ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿರಿಯರ ವಿಭಾಗದಲ್ಲಿ ಬೌನ್ಸರ್ ನಿಷೇಧಿಸಿದರೆ ಉನ್ನತ ಮಟ್ಟದಲ್ಲೂ ನಿಷೇಧವಾಗಲಿ: ಮೈಕಲ್ ವಾನ್

If we ban bouncers at junior level then we have to ban it at elite level too says Michael Vaughan

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಭಾಗದ ಕ್ರಿಕೆಟ್ ಪಂದ್ಯಗಳಲ್ಲಿ ಬೌನ್ಸರ್ಗಳನ್ನು ನಿಷೇಧಿಸುವುದು ವಿಲಕ್ಷಣ ನಿರ್ಧಾರ. ಇದರಿಂದಾಗಿ ಯುವ ಬ್ಯಾಟ್ಸ್‌ಮನ್‌ಗಳು ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಕನ್ಕ್ಯುಶನ್ ತಜ್ಞ ಮೈಕೆಲ್ ಟರ್ನರ್, ಭವಿಷ್ಯದ ದೃಷ್ಠಿಯಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರ ವಿರುದ್ಧ ಶಾರ್ಟ್ ಪಿಚ್ ಬೌಲಿಂಗ್ ಅನ್ನು ನಿಷೇಧಿಸುವುದನ್ನು ಪರಿಗಣಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಬೆಳವಣಿಗೆಗೆ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರುಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರು

ಮೈಕಲ್ ಟರ್ನರ್ ಅವರ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದಿದ್ದಾರೆ. ಮೈಕಲ್ ಟರ್ನರ್ ನೀಡಿದ ಈ ಸಲಹೆಯನ್ನು ಇಂಗ್ಲೆಂಡ್ ಕ್ರಿಕೆಟ್ ತಮಡದ ಮಾಜಿ ನಾಯಕ ಮೈಕಲ್ ವಾನ್ ಇದೊಂದು ಹಾಸ್ಯಾಸ್ಪವಾದ ಸಲಹೆ. ಕೆಳ ದರ್ಜೆಯಲ್ಲಿ ಆಟಗಾರರು ಬೌನ್ಸರ್‌ಗಳನ್ನು ಎದುರಿಸಲು ಸಾಧ್ಯವಾಗದಿದ್ದರೆ ಉನ್ನತ ಮಟ್ಟದಲ್ಲಿ ಎದುರಿಸುವುದು ಸುಲಭವಲ್ಲ ಎಂದು ಮೈಕಲ್ ಬಾನ್ ಅಭಿಪ್ರಾಯ ಪಟ್ಟಿದ್ದಾರೆ.

"ಸಣ್ಣ ಹಂತದಲ್ಲಿ ಕಿರಿಯ ಆಟಗಾರರು ಬೌನ್ಸರ್‌ಗಳನ್ನು ಎದುರಿಸಲು ಸಾಧ್ಯವಾಗದಿದ್ದರೆ ಉನ್ನತ ಮಟ್ಟದಲ್ಲಿ ಅವರು ಕ್ರಿಕೆಟ್ ಪಂದ್ಯಗಳನ್ನು ಆಡುವಾಗ ಮೊದಲ ಬಾರಿಗೆ ಬೌನ್ಸರ್‌ಗಳನ್ನು ಎದುರಿಸಬೇಕಾಗುತ್ತದೆ. ಆಗ ಅವರು ಅದನ್ನು ಎದುರಿಸಲು ಬೇಕಾದ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಎಂದು ಮೈಕಲ್ ವಾನ್ ಪ್ರತಿಕ್ರಿಯಿಸಿದ್ದಾರೆ.

ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ

"ಜೂನಿಯರ್ ಮಟ್ಟದಲ್ಲಿ ಮಕ್ಕಳು ಕೋಚಿಂಗ್ ಪಡೆಯುವುದನ್ನು ನಾನು ಕಂಡಿದ್ದೇನೆ. ಅದೆಲ್ಲವೂ ಅತಿ ಸಣ್ಣ ಶಾರ್ಟ್‌ಪಿಚ್ ಎಸೆತಗಳಾಗಿವೆ. ಬೌಲರ್‌ಗಳು ಕೂಡ ಮಕ್ಕಳೇ ಆಗಿರುವ ಕಾರಣ ಅವರಲ್ಲೂ ಹೆಚ್ಚಿನ ಸಾಮರ್ಥ್ಯವಿರಲಾರದು. ಅಲ್ಲದೆ ಪಿಚ್‌ಗಳು ಕೂಡ ನಿಧಾನವಾಗಿರುತ್ತದೆ" ಎಂದು ಮೈಕಲ್ ವಾನ್ ಹೇಳಿದ್ದಾರೆ.

Story first published: Thursday, January 28, 2021, 17:42 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X