ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಅಬು ಧಾಬಿ ನೈಟ್ ರೈಡರ್ಸ್

ILT20: Abu Dhabi Knight Riders announced 14 member squad for UAE ILT20

ಮುಂದಿನ ವರ್ಷಾರಂಭಕ್ಕೆ ಫ್ರಾಂಚೈಸಿ ಕ್ರಿಕೆಟ್ ಲೋಕಕ್ಕೆ ಮತ್ತೊಂದು ಟಿ ಟ್ವೆಂಟಿ ಲೀಗ್ ಸೇರ್ಪಡೆಗೊಳ್ಳಲಿದ್ದು, ಯುಎಇ ಕ್ರಿಕೆಟ್ ಮಂಡಳಿ ಇಂಟರ್‌ನ್ಯಾಷನಲ್ ಲೀಗ್ ಟಿ ಟ್ವೆಂಟಿಯನ್ನು ಆಯೋಜಿಸಿಲಿದೆ. ಈ ನಿರೀಕ್ಷಿತ ಟೂರ್ನಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ತಂಡಗಳನ್ನು ಹೊಂದಿರುವ ಕೆಲ ಫ್ರಾಂಚೈಸಿಗಳೂ ಸಹ ತಂಡಗಳನ್ನು ಖರೀದಿಸಿವೆ.

ರಿಷಭ್ ಪಂತ್ vs ಊರ್ವಶಿ ರೌಟೆಲಾ: ಇಬ್ಬರ ಒಟ್ಟು ಆಸ್ತಿ ಮೊತ್ತವೆಷ್ಟು? ಯಾರು ಹೆಚ್ಚು ಸಿರಿವಂತರು?ರಿಷಭ್ ಪಂತ್ vs ಊರ್ವಶಿ ರೌಟೆಲಾ: ಇಬ್ಬರ ಒಟ್ಟು ಆಸ್ತಿ ಮೊತ್ತವೆಷ್ಟು? ಯಾರು ಹೆಚ್ಚು ಸಿರಿವಂತರು?

ಈ ಪೈಕಿ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಈ ಇಂಟರ್‌ನ್ಯಾಷನಲ್ ಲೀಗ್ ಟಿ ಟ್ವೆಂಟಿ ಟೂರ್ನಿಯಲ್ಲಿ ತಂಡವೊಂದನ್ನು ಖರೀದಿಸಿದೆ ಎಂಬ ಸುದ್ದಿ ಈ ಹಿಂದೆಯೇ ವೈರಲ್ ಆಗಿತ್ತು. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕತ್ವದ ಅಬು ಧಾಬಿ ನೈಟ್ ರೈಡರ್ಸ್‌ನ 14 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ಆಂಡ್ರೆ ರಸೆಲ್ ಹಾಗೂ ಸುನಿಲ್ ನರೈನ್ ಕೂಡ ಇದ್ದಾರೆ. ಈ ಇಬ್ಬರ ಜತೆಗೆ ಸದ್ಯ ಇಂಗ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಜಾನಿ ಬೈರ್‌ಸ್ಟೋ ಕೂಡ ಇರುವುದು ಸದ್ಯ ಕುತೂಹಲ ಹೆಚ್ಚಾಗುವಂತೆ ಮಾಡಿದೆ.

ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?

ಇನ್ನು ಅಬು ಧಾಬಿ ನೈಟ್ ರೈಡರ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಂಡಕ್ಕೆ ಸೇರ್ಪಡೆಗೊಂಡಿರುವ ಪ್ರತಿಯೊಬ್ಬ ಆಟಗಾರನ ಕುರಿತಾಗಿಯೂ ಪ್ರತ್ಯೇಕ ಟ್ವೀಟ್ ಹಾಕಿ ಸ್ವಾಗತಿಸಿದೆ. ಇನ್ನು ಈ ಟೂರ್ನಿ ಮುಂಬರುವ ಜನವರಿ 6ರಂದು ಆರಂಭವಾಗಲಿದ್ದು, ಫೆಬ್ರವರಿ 12ಕ್ಕೆ ಮುಕ್ತಾಯಗೊಳ್ಳಲಿದ್ದು, ತಿಂಗಳುಗಳ ಮುಂಚಿತವಾಗಿಯೇ ಅಬು ಧಾಬಿ ನೈಟ್ ರೈಡರ್ಸ್ ತಂಡ ಸೇರಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

ಅಬು ಧಾಬಿ ನೈಟ್ ರೈಟರ್ಸ್

ಅಬು ಧಾಬಿ ನೈಟ್ ರೈಟರ್ಸ್

ಸುನಿಲ್ ನರೈನ್ (ಟ್ರಿನಿಡಾಡ್ ಮತ್ತು ಟೊಬಾಗೊ/ವೆಸ್ಟ್ ಇಂಡೀಸ್)

