ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲವೂ ಅಂದುಕೊಂಡಂತಿದ್ದರೆ ಇಡೀ ಜಗತ್ತಿನ ಕಣ್ಣು ಇಂದು ಟೋಕಿಯೋ ಮೇಲಿರುತ್ತಿತ್ತು!

In World Without Covid Today Worlds Eye Would Be On Tokyo

ವಿಶ್ವವನ್ನು ಕೊರೊನಾ ವೈರಸ್ ಎಂಬ ಮಹಾಮಾರಿ ತಲ್ಲಣಗೊಳಿಸಿದೆ. ಇಡೀ ಜಗತ್ತಿನ ಯೋಚನೆ ಯೋಜನೆಗಳಲ್ಲಿ ಅಕ್ಷರಶಃ ಬುಡಮೇಲು ಮಾಡಿದೆ. ಕ್ರೀಡಾ ಕ್ಷೇತ್ರಕ್ಕೂ ಇದು ಇನ್ನಿಲ್ಲದಷ್ಟು ಹಿನ್ನೆಡೆಯನ್ನುಂಟು ಮಾಡಿದೆ. ಒಂದು ವೇಳೆ ಈ ಮಹಾಮಾರಿಯ ಕಾಟವಿಲ್ಲದಿರುತ್ತಿದ್ದರೆ ಇಂದು ಜಪಾನ್‌ನ ಟೋಕಿಯೋ ನಗರದ ಮೇಲೆ ಇಡೀ ವಿಶ್ವದ ಕಣ್ಣು ಸಂಭ್ರಮದಿಂದ ನೋಡುತ್ತಿತ್ತು.

ಹೌದು, ಕ್ರೀಡಾ ಲೋಕದ ಅತ್ಯಂತ ದೊಡ್ಡ ಕೂಟ ಒಲಿಂಪಿಕ್ಸ್ ಎಲ್ಲವೂ ಸರಿಯಿದ್ದರೆ ಇಂದಿನಿಂದ ಆರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದಾಗು ಈ ಮಹತ್ವದ ಕ್ರೀಡಾಕೂಟ ಒಂದು ವರ್ಷ ಮುಂದಕ್ಕೆ ಹೋಗಿದ್ದು ಮುಂದಿನ ವರ್ಷದ ಜುಲೈ 23ರಿಂದ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!

ಇನ್ನು ಈ ಮಹತ್ವದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕಿದ್ದ ಭಾರತೀಯ ಕ್ರಿಡಾಪಟುಗಳು ಈ ಕೂಟ ಮುಂದಕ್ಕೆ ಹೋಗಿರುವುದರಿಂದ ತಮ್ಮ ತಮ್ಮ ಊರುಗಳಲ್ಲಿ ತಮ್ಮ ಕಾರ್ಯಗಳಲ್ಲಿ ಮಗ್ನರಾಗದ್ದಾರೆ. ಬಾಕ್ಸರ್ ಲೋವ್ಲಿನಾ ಬೋರ್ಗೋಹೈನ್ ಅಸ್ಸಾಮ್‌ನ ಗೊಲಘಾಟ್‌ನ ತಮ್ಮ ಭತ್ತದ ಗದ್ದೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯ ಇತ್ತೀಚೆಗೆ ವೈರಲ್ ಆಗಿತ್ತು.

ಮತ್ತೊಂದೆಡೆ ಛಂಡೀಗಡದಲ್ಲಿ ಶೂಟರ್ ಅಂಜುಮ್ ಮೌದ್ಗಿಲ್ ರೈಫಲ್ ಬದಿಗಿಟ್ಟು ಪೈಂಡ್ ಬ್ರಷ್ ಹಿಡಿದಿದ್ದರೆ ಇತ್ತ ಸ್ವಿಮ್ಮರ್ ನಟರಾಜ್ ಬೆಂಗಳೂರಿನಲ್ಲಿ ಗಿಟಾರ್ ನುಡಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಬ್ಯಾಡ್ಮಿಂಟನ್ ಡಬಲ್ಸ್ ಖ್ಯಾತಿಯ ಸಾತ್ವಿಕ್ ಸಾಯ್‌ರಾಜ್ ರಂಕಿರೆಡ್ಡಿ ಬ್ಯಾಡ್ಮಿಂಟನ್ ರಾಕೆಟ್ ಬಿಟ್ಟು ಸೊಳ್ಳೆ ಬ್ಯಾಟ್ ಹಿಡಿದ ಚಿತ್ರ ಸಾಕಷ್ಟು ವೈರಲ್ ಆಗಿತ್ತು.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ಕುತೂಹಲ ಮೂಡಿಸಿದೆ ಅಂತಿಮ ಕದನಇಂಗ್ಲೆಂಡ್ vs ವೆಸ್ಟ್ ಇಂಡೀಸ್: ಕುತೂಹಲ ಮೂಡಿಸಿದೆ ಅಂತಿಮ ಕದನ

ಕೊರೊನಾ ವೈರಸ್‌ನಿಂದಾಗಿ ಒಲಿಂಪಿಕ್ಸ್ ಮುಂದುಡಿರುವುದರಿಂದ ಹೀಗೆ ಕ್ರಿಡಾಪಟುಗಳು ತಮ್ಮ ಮನೆಗಳಲ್ಲಿ ಕಾಲಕಳೆಯುತ್ತಿದ್ದಾರೆ. ಸದ್ಯ ಅಭ್ಯಾಸಕ್ಕೆ ಅವಕಾಶ ದೊರೆತಿರುವುದರಿಂದ ಮುಂದಿನ ವರ್ಷಕ್ಕೆ ಮುಂದೂಡಿರುವ ಒಲಿಂಪಿಕ್ಸ್‌ಗೆ ಸಿದ್ಧರಾಗಲು ಎಲ್ಲಾ ಕ್ರೀಡಾಪಟುಗಳು ಅಣಿಯಾಗುತ್ತಿದ್ದಾರೆ.

Story first published: Friday, July 24, 2020, 15:17 [IST]
Other articles published on Jul 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X