ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರಲ್ಲಿ ಸಿಕ್ಸರ್ ಗಳ ಸುರಿಮಳೆ, ರೈನಾ ಕಮಾಲ್!

By Mahesh

ಬೆಂಗಳೂರು, ಸೆ.23: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಚಾಂಪಿಯನ್ಸ್ ಲೀಗ್ ಟಿ20 ಕ್ರಿಕೆಟ್ ನ ಪಂದ್ಯದಲ್ಲಿ ಧೋನಿ ಅವರ ಚೆನ್ನೈ ತಂಡ ಅದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ದಕ್ಷಿಣ ಆಫ್ರಿಕಾದ ಡಾಲ್ಫಿನ್ ತಂಡದ ವಿರುದ್ಧ ಧೋನಿ ಹುಡುಗರು 54 ರನ್ ಗಳ ಭರ್ಜರಿ ಗೆಲುವು ಸಾಧಿಸಿದರು. ಈ ಗೆಲುವಿನಲ್ಲಿ ಸುರೇಶ್ ರೈನಾ ಅವರ ದಾಖಲೆಯ ಆಟದ ಪಾಲು ದೊಡ್ಡದು.

| ವೇಳಾಪಟ್ಟಿ ಓದಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಐಪಿಎಲ್ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿತ್ತು. ಆನಂತರ ಹೈದರಾಬಾದಿ ಬಿರಿಯಾನಿ ಎಪಿಸೋಡು, ಸಿಎಸ್ ಕೆ ಕಾಫಿ ಚಾಲೆಂಜ್, ಬೆಂಗಳೂರಿನ ಕೂಲ್ ಹವಾಕ್ಕೆ ಒಗ್ಗಿಕೊಂಡ ಧೋನಿ ಹುಡುಗರು ಹಳದಿ ಜರ್ಸಿ ಧರಿಸಿ ರಣ ಪೌರುಷ ಮೆರೆದರು..

ಅದರೆ, ದಕ್ಷಿಣ ಆಫ್ರಿಕಾದ ತಂಡವೇನೂ ಕಡಿಮೆ ರಂಜನೆ ನೀಡಲಿಲ್ಲ. ಲ್ಯಾನ್ಸ್ ಕ್ಲುಸ್ನೆನರ್ ಗರಡಿಯಲ್ಲಿ ತರಬೇತಿ ಪಡೆದ ಹುಡುಗರು ಬೃಹತ್ ಮೊತ್ತವನ್ನು ಸಮರ್ಥವಾಗಿ ಎದುರಿಸಿದರು. ರನ್ ಮಳೆಯಲ್ಲಿ ಕ್ರೀಡಾಂಗಣ ಮಿಂದೆದ್ದರೆ ಬೆಂಗಳೂರಿನಲ್ಲಿ ತಡರಾತ್ರಿ ಆರಂಭವಾದ ಮಳೆ ನಗರದ ಬಹುತೇಕ ಪ್ರದೇಶವನ್ನು ಒದ್ದೆ ಮುದ್ದೆ ಮಾಡಿ ಹಲವರ ನಿದ್ದೆಗೆಡಿಸಿತು.

ಆದರೆ, ವೀರಾವೇಶದ ಹೋರಾಟ ಪ್ರದರ್ಶಿಸಿದ ಡಾಲ್ಫಿನ್ ತಂಡ 188ರನ್ ಗಳಿಸಿ ಶರಣಾಯಿತು. ಆದರೆ, ಚೆನ್ನೈಗೆ ಚುರುಕು ಮುಟ್ಟಿಸದೇ ಪೆವಿಲಿಯನ್ ಗೆ ತೆರಳಿಲ್ಲ. ಒಟ್ಟಾರೆ ಸಿಕ್ಸರ್ ಗಳ ಮಳೆ, ರನ್ ಹೊಳೆಯಲ್ಲಿ ಮಿಂದೆದ್ದ ಪ್ರೇಕ್ಷಕರ ನಡುವೆ ಶತಕವಂಚಿತರಾದರೂ ರೈನಾ ಹಲವು ದಾಖಲೆಗಳನ್ನು ಸರಿಗಟ್ಟಿದರು.

ರೈನಾ ಭರ್ಜರಿ ಪ್ರದರ್ಶನ

ರೈನಾ ಭರ್ಜರಿ ಪ್ರದರ್ಶನ

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ರೈನಾ ಭರ್ಜರಿ ಪ್ರದರ್ಶನ ನೀಡಿ 8 ಸಿಕ್ಸರ್ 4 ಬೌಂಡರಿ ಸಿಡಿಸಿ 43 ಎಸೆತಗಳಲ್ಲಿ 90 ರನ್ ಚೆಚ್ಚಿದರು. 20 ಓವರ್ ಗಳಲ್ಲಿ 242/6 ರನ್ ಮೊತ್ತ ಪೇರಿಸಿದ ಚೆನ್ನೈ ಸುಲಭ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿತ್ತು.

