದ್ಯಗಳಲ್ಲಿ ಅವರು 5500ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ನಾಯಕತ್ವ ವಿರಾಟ್ ಕೊಹ್ಲಿಗೆ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲವಾದರೆ ಇಷ್ಟು ರನ್‌ಗಳನ್ನು ಗಳಿಸುವುದು ಅಸಾಧ್ಯವಾಗಿರುತ್ತಿತ್ತು ಎಂದಿದ್ದಾರೆ ಕಪಿಲ್ ದೇವ್.

"ಇಷ್ಟು ವರ್ಷಗಳಲ್ಲಿ ವಿರಾಟ್ ಕೊಹ್ಲಿ ರನ್‌ಗಳಿಸುತ್ತಿದ್ದಾಗ ಯಾರು ಕೂಡ ವಿರಾಟ್ ಕೊಹ್ಲಿಯ ಬ್ಯಾಟಿಂಗ್‌ಗೆ ನಾಯಕತ್ವ ಅಡ್ಡಿಯಾಗುತ್ತಿದೆ ಎಂದು ಹೇಳಿರಲಿಲ್ಲ. ಆದರೆ ವೃತ್ತಿ ಜೀವನದಲ್ಲಿ ಅಹಜವಾಗಿರುವ ಸಣ್ಣ ಏರಿಳಿಯಗಳು ಬಂದ ತಕ್ಷಣವೇ ಈ ರೀತಿಯಾಗಿ ನಾಯಕತ್ವ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಆತ ಅಷ್ಟು ದ್ವಿಶತಕಗಳನ್ನು ದಾಖಲಿಸಿದಾಗ ಹಾಗೂ ಶತಕಗಳನ್ನ ದಾಖಲಿಸಿದಾಗ ಈ ಒತ್ತಡಗಳು ಇರಲಿಲ್ಲವೇ? ಅದರರ್ಥ ನಾಯಕತ್ವದ ಬಗ್ಗೆ ಚಿತ್ತಹರಿಸಬೇಕಿಲ್ಲ. ಅದರ ಬದಲಾಗಿ ಆತನ ಸಾಮರ್ತ್ಯವನ್ನು ಗಮನಿಸಿ" ಎಂದು ಕಪಿಲ್ ದೇವ್ ಟೀಮ್ ಇಂಡಿಯಾ ನಾಯಕನ ಬೆನ್ನಿಗೆ ನಿಂತಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾಜಿ ನಾಯಕ ಕಪಿಲ್ ದೇವ್ ಟೀಮ್ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಒಮ್ಮೆ ರನ್‌ಗಳಿಸಲು ಆರಂಭಿಸಿದರೆ ಆತ ದೊಡ್ಡ ದೊಡ್ಡ ಶತಕಗಳನ್ನು ಬಾರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ಹೈಯೆಸ್ಟ್ ರನ್ ಅಜೇಯ 254 ರನ್. ಆದರೆ ವಿರಾಟ್ ಕೊಹ್ಲಿ ತಮ್ಮ ಹಳೆಯ ಫಾರ್ಮ್‌ಗೆ ಮರಳಿದರೆ ಇದಕ್ಕಿಂತಲೂ ಹೆಚ್ಚಿನ ರನ್‌ಗಳಿಸುತ್ತಾರೆ ಆತ ತ್ರಿ ಶತಕವನ್ನು ಕೂಡ ಗಳಿಸಬಹುದು ಎಂದು ಕಪಿಲ್ ದೇವ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

AB DE Villiers ಅಭ್ಯಾಸ ಪಂದ್ಯದಲ್ಲಿ Harshal Patel ವಿರುದ್ಧ ಮಾಡಿದ್ದೇನು | Oneindia Kannada

"ವೃತ್ತಿ ಜೀವನದಲ್ಲಿ ನೀವು ಸಾಕಷಗ್ಟು ಏರಿಳಿತಗಳನ್ನು ಕಾಣುತ್ತೀರಿ. ಆದರೆ ಅದು ಎಷ್ಟು ಕಾಲ. 28-32 ವರ್ಷದವರೆಗೆ ನಿಮ್ಮದು ತುಂಬಾ ಅದ್ಭುತವಾದ ಹಾದಿಯಾಗಿತ್ತು. ಈಗ ಆತ ಮತ್ತಷ್ಟು ಅನುಭವಿಯಾಗಿದ್ದಾರೆ. ಈಗ ಆತ ತಮ್ಮ ಹಳೆಯ ಫಾರ್ಮ್‌ಗೆ ಮರಳಿದರೆ ವಿರಾಟ್ ಕೊಹ್ಲಿ ಕೇವಲ ಶತಕ ದ್ವಿತಕಗಳನ್ನು ಮಾತ್ರವೇ ಸಿಡಿಸುವುದಿಲ್ಲ. ಆತ 300 ರನ್‌ಗಳನ್ನು ಬಾರಿಸುತ್ತಾರೆ. ಆತ ಈಗ ಹೆಚ್ಚು ಪ್ರಬುದ್ಧರಾಗಿದ್ದಾರೆ. ವಿರಾಟ್ ಕೊಹ್ಲಿ ವಿಚಾರಕ್ಕೆ ಬಂದರೆ ಫಿಟ್‌ನೆಸ್‌ನಲ್ಲಿಯೂ ರಾಜಿಯಾಗಲಾರ. ಆತ ಕೇವಲ ತನ್ನನ್ನು ಕಂಡುಕೊಳ್ಳುವ ಮೂಲಕ ದೊಡ್ಡ ಮೊತ್ತಗಳನ್ನು ಗಳಿಸಬೇಕಿದೆ" ಎಂದಿದ್ದಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್

Story first published: Thursday, September 16, 2021, 0:05 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X