ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐದು ಟೆಸ್ಟ್ ಪಂದ್ಯಗಳಲ್ಲಿ ಆತ 3 ಶತಕಗಳಿಸಲಿದ್ದಾರೆ: ಸುನಿಲ್ ಗವಾಸ್ಕರ್

In this 5-Test series, he can get 3 hundreds: Gavaskar on Indian batsman
ಇಂಗ್ಲೆಂಡ್ ನಲ್ಲಿ ರೋಹಿತ್ 3 ಶತಕ ಸಿಡಿಸೋದು ಕನ್ಫರ್ಮ್ | Oneindia Kannada

ಭಾರತ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಜ್ಜಾಗುತ್ತಿದೆ. ಈ ಐತಿಹಾಸಿಕ ಪಂದ್ಯದ ನಂತರ ಆರು ವಾರಗಳ ಭಾರತ ಇಂಗ್ಲೆಂಡ್ ನೆಲದಲ್ಲಿಯೇ ಇಂಗ್ಲೆಂಡ್ ವಿರುದ್ಧ ಮಹತ್ವದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ಇಂಗ್ಲೆಂಡ್‌ಅನ್ನು ಅದರ ತವರಿನಲ್ಲಿಯೇ ಮಣಿಸುವ ಉತ್ಸಾಹದಲ್ಲಿದೆ.

ಇಂಗ್ಲೆಂಡ್‌ನಲ್ಲಿ ಭಾರತ ಕಳೆದ ಮೂರು ಸರಣಿಯಲ್ಲಿಯೂ ಸೋಲು ಕಂಡಿದೆ. ಆದರೆ 2018ರಲ್ಲಿ ನಡೆದ ಕಳೆದ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಿಸುಮಾರು 600 ರನ್‌ಗಳಿಸಿದ್ದರು. ಇವರಿಗೆ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕೂಡ ಉತ್ತಮ ಸಾಥ್ ನೀಡಿದ್ದರು. ಆದರೆ ಸರಣಿ ಗೆಲುವಿಗೆ ಇದು ಸಾಕಾಗಲಿಲ್ಲ. 1-4 ಅಂತರದಿಂದ ಭಾರತ ಇಂಗ್ಲೆಂಡ್‌ಗೆ ಶರಣಾಗಿತ್ತು.

WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!

ಓರ್ವ ಆಟಗಾರನ ಮೇಲೆ ಹೆಚ್ಚಿನ ವಿಶ್ವಾಸ

ಓರ್ವ ಆಟಗಾರನ ಮೇಲೆ ಹೆಚ್ಚಿನ ವಿಶ್ವಾಸ

ಆದರೆ ಈ ಬಾರಿ ಭಾರತದ ಪ್ರದರ್ಶನ ಉತ್ತಮವಾಗಿರುವ ಭರವಸೆಯನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಓರ್ವ ಬ್ಯಾಟ್ಸ್‌ಮನ್ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕ ಕಾರಣವನ್ನೂ ಅವರು ನೀಡಿದ್ದಾರೆ.

"ಇಂಗ್ಲೆಂಡ್ ಸರಣಿಯಲ್ಲಿ ರೋಹಿತ್ 3 ಶತಕ ಬಾರಿಸಲಿದ್ದಾರೆ"

ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಬಗ್ಗೆ ದೊಡ್ಡ ಭರವಸೆಯನ್ನು ವ್ಯಕ್ತಡಿಸಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ರೋಹಿತ್ ಶರ್ಮಾ ಸ್ಮರಣೀಯ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ 3 ಶತಕಗಳನ್ನು ಬಾರಿಸಲಿದ್ದಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಹೊಡೆತಗಳ ಆಯ್ಕೆಯನ್ನು ಉತ್ತಮಪಡಿಸಿಕೊಳ್ಳಬೇಕು

ಹೊಡೆತಗಳ ಆಯ್ಕೆಯನ್ನು ಉತ್ತಮಪಡಿಸಿಕೊಳ್ಳಬೇಕು

"ರೋಹಿತ್ ಶರ್ಮಾ ಪ್ರತಿ ಬಾರಿಯೂ ಸ್ಪೋಟಕ ಆಟಕ್ಕೆ ಮುಂದಾಗುತ್ತಾರೆ. ಇಂತಾ ಸಂದರ್ಭದಲ್ಲಿ ಕೆಲ ಬಾರಿ ಹೊಡೆತದ ಆಯ್ಕೆಗಳಲ್ಲಿ ಎಡವಿ ವಿಕೆಟ್ ಕಳೆದುಕೊಳ್ಳುತ್ತಾರೆ. ಅವುಗಳನ್ನು ಸರಿಪಡಿಸಿಕೊಂಡರೆ ಆತ ಐದು ಪಂದ್ಯಗಳಲ್ಲಿ ಕನಿಷ್ಟ ಮೂರು ಶತಕಗಳನ್ನು ಗಳಿಸಬಲ್ಲ" ಎಂದು ಸುನಿಲ್ ಗವಾಸ್ಕರ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ನಲ್ಲಿ ರೋಹಿತ್ ಅಬ್ಬರ

ವಿಶ್ವಕಪ್‌ನಲ್ಲಿ ರೋಹಿತ್ ಅಬ್ಬರ

2019ರ ಏಕದಿನ ವಿಶ್ವಕಪ್ ಇಂಗ್ಲೆಂಡ್ ನೆಲದಲ್ಲಿಯೇ ನಡೆದಿತ್ತು. ಈ ಸರಣಿಯಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆಯನ್ನು ಬರೆದಿದ್ದರು. ಒಂದೇ ಟೂರ್ನಿಯಲ್ಲಿ ರೋಹಿತ್ 5 ಶತಕ ಸಿಡಿಸಿದ್ದರು. ಹೀಗಾಗಿ ಇಂಗ್ಲೆಂಡ್ ನೆಲದಲ್ಲಿ ನಡೆಯಲಿರುವ ಈ ಸರಣಿಯಿಂದಾಗಿ ರೋಹಿತ್ ಶರ್ಮಾ ಬ್ಯಾಟಿಂಗ್‌ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ.

Story first published: Friday, June 18, 2021, 11:05 [IST]
Other articles published on Jun 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X