ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ರನ್ ಹಸಿವಿದೆ, ಲಯಕ್ಕೆ ಮರಳಿದ್ದಾರೆ: ಸಂಜಯ್ ಬಂಗಾರ್

IND vs AUS 2022: Sanjay Bangar Noted That Virat Kohli In Very Good Form At Moment

ಏಷ್ಯಾಕಪ್‌ 2022ರಲ್ಲಿ ಶತಕ ದಾಖಲಿಸುವ ಮೂಲಕ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ರನ್ ಗಳಿಸಲು ವಿಫರಾದ ನಂತರ, ಸರಣಿ ನಿರ್ಣಾಯಕ ಪಂದ್ಯದಲ್ಲಿ ತಮ್ಮ 33ನೇ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟಿ20 ವಿಶ್ವಕಪ್‌ನಲ್ಲಿ ಈತನೇ ಅಪಾಯಕಾರಿ; ಭಾರತೀಯ ಬ್ಯಾಟರ್ ಬಗ್ಗೆ ಆಸೀಸ್ ಮುಖ್ಯ ಕೋಚ್ ಹೇಳಿಕೆಟಿ20 ವಿಶ್ವಕಪ್‌ನಲ್ಲಿ ಈತನೇ ಅಪಾಯಕಾರಿ; ಭಾರತೀಯ ಬ್ಯಾಟರ್ ಬಗ್ಗೆ ಆಸೀಸ್ ಮುಖ್ಯ ಕೋಚ್ ಹೇಳಿಕೆ

ವಿರಾಟ್ ಕೊಹ್ಲಿ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ಭಾರತ ತಂಡದ ಮಾಜಿ ನಾಯಕ ಭಾನುವಾರ ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿ ಜಯ ಸಾಧಿಸಲು 48 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ತಾವು ಮುಖ್ಯಪಾತ್ರ ವಹಿಸುವ ಸೂಚನೆ ನೀಡಿದ್ದಾರೆ.

2022 ರ ಆರಂಭದಲ್ಲಿ ವಿರಾಟ್ ಕೊಹ್ಲಿ ಕೆಟ್ಟ ಸಮಯವನ್ನು ಹೊಂದಿದ್ದರು. ರನ್ ಗಳಿಸಲು ಪರದಾಡಿದ್ದ ಕೊಹ್ಲಿ ಟೀಕೆಗೆ ಗುರಿಯಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ, ನಂತರ ಇಂಗ್ಲೆಂಡ್ ಪ್ರವಾಸದಲ್ಲೂ ಕೂಡ ಮೂರು ಮಾದರಿ ಕ್ರಿಕೆಟ್‌ನಲ್ಲಿ ರನ್ ಗಳಿಸಲು ವಿಫಲರಾದರು. ನಂತರ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಕ್ಕಾಗಿ ಕೊಹ್ಲಿಗೆ ವಿಶ್ರಾಂತಿ ನೀಡಲಾಯಿತು. ವಿಶ್ರಾಂತಿ ಬಳಿಕ ಏಷ್ಯಾಕಪ್‌ನಲ್ಲಿ ತಂಡಕ್ಕೆ ವಾಪಸಾದ ಕೊಹ್ಲಿ ಉತ್ತಮ ರನ್ ಗಳಿಸಿದರು. ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸಿ ಮೂರು ವರ್ಷಗಳ ಶತಕದ ಬರವನ್ನು ನೀಗಿಸಿಕೊಂಡರು.

