ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಡಗಿನಲ್ಲಿ ಪ್ರಥಮ ಬಾರಿಗೆ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ

By Coovercolly Indresh
In the form of IPL, a cricket tournament to be held in Kodagu

ಕೊಡಗು, ಫೆಬ್ರವರಿ 29: ದಿನನಿತ್ಯ ಸುದ್ದಿಗಳ ಜಂಜಾಟ, ಬೇಗನೆ ಸುದ್ದಿ ನೀಡುವ ಹಪಹಪಿಯೊಂದಿಗೆ ದಿನದ ಬಹಳಷ್ಟು ಸಮಯ ಸುದ್ದಿಯ ಬೇಟೆಯಲ್ಲಿ ನಿರತರಾಗುವ ಪತ್ರಕರ್ತರಿಗೆ ಎಷ್ಟೋ ವೇಳೆ ಮನೆಯ ಕಡೆ ಗಮನ ನೀಡಲೂ ಸಮಯವಿರುವುದಿಲ್ಲ. ಇಂಥ ಅವಸರದ ದಿನಚರಿಯಲ್ಲಿ ಕಳೆದುಹೋಗುವ ಪತ್ರಕರ್ತರಿಗೆ ಮನರಂಜನೆ ನೀಡುವ ಸಲುವಾಗಿ ಕೊಡಗಿನಲ್ಲಿ ಐಪಿಎಲ್ ಮಾದರಿಯ ಕ್ರಿಕೆಟ್‌ ಪಂದ್ಯಾವಳಿ ನಡೆಯುವುದರಲ್ಲಿದೆ.

ಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿ

ಕೇವಲ ಮೂರು ತಾಲ್ಲೂಕುಗಳ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಸುಮಾರು 300 ಮಂದಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್ ತನ್ನ ಸದಸ್ಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುತ್ತಿದೆ.

ಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆ

ಪತ್ರಕರ್ತರ ಕೆಲಸದ ಒತ್ತಡ ಕಡಿಮೆ ಮಾಡುವ, ಮನಸ್ಸಿಗೆ ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಈ ಬಾರಿ ಕ್ರಿಕೆಟ್ ಟೂರ್ನಿ ನಡೆಸಲು ಉದ್ದೇಶಿಸಿದೆ.

ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್

ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್

ಈ ಹಿಂದೆ ಕೊಡವ ಕುಟುಂಬದ, ಹಾಕಿ ಪಂದ್ಯವಳಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದು ಇತಿಹಾಸ. ಈ ಬಾರಿ ಪತ್ರಕರ್ತರಿಗಾಗಿ ಚೊಚ್ಚಲ ಕ್ರಿಕೆಟ್‌ ಟೂರ್ನಮೆಂಟ್‌ ನಡೆಸಲು ಉದ್ದೇಶಿಸಲಾಗಿದೆ. ಕೊಡಗು ಪ್ರೆಸ್‌ ಕ್ಲಬ್‌ ಪ್ರೆಸಿಡೆಂಟ್ ರಮೇಶ್‌ ಕುಟ್ಟಪ್ಪ ಇದರ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ವಿಭಿನ್ನ ಚಿಂತಕ ರಮೇಶ್

ವಿಭಿನ್ನ ಚಿಂತಕ ರಮೇಶ್

ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ, ಪ್ರೆಸ್‌ಕ್ಲಬ್ ಪ್ರೆಸಿಡೆಂಟ್ ಕುಟ್ಟಪ್ಪ ಸದಾ ವಿಭಿನ್ನವಾಗಿ ಚಿಂತಿಸುವವರು. ಹೀಗಾಗಿ ಈ ಬಾರಿ ಪತ್ರಕರ್ತರಿಗಾಗಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ಕುಟ್ಟಪ್ಪ ಮತ್ತು ಗೆಳೆಯರ ಬಳಗ ಉದ್ದೇಶಿಸಿದೆ.

7 ತಂಡಗಳ ಮಧ್ಯೆ ಸ್ಪರ್ಧೆ

7 ತಂಡಗಳ ಮಧ್ಯೆ ಸ್ಪರ್ಧೆ

ಉದ್ದೇಶಿತ ಈ ಟೂರ್ನಿಗಾಗಿ ಸುಮಾರು 92 ಪತ್ರಕರ್ತರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಐಪಿಎಲ್ ಟೂರ್ನಿ ಮಾರ್ಚ್ 29ರಿಂದ ಆರಂಭಗೊಂಡರೆ, ಕೊಡಗು ಪತ್ರಕರ್ತರ ಟೂರ್ನಿ ಮಾರ್ಚ್ 22ರಿಂದ ಆರಂಭಗೊಳ್ಳಲಿದೆ. ಪೈಪೋಟಿಯ ಪ್ರದರ್ಶನ ನೀಡುವುದಕ್ಕಾಗಿ ನೀಡುವುದಕ್ಕಾಗಿ ಒಟ್ಟು 7 ತಂಡಗಳು ತಯಾರಿ ಶುರುಮಾಡಿವೆ.

ಬಿಡ್ ಮೂಲಕ ಆಟಗಾರರ ಆಯ್ಕೆ

ಬಿಡ್ ಮೂಲಕ ಆಟಗಾರರ ಆಯ್ಕೆ

ಚಿತ್ತಾರ ಟೈಗರ್ಸ್, ರೈಸಿಂಗ್ ಸ್ಟಾರ್ ಮಾಲೀಕರು, ಬೆಂಕಿಚೆಂಡು, ಟೀಮ್ ವೀವರ್ಸ್, ಬೆಂಕಿಚೆಂಡು, ಟೀಮ್ ವೀವರ್ಸ್, ಕೂರ್ಗ್ ಮೌಂಟನ್ ಕಾವೇರಿ ಮಕ್ಕಳು, ಅಗ್ನಿ ತಂಡಗಳು ಟೂರ್ನಿಯಲ್ಲಿ ಪರಸ್ಪರ ಕಾದಾಡಲಿವೆ. ಐಪಿಎಲ್ ರೀತಿಯಲ್ಲೇ ಫೆಬ್ರವರಿ 25ರಂದು ಕೊಡಗು ಪ್ರೆಸ್‌ ಕ್ಲಬ್ ಸಭಾಂಗಣದಲ್ಲಿ ತಂಡದ ಮಾಲೀಕರು, ನಾಯಕರು ತಮ್ಮ ನೆಚ್ಚಿನ ಆಟಗಾರರನ್ನು ಬಿಡ್‌ ಮೂಲಕ ಆರಿಸಿದರು.

Story first published: Saturday, February 29, 2020, 16:49 [IST]
Other articles published on Feb 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X