ಆಂಡ್ರೆ ರಸೆಲ್ (ಜಮೈಕಾ/ವೆಸ್ಟ್ ಇಂಡೀಸ್)

ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)

ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್)

ಲಹಿರು ಕುಮಾರ (ಶ್ರೀಲಂಕಾ)

ಚರಿತ್ ಅಸಲಂಕಾ (ಶ್ರೀಲಂಕಾ)

ಕಾಲಿನ್ ಇಂಗ್ರಾಮ್ (ದಕ್ಷಿಣ ಆಫ್ರಿಕಾ)

ಅಕೇಲ್ ಹೊಸೈನ್ (ಟ್ರಿನಿಡಾಡ್ ಮತ್ತು ಟೊಬಾಗೊ/ವೆಸ್ಟ್ ಇಂಡೀಸ್)

ಸೀಕ್ಕುಗೆ ಪ್ರಸನ್ನ (ಶ್ರೀಲಂಕಾ)

ರವಿ ರಾಂಪಾಲ್ (ಟ್ರಿನಿಡಾಡ್ ಮತ್ತು ಟೊಬಾಗೊ/ವೆಸ್ಟ್ ಇಂಡೀಸ್)

ರೇಮನ್ ರೈಫರ್ (ಬಾರ್ಬಡೋಸ್/ವೆಸ್ಟ್ ಇಂಡೀಸ್)

ಕೆನ್ನಾರ್ ಲೆವಿಸ್ (ಜಮೈಕಾ/ವೆಸ್ಟ್ ಇಂಡೀಸ್)

ಅಲಿ ಖಾನ್ (ಯುನೈಟೆಡ್ ಸ್ಟೇಟ್ಸ್)

ಬ್ರಾಂಡನ್ ಗ್ಲೋವರ್ (ನೆದರ್ಲ್ಯಾಂಡ್ಸ್)

ಸಿಪಿಎಲ್‌ನಲ್ಲೂ ಇದೆ ನೈಟ್ ರೈಡರ್ಸ್

ಸಿಪಿಎಲ್‌ನಲ್ಲೂ ಇದೆ ನೈಟ್ ರೈಡರ್ಸ್

ಇನ್ನು ನೈಟ್ ರೈಡರ್ಸ್ ಮಾಲೀಕರು ವೆಸ್ಟ್ ಇಂಡೀಸ್‌ನ ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಸಹ ತಂಡವನ್ನು ಹೊಂದಿದ್ದು, ಈ ತಂಡಕ್ಕೆ ಟ್ರಿನ್‌ಬಾಗೋ ನೈಟ್ ರೈಡರ್ಸ್ ಎಂದು ಹೆಸರಿಡಲಾಗಿದೆ. ಈ ಮೂಲಕ ನೈಟ್ ರೈಡರ್ಸ್ ವಿಶ್ವದಾದ್ಯಂತ ಒಟ್ಟು ಮೂರು ಫ್ರಾಂಚೈಸಿ ಕ್ರಿಕೆಟ್ ಲೀಗ್ ತಂಡಗಳನ್ನು ಹೊಂದಿದಂತಾಗಿದೆ.

ಎಂಐ ಎಮಿರೇಟ್ಸ್ ಕೂಡ ಪ್ರಕಟ

ಎಂಐ ಎಮಿರೇಟ್ಸ್ ಕೂಡ ಪ್ರಕಟ

ಇನ್ನು ಇದಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲೀಕರು ಸಹ ಈ ಇಂಟರ್‌ನ್ಯಾಷನಲ್ ಲೀಗ್ ಟಿ ಟ್ವೆಂಟಿ ಲೀಗ್ ಟೂರ್ನಿಯಲ್ಲಿ ತಂಡವನ್ನು ಪ್ರಕಟಿಸಿತ್ತು. ಎಂಐ ಎಮಿರೇಟ್ಸ್ ಎಂದು ಹೆಸರಿರುವ ಈ ತಂಡದಲ್ಲಿ ಸ್ಥಾನ ಪಡೆದ ಆಟಗಾರರೆಂದರೆ: ಕಿರಾನ್ ಪೊಲಾರ್ಡ್, ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ಆಂಡ್ರೆ ಫ್ಲೆಚರ್, ಇಮ್ರಾನ್ ತಾಹಿರ್, ಸಮಿತ್ ಪಟೇಲ್, ವಿಲ್ ಸ್ಮೀಡ್, ಜೋರ್ಡಾನ್ ಥಾಂಪ್ಸನ್, ನಜಿಬುಲ್ಲಾ ಜದ್ರಾನ್, ಜಹೀರ್ ಖಾನ್, ಫಜಲ್ಹಕ್ ಫಾರೂಕಿ, ಬ್ರಾಡ್ಲಿ ವೀಲ್, ಬಾಸ್ ಡಿ ಲೀಡೆ

Story first published: Tuesday, August 16, 2022, 17:09 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X