ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ನಡೆಯುತ್ತಿಲ್ಲ!

In this season, No ranji trophy for first time in 87 years

ನವದೆಹಲಿ: ದೇಸಿ ಕ್ರಿಕೆಟ್‌ನಲ್ಲಿ ಹಿನ್ನಡೆಯ ಸಂಗತಿಯೊಂದು ಕೇಳಿಬಂದಿದೆ. ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅತ್ಯಂತ ಪ್ರಮುಖ ಟೂರ್ನಿ ಎನಿಸಿದ್ದ ರಣಜಿ ಟ್ರೋಫಿ ಈ ಬಾರಿ ನಡೆಯುತ್ತಿಲ್ಲ. ರಣಜಿ ಟ್ರೋಫಿಯನ್ನು ನಡೆಸದಿರಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ನಿರ್ಧರಿಸಿದೆ.

ಆಸೀಸ್ ಟೆಸ್ಟ್ ಸರಣಿ ಗೆಲುವಿನ ಕೇಕ್ ಕಟ್ ಮಾಡಲಾರೆ ಎಂದ ರಹಾನೆ!ಆಸೀಸ್ ಟೆಸ್ಟ್ ಸರಣಿ ಗೆಲುವಿನ ಕೇಕ್ ಕಟ್ ಮಾಡಲಾರೆ ಎಂದ ರಹಾನೆ!

ಈ ಬಾರಿ ಅಂದರೆ 2021-22ರ ಸೀಸನ್‌ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ, ವಿಜಯ್ ಹಜಾರೆ ಟೂರ್ನಿ ಮತ್ತು ವಿನೂ ಮಂಕಡ್ ಟ್ರೋಫಿ ಟೂರ್ನಿಗಳು ನಡೆಯಲಿವೆ. ಆದರೆ ರಣಜಿ ಟ್ರೋಫಿ ನಡೆಯುತ್ತಿಲ್ಲ. 87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಟೂರ್ನಿ ನಡೆಯುತ್ತಿಲ್ಲ.

ಬಿಸಿಸಿಐ ಈ ಸಂಬಂಧ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗಳಿಗೆ ಪತ್ರ ಬರೆದಿದ್ದು, ರಣಜಿ ಬದಲು ವಿಜಯ್ ಹಜಾರೆ, ಅಂಡರ್ 19 ವಿಭಾಗದವರಿಗೆ ವಿನೂ ಮಂಕಡ್ ಏಕದಿನ ಕ್ರಿಕೆಟ್ ಟೂರ್ನಿ ಮತ್ತು ರಾಷ್ಟ್ರೀಯ ತಂಡದ ಆಟಗಾರ್ತಿಯರಿಗೆ 50 ಓವರ್‌ಗಳ ಟೂರ್ನಿ ನಡೆಸುವುದಾಗಿ ಹೇಳಿದೆ. ಇದಕ್ಕೆ ಸ್ಟೇಟ್ ಅಸೋಸಿಯೇಶನ್‌ಗಳು ಸಮ್ಮತಿಸಿದರೆ ಅದರಂತೆ ಟೂರ್ನಿಗಳು ನಡೆಯಲಿವೆ.

ಭಾರತೀಯ 5 ಭಾಷೆಗಳಲ್ಲಿ ಭಾರತ vs ಇಂಗ್ಲೆಂಡ್ ಸರಣಿ ನೇರಪ್ರಸಾರಭಾರತೀಯ 5 ಭಾಷೆಗಳಲ್ಲಿ ಭಾರತ vs ಇಂಗ್ಲೆಂಡ್ ಸರಣಿ ನೇರಪ್ರಸಾರ

ದೇಶಿ ಕ್ರಿಕೆಟ್ ಪಂದ್ಯಗಳಿಗೆ ಪ್ರತೀ ಪಂದ್ಯಗಳಿಗೆ ಗರಿಷ್ಠ 1.5 ಲಕ್ಷ ರೂ. ನೀಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಯೋಚಿಸುತ್ತಿದ್ದಾರೆ. ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ರಣಜಿಗೆ ಬಯೋ ಬಬಲ್ ಸೇರಿ ಹೆಚ್ಚು ಖರ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. ಹೀಗಾಗಿ ಟೂರ್ನಿ ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Story first published: Saturday, January 30, 2021, 16:03 [IST]
Other articles published on Jan 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X