ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!

If we fail to complete IPL, the loss will be close to INR 2500 crore, says Sourav Ganguly

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಅರ್ಧಕ್ಕೆ ನಿಲುಗಡೆಯಾಗಿದೆ. ಕೋವಿಡ್-19 ಲಾಕ್‌ಡೌನ್ ವೇಳೆ ಬೇಜಾರು ಕಳೆಯೋಕೆ ನೆಪವಾಗಿದ್ದ ಐಪಿಎಲ್, ಕೊರೊನಾ ಕಾಟದಿಂದಲೇ ಅಮಾನತುಗೊಂಡಿದೆ. ಐಪಿಎಲ್ ಬಯೋಬಬಲ್ ಒಳಗೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚತೊಡಗಿದ್ದರಿಂದ ಕೊನೆಗೆ ನಗದು ಶ್ರೀಮಂತ ಟೂರ್ನಿ ನಿಲ್ಲಿಸುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.

ಕೊರೊನಾ ಪರಿಹಾರಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಆರ್ಥಿಕ ನೆರವುಕೊರೊನಾ ಪರಿಹಾರಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಆರ್ಥಿಕ ನೆರವು

ಮುಂದೆ ಸೆಪ್ಟೆಂಬರ್‌ನಲ್ಲಿ ಐಪಿಎಲ್‌ ನಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಭಾರತದಲ್ಲಿ ನಡೆಯದಿದ್ದರೂ ಯುನೈಟೆಡ್ ಅರಬ್ ಎಮಿರೇಟ್ಸ್‌ ಅಥವಾ ಬೇರಾವ ದೇಶದಲ್ಲಾದರೂ ಐಪಿಎಲ್‌ನ ಇನ್ನುಳಿದ ಪಂದ್ಯಗಳನ್ನು ಮುಗಿಸುವ ಯೋಚನೆಯಲ್ಲಿ ಬಿಸಿಸಿಐ ಇದೆ.

ಐಪಿಎಲ್ ನಡೆಯದಿದ್ರೆ ಭಾರೀ ನಷ್ಟ

ಐಪಿಎಲ್ ನಡೆಯದಿದ್ರೆ ಭಾರೀ ನಷ್ಟ

ಐಪಿಎಲ್‌ ಟೂರ್ನಿ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಸ್ಟಾರ್ ಕ್ರಿಕೆಟಿಗರೆಲ್ಲ ಪಾಲ್ಗೊಳ್ಳುವ ಅದ್ದೂರಿ ಟೂರ್ನಿ. ಐಪಿಎಲ್‌ನಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ದೊಡ್ಡ ಪ್ರಮಾಣದ ಆದಾಯ ಹರಿದುಬರುತ್ತದೆ. ಈ ಬಾರಿ ಟೂರ್ನಿ ಅರ್ಧದಲ್ಲೇ ನಿಂತಿರುವುದರಿಂದ ಒಂದು ವೇಳೆ ಟೂರ್ನಿ ಪೂರ್ಣಗೊಳ್ಳದಿದ್ದರೆ ಬಿಸಿಸಿಐಗೆ ದೊಡ್ಡ ಪ್ರಮಾಣದ ನಷ್ಟವಾಗಲಿದೆ.

ಸತ್ಯ ಬಾಯ್ಬಿಟ್ಟ ಸೌರವ್ ಗಂಗೂಲಿ

ಸತ್ಯ ಬಾಯ್ಬಿಟ್ಟ ಸೌರವ್ ಗಂಗೂಲಿ

2021ರ ಐಪಿಎಲ್ ಪೂರ್ಣಗೊಳ್ಳದಿದ್ದರೆ ಬಿಸಿಸಿಐಗೆ ಎಷ್ಟು ನಷ್ಟವಾಗಲಿದೆ ಎಂಬ ಸಂಗತಿಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. 'ಐಪಿಎಲ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ನಮಗೆ ಒಟ್ಟಾರೆ 2500 ಕೋಟಿ ರೂ. ನಷ್ಟವಾಗಲಿದೆ. ಇದು ಈಗಿನ ಅಂದಾಜು ಲೆಕ್ಕಾಚಾರ,' ಎಂದು ದ ಟೆಲಿಗ್ರಾಫ್‌ ಸಂದರ್ಶನದಲ್ಲಿ ಗಂಗೂಲಿ ಮಾಹಿತಿ ನೀಡಿದ್ದಾರೆ.

