ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ, ಟೆಸ್ಟ್: ಭಾರತಕ್ಕೆ ಮತ್ತೆ ಗಾಯದ ಭೀತಿ

Ind vs Aus 2nd Test: Umesh Yadav has gone for scans after limping in the second session of day three

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಪ್ರವಾಸ ಸರಣಿ ಆಡುತ್ತಿರುವ ಭಾರತಕ್ಕೆ ಮತ್ತೊಂದು ಗಾಯದ ಭೀತಿ ಎದುರಾಗಿದೆ. ಭಾರತ ಟೆಸ್ಟ್ ತಂಡದಲ್ಲಿದ್ದ ವೇಗಿ ಉಮೇಶ್ ಯಾದವ್ ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದಾರೆ. ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಯಾದವ್ ಗಾಯಕ್ಕೀಡಾಗಿದ್ದಾರೆ.

ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!

ಸೋಮವಾರ ಮೂರನೇ ದಿನದಾಟ ಆಡುತ್ತಿದ್ದಾಗ 4ನೇ ಓವರ್‌ ಎಸೆಯುತ್ತಿದ್ದ ಯಾದವ್, ಕಾಲಿನ ಹಿಂಭಾಗದ ಸ್ನಾಯು ಸೆಳೆತಕ್ಕೀಡಾಗಿ ಮೈದಾನದಿಂದ ಹೊರ ನಡೆದರು. ಆ ಬಳಿಕ ವೇಗಿ ಮೊಹಮ್ಮದ್ ಸಿರಾಜ್ ಅವರು ಯಾದವ್ ಅವರ ಮೂರು ಎಸೆತಗಳನ್ನು ಪೂರ್ಣಗೊಳಿಸಿದರು.

ಭಾರತ vs ಆಸ್ಟ್ರೇಲಿಯಾ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
48441

ಬೌಲಿಂಗ್‌ ಮಾಡುತ್ತಿದ್ದಾಗ ಮಧ್ಯದಲ್ಲಿ ಉಮೇಶ್ ತನಗೆ ಕಾಲಿನ ಹಿಂಭಾಗದ ಸ್ನಾಯು (ಕಾಫ್) ನೋವಾಗುತ್ತಿರುವುದಾಗಿ ದೂರಿತ್ತರು. ಹೀಗಾಗಿ ಅವರನ್ನು ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಉಪಚರಿಸಿದರು. ನಂತರ ಯಾದವ್ ಅವರನ್ನು ಸ್ಕ್ಯಾನಿಂಗ್‌ಗಾಗಿ ಕರೆದೊಯ್ಯಲಾಗಿದೆ. ಮುಂದಿನ ಪಂದ್ಯದಲ್ಲಿ ಯಾದವ್ ಆಡುತ್ತಾರೋ ಇಲ್ಲವೋ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

3.3 ಓವರ್‌ ಎಸೆದಿದ್ದ ಯಾದವ್ 1 ವಿಕೆಟ್ ಪಡೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 72.3 ಓವರ್‌ಗೆ 195 ರನ್ ಬಾರಿಸಿದ್ದರೆ, ನಾಯಕ ಅಜಿಂಕ್ಯ ರಹಾನೆ ಶತಕದೊಂದಿಗೆ ಭಾರತ 115.1 ಓವರ್‌ಗೆ 326 ರನ್ ಬಾರಿಸಿ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಈಗ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

Story first published: Monday, December 28, 2020, 14:18 [IST]
Other articles published on Dec 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X