ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಮ್ಮ ಕೊನೆಯ ವಿಶ್ವಕಪ್‌ನಲ್ಲಿ ಇತಿಹಾಸದ ಪುಟ ಸೇರಿದ ತಾಹಿರ್‌!

Imran Tahir becomes 1st spinner to bowl opening over at WC

ಲಂಡನ್‌, ಮೇ 30: ದಕ್ಷಿಣ ಆಫ್ರಿಕಾ ತಂಡದ 40 ವರ್ಷದ ಅನುಭವಿ ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅವರಿಗೆ ಈ ಬಾರಿಯ ವಿಶ್ವಕಪ್‌ ಟೂರ್ನಿ ಅವರ ವೃತ್ತಿ ಬದುಕಿನ ಕೊನೆಯ ವಿಶ್ವಕಪ್‌ ಆಗಿದ್ದು, ಇಂಗ್ಲೆಂಡ್‌ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

1
43644

ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮೊದಲ ಓವರ್‌ ಎಸೆದ ತಾಹಿರ್‌, ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಎಸೆತವನ್ನು ಎಸೆದ ಪ್ರಪ್ರಥಮ ಸ್ಪಿನ್ನರ್‌ ಎಂದು ಇತಿಹಾಸದ ಪುಟ ಸೇರಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ವೇಳಾಪಟ್ಟಿ

ಅಷ್ಟೇ ಅಲ್ಲದೆ ತಮ್ಮ ಎರಡನೇ ಎಸೆತದಲ್ಲೇ ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜಾನಿ ಬೌರ್‌ಸ್ಟೋವ್‌ ವಿಕೆಟ್‌ ಪಡೆಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು'ಪ್ಲೆಸಿಸ್‌ ಮೊದಲ ಓವರ್‌ ಎಸೆಯಲು ಇಮ್ರಾನ್‌ ತಾಹಿರ್‌ ಕೈಗೆ ಚೆಂಡನ್ನು ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಆರಂಭಿಕ ಆಘಾತ ಅನುಭವಿಸಿದರೂ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 311 ರನ್‌ ದಾಖಲಿಸಿತು.

ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಮೊದಲ ಓವರ್‌ನ ಎರಡನೇ ಎಸೆತದಲ್ಲಿ ತಾಹಿರ್‌ ಎಸೆದ ಗೂಗ್ಲಿ ಎಸೆತೆವನ್ನು ಅರಿಯುವಲ್ಲಿ ವಿಫಲರಾದ ಇಂಗ್ಲೆಂಡ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್‌ ಚೆಂಡನ್ನು ಎಡ್ಜ್‌ ಮಾಡುವ ಮೂಲಕ ಎದುರಾಳಿಯ ವಿಕೆಟ್‌ಕೀಪರ್‌ ಕ್ವಿಂಟನ್‌ ಡಿ'ಕಾಕ್‌ ಕೈಗೆ ಸೇರಿಸಿಬಿಟ್ಟರು. ಬಳಿಕ ತಮ್ಮ ಸಿಗ್ನೇಚರ್‌ ಸೆಲೆಬ್ರೇಷನ್‌ ಆರಂಭಿಸಿದ ತಾಹಿರ್‌ ಪೆವಿಲಿಯನ್‌ ವರೆಗೂ ಓಡಿ ಸಂಭ್ರಮಿಸಿದರು.

ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!

ಇನ್ನು ವಿಶ್ವಕಪ್‌ ಇತಿಹಾಸದಲ್ಲಿ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಮಾರ್ಟಿನ್‌ ಕ್ರೋವ್‌, 1992ರ ವಿಶ್ವಕಪ್‌ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಆಫ್‌ಸ್ಪಿನ್ನರ್‌ ದೀಪಕ್‌ ಪಟೇಲ್‌ ಅವರಿಗೆ ಬೌಲಿಂಗ್‌ ಮಾಡಲು ಅವಕಾಶ ನೀಡಿ ಅಚ್ಚರಿ ಮೂಡಿಸಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ 37 ರನ್‌ಗಳ ಜಯ ದಾಖಲಿಸಿತ್ತು.

ವಿಶ್ವಕಪ್‌ ವೇಳಾಪಟ್ಟಿ

Story first published: Thursday, May 30, 2019, 18:47 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X