ಪ್ರಸಾರಕದಿಂದಾಗುವ ನಷ್ಟ

ಪ್ರಸಾರಕದಿಂದಾಗುವ ನಷ್ಟ

ಐಪಿಎಲ್‌ನ ಅಧಿಕೃತ ಪ್ರಸಾರಕ ಸ್ಟಾರ್‌ ನೆಟ್ವರ್ಕ್ಸ್ ಮತ್ತು ಬಿಸಿಸಿಐ ಐದು ವರ್ಷಗಳ ಒಪ್ಪಂದ ಹೊಂದಿದೆ. ಐಪಿಎಲ್‌ನ ಪ್ರತೀ ಪಂದ್ಯಕ್ಕೂ ಸ್ಟಾರ್‌ ನೆಟ್ವರ್ಕ್ಸ್ ಬಿಸಿಸಿಐಗೆ 54.5 ಕೋಟಿ ರೂ. ನೀಡುತ್ತಿದೆ. ಈ ವರ್ಷ ನಡೆಯಬೇಕಿದ್ದ 60 ಪಂದ್ಯಗಳಲ್ಲಿ ನಡೆದಿದ್ದು 29 ಪಂದ್ಯಗಳು ಮಾತ್ರ. ಹೀಗಾಗಿ ಬಿಸಿಸಿಐಗೆ ಸ್ಟಾರ್ ಅಂದಾಜು 1580 ಕೋಟಿ ರೂ. ನೀಡುತ್ತದೆ. ಇನ್ನುಳಿದ 31 ಪಂದ್ಯಗಳಿಗೆ ಸುಮಾರು 1690 ಕೋಟಿ ರೂ. ನಷ್ಟ ಬಿಸಿಸಿಐ ಮೇಲೆ ಬೀಳಲಿದೆ.

ಬಿಸಿಸಿಐಗೆ ಹೆಚ್ಚುವರಿ ಹೊರೆ

ಬಿಸಿಸಿಐಗೆ ಹೆಚ್ಚುವರಿ ಹೊರೆ

ಇನ್ನು ಐಪಿಎಲ್ ಜೊತೆ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ಅನ್ ಅಕಾಡೆಮಿ, ಡ್ರೀಮ್ಸ್ 11, ಕ್ರೆಡ್, ಅಪ್ ಸ್ಟಾಕ್, ಟಾಟಾ ಮೋಟರ್ಸ್ ಇವುಗಳಿಂದ ಸೇರಿಸಿ ಒಟ್ಟಾರೆ 120 ಕೋಟಿ ರೂ. ನಷ್ಟವಾಗಲಿದೆ. ಇನ್ನು ಕೊರೊನಾ ಔಷಧೋಪಚಾರ, ವಿದೇಶಿ ಆಟಗಾರರನ್ನು ಟೂರ್ನಿ ಮಧ್ಯದಲ್ಲಿ ಸ್ವದೇಶಗಳಿಗೆ ಕಳುಹಿಸಿಕೊಡುವ ಜವಾಬ್ದಾರಿ, ಟೂರ್ನಿ ಪೂರ್ಣಗೊಳ್ಳದಿದ್ದರೂ ಆಟಗಾರರಿಗೆ ಸಂಪೂರ್ಣ ವೇತನ ನೀಡುವ ಒಪ್ಪಂದ ಹೀಗೆಲ್ಲ ಸೇರಿ ಒಟ್ಟಾರೆ ಬಿಸಿಸಿಐಗೆ ಹೆಚ್ಚಿನ ಹೊರೆ ಬೀಳಲಿದೆ. ಟೂರ್ನಿ ಪೂರ್ಣಗೊಳ್ಳಲಿದ್ದರೆ ನಷ್ಟದ ಪ್ರಮಾಣ ಹೆಚ್ಚು.

Story first published: Friday, May 7, 2021, 17:40 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X