ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟಿಗನ ರಾಸಲೀಲೆಗಳು ಟ್ವಿಟರ್‌ನಲ್ಲಿ ಹರಾಜು!

ಈ ಪಾಕ್ ಆಟಗಾರನಿಗೆ ಎಷ್ಟು ಜನ ಲವ್ವರ್ಸ್ ಗೊತ್ತಾ..? | Oneindia Kannada
Imam ul Haq in To controversy as a Twitter user exposes his chats with girls

ಕರಾಚಿ, ಜುಲೈ 24: ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಇಮಾಮ್‌ ಉಲ್‌ ಹಕ್‌ ಹೊಸದೊಂದು ವಿವಾದಕ್ಕೆ ಸಿಲುಕಿದ್ದು, ಹಲವಾರು ಹುಡುಗಿಯರೊಂದಿಗೆ ಏಕಕಾಲದಲ್ಲಿ ಪ್ರೀತಿ, ಪ್ರೇಮ, ಪ್ರಣಯದ ನಾಟಕವಾಡಿ ಮೀಟೂ ಆರೋಪ ಎದುರಿಸುತ್ತಿದ್ದಾರೆ.

ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಇಮಾಮ್‌ ಉಲ್‌ ಹಕ್‌ ಏಕ ಕಾಲದಲ್ಲಿ ನಾಲ್ಕೈದು ಹುಡುಗಿಯರೊಂದಿಗೆ ವಾಟ್ಸ್‌ಆಪ್‌ ಮೂಲ ಚಾಟ್‌ ಮಾಡುತ್ತಾ ಪ್ರೀತಿ ಪ್ರೇಮದ ನಾಟಕವಾಡಿರುವ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನು ಟ್ವಿಟರ್‌ ಬಳಕೆದಾರರೊಬ್ಬರು ಸೋಷಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ತಮ್ಮ ಅಂಕಲ್‌ ಹಾಗೂ ಪಾಕಿಸ್ತಾನ ತಂಡದ ಮಾಜಿ ನಾಯಕ ಮತ್ತು ಚೀಫ್‌ ಸೆಲೆಕ್ಟರ್‌ ಇಂಝಮಾಮ್‌ ಉಲ್‌ ಹಕ್‌ ಅವರ ಕೃಪಾಕಟಾಕ್ಷದಿಂದ ಪಾಕ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಇಮಾಮ್‌ ಉಲ್‌ ಹಕ್‌, ತಮ್ಮ ಆಯ್ಕೆ ಸರಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 36 ಪಂದ್ಯಗಳನ್ನಾಡಿ 7 ಶತಕದ ಸಹಿತ 54.38ರ ಬ್ಯಾಟಿಂಗ್‌ ಸರಾಸರಿ ಕೂಡ ಹೊಂದಿದ್ದಾರೆ.

ಆದರೆ, ವೈಯಕ್ತಿಕ ಜೀವನದಲ್ಲೂ ಅದರಲ್ಲೂ ಪ್ರೇಯಸಿಗಳ ವಿಚಾರದಲ್ಲೂ ಇಂಥದ್ದೇ ಸರಾಸರಿ ತಂದುಕೊಳ್ಳುವ ಪ್ರಯತ್ನ ನಡೆಸಿ ಮೀಟೂ ಆರೋಪಕ್ಕೆ ಗುರಿಯಾಗಿದ್ದಾರೆ. ಇಮಾಮ್‌ ಉಲ್‌ ಹಕ್‌ ಸುಮಾರು 7-8 ಹುಡುಗಿಯರೊಂದಿಗೆ ಡೇಟಿಂಗ್‌ ನಡೆಸುತ್ತಿದ್ದರು ಎಂಬುದು ಸೋಷಿಯಲ್‌ ಮೀಡಿಯಾಗಳ ಮೂಲಕ ಬೆಳಕಿಗೆ ಬಂದಿದೆ. ಈ ವಿವಾದ ಅವರ ವೃತ್ತಿ ಬದುಕಿನ ಮೇಲೆ ಭಾರಿ ಪ್ರಭಾವ ಬೀರಲಿದೆ ಎಂಬುದಂತೂ ಸ್ಪಷ್ಟವಾಗಿದ್ದು, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈ ಕುರಿತಾಗಿ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!

ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್‌ ಅಬ್ದುಲ್‌ ರಝಾಕ್‌ ತಾವು ವಿವಾಹವಾದ ಬಳಿಕ ನಾಲ್ವರು ಮಹಿಳೆಯರೊಂದಿಗೆ ವಿವಾಹೇತರ ಸಂಬಧ ಹೊಂದಿದ್ದಾಗಿ, ಅದರಲ್ಲೂ ಒಂದೂವರೆ ವರ್ಷಕಾಲ ತಮ್ಮ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಾಗಿ ಬಹಿರಂಗವಾಗಿ ಪಾಕಿಸ್ತಾನದ ಟೆಲಿವಿಷನ್‌ ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದರು.

ಟೆಸ್ಟ್‌ ಕ್ರಿಕೆಟ್‌ ಸಾಧನೆ

10 ಪಂದ್ಯ
483 ರನ್‌
76 ಗರಿಷ್ಠ
28.41 ಸರಾಸರಿ
47.49 ಸ್ಟ್ರೈಕ್‌ ರೇಟ್‌
03 ಅರ್ಧಶತಕಗಳು

ಏಕದಿನ ಕ್ರಿಕೆಟ್‌ ಸಾಧನೆ

36 ಪಂದ್ಯ
1692 ರನ್‌
151 ಗರಿಷ್ಠ
54.58 ಸರಾಸರಿ
80.57 ಸ್ಟ್ರೈಕ್‌ರೇಟ್‌
07 ಶತಕಗಳು
06 ಅರ್ಧಶತಕಗಳು

ಪ್ರಥಮ ದರ್ಜೆ ಕ್ರಿಕೆಟ್‌ ಸಾಧನೆ

46 ಪಂದ್ಯ
2406 ರನ್‌
200* ಗರಿಷ್ಠ
33.88 ಸರಾಸರಿ
44.71 ಸ್ಟ್ರೈಕ್ರೇಟ್‌
04 ಶತಕ
14 ಅರ್ಧಶತಕ

ಸಮಗ್ರ ಟಿ20 ಸಾಧನೆ

43 ಪಂದ್ಯ
1201 ರನ್‌
67 ಗರಿಷ್ಠ
35.32 ಸರಾಸರಿ
118.55 ಸ್ಟ್ರೈಕ್‌ರೇಟ್‌
12 ಅರ್ಧಶತಕ

Story first published: Wednesday, July 24, 2019, 22:45 [IST]
Other articles published on Jul 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X