ಟಿ20 ಪಂದ್ಯದಲ್ಲಿ ರೈನಾ ಸಾಧನೆ

ಟಿ20 ಪಂದ್ಯದಲ್ಲಿ ರೈನಾ ಸಾಧನೆ

ಟಿ20 ಟೂರ್ನಿಯಲ್ಲಿ 5000ರನ್ ಗಳಿಸಿದ ಪ್ರಥಮ ಭಾರತೀಯ ಆಟಗಾರ ಹಾಗೂ ವಿಶ್ವದ 7ನೇ ಆಟಗಾರ ಎನಿಸಿದರು.

ಒಂದೇ ತಂಡದಲ್ಲಿ ಆಡಿದ ದಾಖಲೆ

ಒಂದೇ ತಂಡದಲ್ಲಿ ಆಡಿದ ದಾಖಲೆ

ಒಂದೇ ತಂಡದಲ್ಲಿ ಆಡಿ ಸುಮಾರು 4000ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಆಟಗಾರ ಸುರೇಶ್ ರೈನಾ. ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.

ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ

ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ

ಟಿ20 ಟೂರ್ನಿಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಆಟಗಾರ ಸುರೇಶ್ ರೈನಾ(17)

ಸಿಎಲ್ಟಿ20ಯಲ್ಲೂ ರೈನಾ ದಾಖಲೆ

ಸಿಎಲ್ಟಿ20ಯಲ್ಲೂ ರೈನಾ ದಾಖಲೆ

ಸಿಎಲ್ಟಿ20ಯಲ್ಲೂ ರೈನಾ ದಾಖಲೆ ಬರೆದಿದ್ದು 726 ರನ್ ಗಳಿಸಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಆಟಗಾರರಾಗಿ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ

ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ

ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಕೂಡಾ ಸುರೇಶ್ ರೈನಾ ಒಟ್ಟು 199 ಸಿಕ್ಸ್ ಬಾರಿಸಿದ್ದಾರೆ.

ಚಿತ್ರದಲ್ಲಿ: ನಾಯಕ ಧೋನಿ ಅವರು ಸಹ ಆಟಗಾರರೊಂದಿಗೆ ಗೆಲುವಿನ ಸಂಭ್ರಮದಲ್ಲಿದ್ದಾರೆ.
ಸಿಎಲ್ಟಿ20ಯಲ್ಲಿ ವೈಯಕ್ತಿಕ ರನ್ ಗಳಿಕೆ

ಸಿಎಲ್ಟಿ20ಯಲ್ಲಿ ವೈಯಕ್ತಿಕ ರನ್ ಗಳಿಕೆ

ಸಿಎಲ್ಟಿ20 ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆಯಲ್ಲಿ ರೈನಾ ಹೆಸರೇ ಇದೆ. 90(2014),94(2010ರಲ್ಲಿ) 87 ರನ್ (2010)

ಚಿತ್ರದಲ್ಲಿ : ಆರ್ ಅಶ್ವಿನ್ ವಿಕೆಟ್ ಪಡೆದ ಸಂಭ್ರಮ
ಡಾಲ್ಫಿನ್ಸ್ ಪರ ಕೆಮರೂನ್ ಅದ್ಭುತ ಪ್ರದರ್ಶನ

ಡಾಲ್ಫಿನ್ಸ್ ಪರ ಕೆಮರೂನ್ ಅದ್ಭುತ ಪ್ರದರ್ಶನ

ಡಾಲ್ಫಿನ್ಸ್ ಪರ ಆರಂಭಿಕ ಆಟಗಾರ ಕೆಮರೂನ್ ಡೆಲ್ ಪೋರ್ಟ್ ಅದ್ಭುತ ಪ್ರದರ್ಶನ ನೀಡಿದರು. 9 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್ ಬಾರಿಸಿ 34 ರನ್ ಪೇರಿಸಿದರು.ಅವರ ಬ್ಯಾಟ್ ಮುರಿದ ಕ್ಷಣ ಇದು PTI Photo by Shailendra Bhojak

ಸಿಎಸ್ ಕೆ ಉತ್ತಮ ಫೀಲ್ಡಿಂಗ್

ಸಿಎಸ್ ಕೆ ಉತ್ತಮ ಫೀಲ್ಡಿಂಗ್

ಸಿಎಸ್ ಕೆ ಉತ್ತಮ ಫೀಲ್ಡಿಂಗ್ ಪ್ರದರ್ಶನ ನೀಡಿತು. ಬ್ರೆಂಡನ್ ಮೆಕಲಮ್ ಬೌಂಡರಿ ಬಳಿ ಜಿಗಿದಿರುವುದನ್ನು ನೋಡಿ

ಜಡೇಜ ಉತ್ತಮ ಬ್ಯಾಟಿಂಗ್

ಜಡೇಜ ಉತ್ತಮ ಬ್ಯಾಟಿಂಗ್

ಜಡೇಜ ಉತ್ತಮ ಬ್ಯಾಟಿಂಗ್ ಮಾಡಿ 14 ಎಸೆತಗಳಲ್ಲಿ 40 ರನ್ ಚೆಚ್ಚಿದರು ತಲಾ 3 ಸಿಕ್ಸ್, ಬೌಂಡರಿ ಹೊಡೆದರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X