ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಅಫಘಾನಿಸ್ತಾನದ ಬ್ಯಾಟ್ಸ್‌ಮನ್‌!

Ikram Ali breaks Tendulkars 27-year-old WC record

ಹೆಡಿಂಗ್ಲೇ, ಜುಲೈ 05: ವೆಸ್ಟ್‌ ಇಂಡೀಸ್‌ ಮತ್ತು ಅಫಘಾನಿಸ್ತಾನ ನಡುವೆ ಗುರುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಆಫ್ಘನ್‌ ತಂಡದ ಪರ ಮಿಂಚಿದ ವಿಕೆಟ್‌ಕೀಪರ್‌ ಇಕ್ರಮ್‌ ಅಲಿಖಿಲಿ ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದ್ದ 27 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!

ಅಫಘಾನಿಸ್ತಾನದ ತಂಡದ ಅನುಭವಿ ವಿಕೆಟ್‌ ಕೀಪರ್‌ ಮೊಹಮ್ಮದ್‌ ಶೆಹಝಾದ್‌ ಅವರು ಗಾಯಗೊಂಡ ಬಳಿಕ ಬದಲಿ ಆಟಗಾರನಾಗಿ ತಂಡ ಸೇರಿಕೊಂಡ ಇಕ್ರಮ್‌ ಅಲಿಖಿಲಿ ಗುರುವಾರ ಬಡೆದ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದಿದ್ದು, ವಿಶ್ವಕಪ್‌ನಲ್ಲಿ ಇನಿಂಗ್ಸ್‌ ಒಂದರಲ್ಲಿ ಗರಿಷ್ಠ ರನ್‌ ದಾಖಲಿಸಿದ 18 ವರ್ಷದ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಕ್ರಮ್‌ ಅಲಿ ವೆಸ್ಟ್‌ ಇಂಡೀಸ್‌ ವಿರುದ್ಧ 92 ಎಸೆತಗಳಲ್ಲಿ 86 ರನ್‌ಗಳ ಅಮೋಘ ಇನಿಂಗ್ಸ್‌ ಆಡಿದರು. ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ 27 ವರ್ಷದ ಹಿಂದೆ 84 ರನ್‌ಗಳನ್ನು ಗಳಸಿದ್ದು, ಈವರೆಗಿನ ವಿಶ್ವ ದಾಖಲೆಯಾಗಿತ್ತು.

"ಸಚಿನ್‌ ತೆಂಡೂಲ್ಕರ್‌ ಅವರಂತಹ ದಿಗ್ಗಜರ ದಾಖಲೆ ಮುರಿದಿರುವುದಕ್ಕೆ ಹೆಮ್ಮೆಯ ಭಾವವಿದೆ. ಇದರಿಂದ ನನಗೆ ಬಹಳ ಸಂತಸವಾಗಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಇಕ್ರಮ್‌ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಆದರೆ, ತಮಗೆ ಸಚಿನ್‌ಗಿಂತಲೂ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್‌ ಸಂಗಕ್ಕಾರ ಅಚ್ಚುಮೆಚ್ಚು ಎಂದು ಇದೇ ಸಂದರ್ಭದಲ್ಲಿ ಇಕ್ರಮ್‌ ಹೇಳಿದ್ದಾರೆ.

"ಒಂದೊಂದೇ ರನ್‌ಗಳಿಸಿದ ಅಗತ್ಯದ ಸಂದರ್ಭದಲ್ಲಿ ಬೌಂಡರಿ ಗಳಿಸುವ ಅವರ ಸಾಮರ್ಥ್ಯದಿಂದಲೇ ಅವರು ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದನ್ನೇ ನಾನೂ ಕೂಡ ಅನುಕರಣೆ ಮಾಡುವ ಪ್ರಯತ್ನ ಮಾಡುತ್ತೇನೆ,'' ಎಂದಿದ್ದಾರೆ.

ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!

ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎದುರು 312 ರನ್‌ಗಳ ಗುರಿ ಬೆನ್ನತ್ತಿದ ಅಫಘಾನಿಸ್ತಾನ ತಂಡ ಕಚ್ಚೆದೆಯ ಹೋರಾಟ ನಡೆಸಿ 50 ಓವರ್‌ಗಳಲ್ಲಿ 288 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದರೊಂದಿಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ಒಂದು ಪಂದ್ಯವನ್ನೂ ಗೆಲ್ಲಲಾಗದೆ ತನ್ನ ಅಭಿಯಾನ ಅಂತ್ಯಗೊಳಿಸಿದೆ.

"ನಾನು 86 ರನ್‌ಗಳನ್ನು ಗಳಿಸಿ ಟೂರ್ನಿಯಲ್ಲಿ ಅಫಘಾನಿಸ್ತಾನ ತಂಡದ ಗರಿಷ್ಠ ಮೊತ್ತಕ್ಕೆ ಕಾರಣವಾಗಿದ್ದು, ಸಂತಸ ನೀಡಿದೆ. ಆದರೆ, ಶತಕ ದಾಖಲಿಸಲು ವಿಫಲಗೊಂಡಿರುವುದಕ್ಕೆ ಬೇಸರವಿದೆ. ಮುಂದಿನ ದಿನಗಳಲ್ಲಿ ಅಫಘಾನಿಸ್ತಾನ ಪರ ಶತಕ ಬಾರಿಸುತ್ತೇನೆಂಬ ವಿಶ್ವಾಸವಿದೆ," ಎಂದು ಇಕ್ರಮ್‌ ಹೇಳಿದ್ದಾರೆ.

Story first published: Friday, July 5, 2019, 15:57 [IST]
Other articles published on Jul 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X