ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೀಗೆ ಫೀಲ್ಡಿಂಗ್ ಮಾಡಿದ್ರೆ ಯಾವ ಮೊತ್ತವೂ ಎದುರಾಳಿಗೆ ಸಾಕಾಗದು!; ಕೊಹ್ಲಿ

If you field like that no total is good enough; kohli

ಈ ರೀತಿ ಫೀಲ್ಡಿಂಗ್ ಮಾಡಿದರೆ ಎಷ್ಟು ದೊಡ್ಡ ಮೊತ್ತ ಪೇರಿಸಿದರೂ ಗೆಲ್ಲಲು ಸಾಧ್ಯವಿಲ್ಲ. ಈ ಮಾತು ಹೇಳಿದ್ದು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ . ಕಳೆದ ಪಂದ್ಯದ ಸೋಲಿನ ಬಳಿಕ ಈ ಮಾತನ್ನು ಹೇಳಿ ಫೀಲ್ಡಿಂಗ್ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಸುಲಭವಾಗಿದ್ದ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಗೆಲ್ಲಬ ಹುದಾಗಿದ್ದ ಪಂದ್ಯವನ್ನು ಭಾರತ ಕಳೆದುಕೊಂಡತು. ಮಾತ್ರವಲ್ಲ ಹಲವು ಬೌಂಡರಿಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿತ್ತು. ಇದು ತಂಡಕ್ಕೆ ಬಹಳ ದುಬಾರಿಯಾಯಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಎರಡನೇ ಪಂದ್ಯದಲ್ಲೂ ಮುಂದುವರಿಸಿದ್ದು ಸೋಲಿಗೆ ಕಾರಣವಾಯಿತು. ಇದರ ಪರಿಣಾಮ ಟೀಮ್ ಇಂಡಿಯಾ ವೆಸ್ಟ್‌ ಇಂಡೀಸ್‌ಗೆ 8 ವಿಕೆಟ್‌ಗಳಿಂದ ಶರಣಾಯಿತು.

ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 170 ರನ್ ಗಳಿಸಿತು. ಈ ಮೊತ್ತವನ್ನು ವಿಂಡೀಸ್ ಸುಲಭವಾಗಿಯೇ ಬೆನ್ನತ್ತಲು ಯಶಸ್ವಿಯಾಯಿತು. ಅತಿಥಿಗಳ ಪರಿವಾಗಿ ಲೆಂಡ್ಲ್ ಸಿಮನ್ಸ್‌ ಮತ್ತು ನಿಕೋಲಸ್ ಪೂರನ್ ವಿಂಡಿಸ್ ಸುಲಭವಾಗಿ ಗೆಲ್ಲಲು ಕಾರಣರಾದರು. ಭರ್ಜರಿ ಅಜೇಯ ಅರ್ಧ ಶತಕ ಬಾರಿಸಿದ ಸಿಮನ್ಸ್‌ ಅವರು 6 ರನ್‌ ಬಾರಿಸಿದ್ದಾಗ ನೀಡಿದ್ದ ಸುಲಭ ಕ್ಯಾಚನ್ನು ವಾಶಿಂಗ್ಟನ್‌ ಸುಂದರ್ ಕೈಚೆಲ್ಲಿದ್ದರು. ಇದು ಪಂದ್ಯದ ಫಲಿತಾಂಶ ಟೀಮ್ ಇಂಡಿಯಾ ವಿರುದ್ಧವಾಗಿ ಬರಲು ಪ್ರಮುಖ ಕಾರಣವಾಯಿತು. ಸಿಮನ್ಸ್ ಅಜೇಯವಾಗುಳಿದು ತಂಡ ಗೆಲ್ಲಲು ಕಾರಣರಾದರು.

ಈ ರೀತಿ ಫೀಲ್ಡಿಂಗ್ ಮಾಡಿದರೆ ಯಾವ ಮೊತ್ತವೂ ದೊಡ್ಡದಲ್ಲ. ಬೌಲಿಂಗ್‌ನಲ್ಲಿ ತಂಡ ಉತ್ತಮವಾಗಿಯೇ ಇತ್ತು. ಮೊದಲ ನಾಲ್ಕು ಓವರ್‌ಗಳು ಉತ್ತಮವಾಗಿತ್ತು. ಆದರೆ ಕ್ಯಾಚ್‌ಗಳು ಬಿಟ್ಟಾಗ ಅದು ಸಹಜವಾಗಿಯೇ ದುಬಾರಿಯಾಗುತ್ತದೆ. ಫೀಲ್ಡಿಂಗ್ ವಿಭಾಗದತ್ತ ಮತ್ತಷ್ಟಯ ಗಮನ ನೀಡಬೇಕಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರುವಿರಾಟ್ ಕೊಹ್ಲಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು

ವಿಂಡೀಸ್ ವಿರುದ್ಧ ಟೀಮ್ ಇಂಡಿಯಾ ಎರಡನೇ ಟಿಟ್ವೆಂಟಿ ಪಂದ್ಯದಲ್ಲಿ ಭಾರತ ವಿಂಡಿಸ್‌ಗೆ ಶರಣಾಗಿದೆ. ಅದ್ಭುತ ಆಟ ಪ್ರದರ್ಶಿಸಿದ ವೆಸ್ಟ್ ಇಂಡೀಸ್ 8 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಂಡಿದೆ. ಈ ಮೂಲಕ ಸರಣಿ ಮತ್ತಷ್ಟು ಕುತೂಹಲಕಾರಿ ಘಟ್ಟ ತಲುಪಿದೆ. ಆದರೆ ಭಾರತ ಸೋಲು ಕಂಡ ರೀತಿ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಗೆ ಕಾರಣವಾಗಿದೆ.

ಈ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಮೊದಲ ಇನ್ನಿಂಗ್ಸ್‌ನ ಅಂತಿಮ ಹಂತದಲ್ಲಿ ವಿಕೆಟ್‌ ಕಳೆದುಕೊಂಡಿದ್ದು ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗದೆ ಸೋಲಲು ಕಾರಣವಾಯಿತು ಎಂದಿದ್ದಾರೆ.

Story first published: Monday, December 9, 2019, 12:13 [IST]
Other articles published on Dec 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X