ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ ಯುಗದ ಬ್ರಹ್ಮಾಂಡ ಸತ್ಯ ಬಾಯ್ಬಿಟ್ಟ ವೀರೇಂದ್ರ ಸೆಹ್ವಾಗ್!

If yo-yo test existed in our time, Tendulkar, Ganguly, Laxman would never have passed it-Virender Sehwag

ನವದೆಹಲಿ: ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಆಟಗಾರನೊಬ್ಬ ಆಯ್ಕೆಯಾಗಬೇಕಾದರೆ ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆಗಲೇಬೇಕಾದ ಮಾನದಂಡ ವಿಧಿಸಲಾಗುತ್ತಿದೆ. ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆಗುವ ಆಟಗಾರ ಮಾತ್ರ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಹೀಗಾಗಿ ಈ ಟೆಸ್ಟ್‌ ಪಾಸ್ ಮಾಡಲಾಗದ ಅನೇಕ ಪ್ರಮುಖ ಆಟಗಾರರು ಟೀಮ್ ಇಂಡಿಯಾದಿಂದ ಹೊರಗುಳಿದ ನಿದರ್ಶನಗಳಿವೆ.

ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನಲು ಪ್ರಮುಖ 3 ಕಾರಣಗಳಿವು!ಈ ಬಾರಿ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನಲು ಪ್ರಮುಖ 3 ಕಾರಣಗಳಿವು!

ಯೋ ಯೋ ಟೆಸ್ಟ್‌ನಲ್ಲಿ ಫೇಲ್‌ ಆಗಿ ತಂಡದಿಂದ ಹೊರಬಿದ್ದ ಕಾರಣಕ್ಕಾಗಿ ಇತ್ತೀಚೆಗೆ ವರುಣ್ ಚಕ್ರವರ್ತಿ, ರಾಹುಲ್ ತೆವಾಟಿಯಾ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಆಡಿರಲಿಲ್ಲ. ಈ ಹಿಂದೆ ಅಂಬಾಟಿ ರಾಯುಡು ಕೂಡ ಫಿಟ್ನೆಸ್ ಟೆಸ್ಟ್‌ ಕಾರಣಕ್ಕೇ ತಂಡದಿಂದ ಹೊರಬಿದ್ದಿದ್ದಿದೆ.

ಈ ಪ್ರಮುಖ 5 ಆಟಗಾರರು ಐಪಿಎಲ್‌ ಆರಂಭಿಕ ಪಂದ್ಯಗಳಲ್ಲಿ ಆಡಲ್ಲ!ಈ ಪ್ರಮುಖ 5 ಆಟಗಾರರು ಐಪಿಎಲ್‌ ಆರಂಭಿಕ ಪಂದ್ಯಗಳಲ್ಲಿ ಆಡಲ್ಲ!

ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ ಯುಗದ ಬಗ್ಗೆ ಮಾತನಾಡಿರುವ ವೀರೇಂದ್ರ ಸೆಹ್ವಾಗ್ ಆ ಯುಗದ ಬ್ರಹ್ಮಾಂಡ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾರೆ.

ಸತ್ಯ ಬಾಯ್ಬಿಟ್ಟ ಸೆಹ್ವಾಗ್

ಸತ್ಯ ಬಾಯ್ಬಿಟ್ಟ ಸೆಹ್ವಾಗ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಆಡುತ್ತಿದ್ದಾಗಿನ ದಿನಗಳನ್ನು ನೆನಪಿಸಿಕೊಂಡಿರುವ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಒಂದು ಸತ್ಯ ಸಂಗತಿಯನ್ನು ಹೇಳಿದ್ದಾರೆ. ನಮ್ಮ ಯುಗದಲ್ಲೇನಾದರೂ ಯೋ-ಯೋ ಟೆಸ್ಟ್‌ ಇದ್ದಿದ್ದರೆ, ಸಚಿನ್ ತೆಂಡೂಲ್ಕರ್, ವಿವಿಎಸ್‌ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಯಾವತ್ತಿಗೂ ಅದನ್ನು ಪಾಸ್ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬೀಪ್‌ ಟೆಸ್ಟ್‌ ಪಾಸ್ ಆಗಿರಲಿಲ್ಲ