ಕೊಹ್ಲಿ ತಮ್ಮ ಲಯಕ್ಕೆ ಮರಳಿದ್ದಾರೆ

ಕೊಹ್ಲಿ ತಮ್ಮ ಲಯಕ್ಕೆ ಮರಳಿದ್ದಾರೆ

ವಿರಾಟ್ ಕೊಹ್ಲಿ ಈ ಸಮಯದಲ್ಲಿ ಎಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

"ವಿರಾಟ್ ಕೊಹ್ಲಿ ಚಾಂಪಿಯನ್ ಬ್ಯಾಟರ್. ಭಾರತಕ್ಕಾಗಿ ಇಷ್ಟು ದೀರ್ಘಾವಧಿಯವರೆಗೆ ರನ್ ಗಳಿಸಿದ್ದಾರೆ. ತಮ್ಮ ಆಟದ ದೊಡ್ಡ ಸಮಯವನ್ನು ಆನಂದಿಸುವ ಆ ಹಂತದಲ್ಲಿದ್ದಾರೆ ಎಂದು ಅವರಿಗೆ ತಿಳಿದಿದೆ. ಲಯ ಮರಳಿದೆ, ಹಸಿವು ಮರಳಿದೆ ಎಂದು ಅವರಿಗೆ ತಿಳಿದಿದೆ. ಅವರು ಮೈದಾನದಲ್ಲಿ ಪ್ರದರ್ಶಿಸುತ್ತಿರುವ ದೇಹ ಭಾಷೆಯೊಂದಿಗೆ ಅದನ್ನು ನೋಡಬಹುದು." ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

Ind Vs Aus T20: ಸರಣಿಯಲ್ಲಿ ಈತನ ಆಟಕ್ಕೆ ಆಸ್ಟ್ರೇಲಿಯಾ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮೆಚ್ಚುಗೆ

ಒತ್ತಡದಿಂದ ಹೊರಬಂದು ಬ್ಯಾಟಿಂಗ್

ಒತ್ತಡದಿಂದ ಹೊರಬಂದು ಬ್ಯಾಟಿಂಗ್

"ಅದನ್ನು ನೀವು ಅವನಲ್ಲಿ ನೋಡಲು ಬಯಸುತ್ತೀರಿ, ಆನಂದಿಸುತ್ತಿದ್ದೀರಿ. ಅವನಿಗೆ ಒತ್ತಡದ ಹಂತವಿತ್ತು. ಆದರೆ ವಿರಾಮದ ನಂತರ, ಆನಂದದ ಪ್ರಜ್ಞೆ ಮರಳಿದೆ, ಕ್ರಿಕೆಟ್ ಚೆಂಡನ್ನು ಹೊಡೆಯುವ ಭಾವನೆ ಅವನ ಆಟದಲ್ಲಿ ಮರಳಿದೆ."

ಸಂಜಯ್ ಬಂಗಾರ್ ರಾಷ್ಟ್ರೀಯ ತಂಡದೊಂದಿಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದ ಅವಧಿಯಯಲ್ಲಿ ಅವರ ಜೊತೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ಬಂಗಾರ್ ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು

ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಮುಂದುವರೆಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ತಂಡ ಹೆಚ್ಚು ಸಮತೋಲಿತವಾಗಿ ಕಾಣುತ್ತದೆ ಎಂದು ಅವರು ಹೇಳಿದರು.

"ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ನನ್ನ ಪ್ರಕಾ ಇದರಲ್ಲಿ ಚರ್ಚೆ ಮಾಡಲು ಏನೂ ಇಲ್ಲ, ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭಿಕ ಜೊತೆಯಾಟವನ್ನು ಪಡೆದರೆ. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಮುಂದುವರೆಸುತ್ತಾರೆ" ಎಂದು ಹೇಳಿದರು.

ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸ

ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸುವ ಉತ್ಸಾಹದಲ್ಲಿದ್ದಾರೆ. ಸೆಪ್ಟೆಂಬರ್ 28ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಪಂದ್ಯ ತಿರುವನಂತಪುರದಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಅಕ್ಟೋಬರ್ 2 ರಂದು ಗುವಾಹಟಿ ಮತ್ತು ಮೂರನೇ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ನಡೆಯಲಿದೆ.

ಭಾರತ ತಂಡಕ್ಕೆ ವಿಶ್ವಕಪ್‌ಗೂ ಮುನ್ನ ಕೊನೆಯದಾಗಿ ಆಡುತ್ತಿರುವ ಸರಣಿ ಇದಾಗಿದ್ದು, ಈ ಮೂರು ಪಂದ್ಯಗಳು ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ.

Story first published: Monday, September 26, 2022, 20:39 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X