ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡೋ-ಆಸಿಸ್ 1st ODI: ಸಂಭಾವ್ಯ ತಂಡ, ನೇರಪ್ರಸಾರ, ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್

Ind vs Aus 2020, 1st ODI: Preview, probable 11, live streaming, weather forecast and pitch report

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಆರಂಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಮೊದಲ ಏಕದಿನ ಪಂದ್ಯದಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಆಟಗಾರರ ಅದೃಷ್ಟ ಈ ಬಾರಿ ಯಾವ ರೀತಿ ಇದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ಸರಣಿಯಲ್ಲಿ ಎರಡೂ ತಂಡಗಳು ತಮ್ಮ ಸಂಪೂರ್ಣ ಬಲದೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಮಾತ್ರ ಈ ಬಾರಿಯ ತಂಡದಲ್ಲಿಲ್ಲ. ಆಸ್ಟ್ರೇಲಿಯಾ ತಂಡವನ್ನು ಆರೋನ್ ಫಿಂಚ್ ಮುನ್ನಡೆಸುತ್ತಿದ್ದು ಪ್ಯಾಟ್ ಕಮ್ಮಿನ್ಸ್ ಉಪನಾಯಕನಾಗಿದ್ದಾರೆ. ಟೀಮ್ ಇಂಡಿಯಾದ ನಾಯಕನಾಗಿ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದು ಕೆಎಲ್ ರಾಹುಲ್ ಹೆಗಲಿಗೆ ಉಪನಾಯಕನ ಜವಾಬ್ಧಾರಿ ಬಿದ್ದಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಧ್ಯಮ ಹಕ್ಕುಗಳನ್ನು ಪಡೆದ ಸ್ಟಾರ್ ಇಂಡಿಯಾದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಧ್ಯಮ ಹಕ್ಕುಗಳನ್ನು ಪಡೆದ ಸ್ಟಾರ್ ಇಂಡಿಯಾ

ಆಸ್ಟ್ರೇಲಿಯಾ ಐಪಿಎಲ್‌ಗೂ ಮುನ್ನ ಇಂಗ್ಲೆಂಡ್ ವಿರುದ್ಧ ತನ್ನ ಕೊನೆಯ ಸರಣಿಯನ್ನು ಆಡಿತ್ತು. ಆದರೆ ಭಾರತ ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಲ್ಲ. ಆದರೆ ಐಪಿಎಲ್‌ನಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದು ಆಟಗಾರರ ಹುಮ್ಮಸ್ಸು ಹೆಚ್ಚಿಸಿದೆ.

ಪಂದ್ಯದ ಮಾಹಿತಿ

ಪಂದ್ಯದ ಮಾಹಿತಿ

ಪಂದ್ಯದ ದಿನಾಂಕ: ನವೆಂಬರ್ 27, 2020 ಶುಕ್ರವಾರ
ಸಮಯ: ಭಾರತೀಯ ಕಾಲಮಾನ ಬೆಳಗ್ಗೆ 9:10
ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ

ಹವಾಮಾನ ವರದಿ

ಹವಾಮಾನ ವರದಿ

ಪಂದ್ಯ ನಡೆಯುವ ದಿನ ಸಂಪೂರ್ಣವಾಗಿ ಬಿಸಿಲಿನ ವಾತಾವರಣವಿರುವ ನಿರೀಕ್ಷೆಯಿದೆ. ಪಂದ್ಯದ ಉದ್ದಕ್ಕೂ 24 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಇರುವ ಸಂಭವ ಇದೆ. ಆದರೆ ಮಳೆ ಸುರಿಯುವ ಸಣ್ಣ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ.

ಎಸ್‌ಸಿಜಿ ಪಿಚ್ ವರದಿ

ಎಸ್‌ಸಿಜಿ ಪಿಚ್ ವರದಿ

ಎಸ್‌ಸಿಜಿ ಮೈದಾನ ಸಾಮಾನ್ಯವಾಗಿ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ ಇಬ್ಬರಿಗೂ ಸಹಕಾರಿಯಾಗುವ ರೀತಿ ವರ್ತಿಸುತ್ತದೆ. ಸ್ಪಿನ್ನ ಬೌಲರ್‌ಗಳಿಗಿಂತ ವೇಗಿಗಳು ಹೆಚ್ಚಿನ ಪರಿಣಾಮಕಾರಿಯಾಗಿರುವ ನಿರೀಕ್ಷೆಯಿದೆ. ಆಟಗಾರರು ಉತ್ತಮ ಹೊಡೆತಗಳನ್ನು ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಅಗತ್ಯವಿದೆ. 260-270 ಉತ್ತಮ ಮೊತ್ತವಾಗಿರಲಿದೆ.

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೈನ್, ಮಾರ್ಕಸ್ ಸ್ಟೊಯ್ನಿಸ್, ಗ್ಲೆನ್ ಮ್ಯಾಕ್ಸ್ ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಆಡಮ್ ಜಂಪಾ.

ಟೀಮ್ ಇಂಡಿಯಾ ಸಂಭಾವ್ಯ ತಂಡ

ಟೀಮ್ ಇಂಡಿಯಾ ಸಂಭಾವ್ಯ ತಂಡ

ಮಯಾಂಕ್ ಅಗರ್ವಾಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮತ್ತು ಜಸ್ಪ್ರೀತ್ ಬೂಮ್ರಾ.

ನೇರ ಪ್ರಸಾರ

ನೇರ ಪ್ರಸಾರ

ಆಸ್ಟ್ರೇಲಿಯಾ ವಿರುದ್ಧದ ಈ ಪಮದ್ಯದ ನೇರಪ್ರಸಾರದ ಹಕ್ಕನ್ನು ಸೋನಿ ನೆಟ್‌ವರ್ಕ್ ಹೊಂದಿದೆ. ಸೋನಿ ಸಿಕ್ಸ್, ಸೋನಿ ಟೆನ್ 1 ಹಾಗೂ ಸೋನಿ ಟೆನ್ 3ಯಲ್ಲಿ ಈ ಪಂದ್ಯಗಳು ನೇರಪ್ರಸಾರವಾಗಲಿದೆ. 'ಸೋನಿ ಲಿವ್'ನಲ್ಲೂ ಕೂಡ ಪಂದ್ಯದ ನೆರಪ್ರಸಾರವನ್ನು ವೀಕ್ಷಿಸಲು ಸಾಧ್ಯವಿದೆ

Story first published: Thursday, November 26, 2020, 14:09 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X