ಬೀಪ್‌ ಟೆಸ್ಟ್‌ ಪಾಸ್ ಆಗಿರಲಿಲ್ಲ

ವರುಣ್ ಚಕ್ರವರ್ತಿ ಅವರ್ಯಾಕೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಅಭಿಮಾನಿಯಗಳ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್, 'ಅವರು ಫಿಟ್ನೆಸ್ ಟೆಸ್ಟ್‌ ಪಾಸ್ ಆಗಿಲ್ಲ. ಆದ್ದರಿಂದ ಅವರು ತಂಡದಲ್ಲಿ ಆಡುತ್ತಿಲ್ಲ. ಆದರೆ ನಾನಿದನ್ನು ಒಪ್ಪುವುದಿಲ್ಲ. ಒಂದು ವೇಳೆ ನಮ್ಮ ಕಾಲದಲ್ಲಿ ಯೋ-ಯೋ ಟೆಸ್ಟ್‌ ಇದ್ದಿದ್ದರೆ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಇದನ್ನು ಯಾವತ್ತೂ ಪಾಸ್ ಮಾಡುತ್ತಿರಲಿಲ್ಲ. ಅವರು ಯಾವತ್ತೂ ಬೀಪ್ ಟೆಸ್ಟ್‌ನಲ್ಲಿ ಪಾಲ್ ಆಗಿದ್ದನ್ನು ನಾನು ನೋಡಿಲ್ಲ. ಅವರು ಪ್ರತೀಸಾರಿಯೂ 12.5 ಪಾಸ್ ಮಾರ್ಕ್‌ಗಿಂತ ಕೆಳಗಿರುತ್ತಿದ್ದರು,' ಎಂದು ಹೇಳಿದ್ದಾರೆ.

ಯಾವುದು ಕಷ್ಟಕರ ಟೆಸ್ಟ್?

ಯಾವುದು ಕಷ್ಟಕರ ಟೆಸ್ಟ್?

ಈಗಿನ ಯೋಯೋ ಟೆಸ್ಟ್‌ನಲ್ಲಿ ಬೇರೆ ಬೇರೆ ರೀತಿಗಳಿವೆ. ಇವುಗಳಲ್ಲಿ ಒಂದು ಕಷ್ಟಕರ ಟೆಸ್ಟ್ ಎಂದರೆ ಇತ್ತೀಚೆಗೆ ಪರಿಚಯಿಸಿರುವ 2 ಕಿ.ಮೀ. ರನ್ ಫಿಟ್ನೆಸ್ ಟೆಸ್ಟ್‌. ಈ ಟೆಸ್ಟ್‌ನ ಪ್ರಕಾರ, ಬ್ಯಾಟ್ಸ್‌ಮನ್‌, ವಿಕೆಟ್ ಕೀಪರ್ ಅಥವಾ ಸ್ಪಿನ್ ಬೌಲರ್‌ಗಳೆಲ್ಲ 2 ಕಿ.ಮೀ. ದೂರವನ್ನು 8 ನಿಮಿಷ 30 ಸೆಕೆಂಡ್‌ಗಳಲ್ಲಿ ಕ್ರಮಿಸಬೇಕು. ವೇಗದ ಬೌಲರ್ ಆಗಿದ್ದರೆ ಆತ ಪರೀಕ್ಷೆಯಲ್ಲಿ ಪಾಸ್ ಆಗಲು 2 ಕಿ.ಮೀ. ದೂರವನ್ನು 8 ನಿಮಿಷ 15 ಸೆಕೆಂಡ್‌ಗಳಲ್ಲಿ ಕ್ರಮಿಸಬೇಕು. ಆದರೆ ಇತ್ತೀಚೆಗೆ ಒಂದಿಷ್ಟು ಆಟಗಾರರು ಈ ಟೆಸ್ಟ್‌ನಲ್ಲಿ ಫೇಲ್ ಆಗಿದ್ದರು.

Story first published: Thursday, April 1, 2021, 15:10 [IST]
Other articles published on Apr 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X