IND vs AUS 3rd T20: ಭಾರತ vs ಆಸ್ಟ್ರೇಲಿಯ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು

ಭಾನುವಾರ (ಸೆಪ್ಟೆಂಬರ್ 25)ರಂದು ಹೈದರಾಬಾದ್‌ನಲ್ಲಿ ಆತಿಥೇಯ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸರಣಿ ನಿರ್ಣಾಯಕ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ಪ್ರಮುಖ ಬೌಲರ್‌ಗಳಾದ ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್ ತಮ್ಮ ಅತ್ಯುತ್ತಮ ಬೌಲಿಂಗ್‌ಗೆ ಮರಳುತ್ತಾರೆ ಎಂದು ಭಾರತ ಆಶಿಸುತ್ತಿದೆ.

ಎಂಟು-ಓವರ್‌ಗಳ ಎರಡನೇ ಪಂದ್ಯದಲ್ಲಿ ಸಮಗ್ರ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಲು ಭಾರತವು ನಾಗ್ಪುರದಲ್ಲಿ ಅಂತರವನ್ನು ಸಮಬಲಗೊಳಿಸಲು ಸಾಧ್ಯವಾಯಿತು. ಆದರೆ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಸರಣಿಯನ್ನು ಜಯಿಸಲು ಭಾರತಕ್ಕೆ ಅವರ ಬೌಲರ್‌ಗಳು, ವಿಶೇಷವಾಗಿ ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್ ಉತ್ತಮ ಪ್ರದರ್ಶನದ ಅಗತ್ಯವಿದೆ.

IND vs AUS: ನಿರ್ಣಾಯಕ 3ನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತದ ಆಡುವ 11ರ ಬಳಗ; ಪಂತ್ ಬದಲಿಗೆ ಭುವಿ?IND vs AUS: ನಿರ್ಣಾಯಕ 3ನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತದ ಆಡುವ 11ರ ಬಳಗ; ಪಂತ್ ಬದಲಿಗೆ ಭುವಿ?

ಭಾರತವು ಎರಡನೇ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದಿತ್ತು, ಅಕ್ಷರ್ ಪಟೇಲ್ ಎರಡು ಓವರ್‌ಗಳ ಅದ್ಭುತ ಸ್ಪೆಲ್‌ನಲ್ಲಿ ಒಂದೆರಡು ವಿಕೆಟ್‌ಗಳನ್ನು ಪಡೆದುಕೊಂಡರು, ಆದರೆ ಡೆತ್ ಓವರ್‌ಗಳಲ್ಲಿ ಭಾರತದ ಬೌಲರ್‌ಗಳು ಹೆಣಗಾಡುತ್ತಿದ್ದಾರೆ.

ಡೆತ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನ

ಡೆತ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನ

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಜವಾಬ್ದಾರಿಯನ್ನು ಹೊರುವುದು ಖಚಿತವಾದರೂ, ಡೆತ್ ಓವರ್‌ಗಳಲ್ಲಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನವು ನಿಜವಾದ ಕಳವಳಕಾರಿಯಾಗಿದೆ. ಅವರು ಏಷ್ಯಾ ಕಪ್‌ನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರು ಮತ್ತು ಗೆಲ್ಲುವ ಪಂದ್ಯವನ್ನು ಹೀನಾಯವಾಗಿ ಸೋಲಬೇಕಾಯಿತು.

ನಂತರವ ಭುವನೇಶ್ವರ್ ಕುಮಾರ್ ಅವರನ್ನು ಎರಡನೇ ಟಿ20 ಪಂದ್ಯದಿಂದ ಕೈಬಿಡಲಾಯಿತು. ಏಕೆಂದರೆ ಎಂಟು ಓವರ್‌ಗಳ ಪಂದ್ಯದಲ್ಲಿ ಕೇವಲ ನಾಲ್ಕು ಬೌಲರ್‌ಗಳು ಮಾತ್ರ ಬೇಕು ಎಂದು ನಾಯಕ ರೋಹಿತ್ ಶರ್ಮಾ ಭಾವಿಸಿದ್ದರು. ಭುವನೇಶ್ವರ್ ಅವರ ಫಾರ್ಮ್ ತಂಡವನ್ನು ಚಿಂತೆಗೀಡು ಮಾಡಿದೆ. ಗಾಯದಿಂದ ಹಿಂದಿರುಗಿರುವ ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಕೂಡ ಪ್ರಭಾವಿ ಬೌಲಿಂಗ್ ಮಾಡುತ್ತಿಲ್ಲ ಮತ್ತು ಬಹುಶಃ ಅವರ ಲಯವನ್ನು ಕಂಡುಹಿಡಿಯಲು ಇನ್ನೂ ಒಂದೆರಡು ಪಂದ್ಯಗಳ ಅಗತ್ಯವಿದೆ.

ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಬ್ಬರಿಸಬೇಕಿದೆ

ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಬ್ಬರಿಸಬೇಕಿದೆ

ಬಲಗೈ ಮಧ್ಯಮ ವೇಗಿ ಹರ್ಷಲ್ ಪಟೇಲ್ ಪರಿಣಾಮಕಾರಿಯಾಗಲು ತನ್ನ ಬೌಲಿಂಗ್‌ನಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕಿದೆ. ಈ ಸರಣಿಯಲ್ಲಿ ತನ್ನ ಆರು ಓವರ್‌ಗಳಲ್ಲಿ 13.50 ಎಕಾನಮಿ ದರದಲ್ಲಿ 81 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾನೆ ಮತ್ತು ಸರಣಿಯಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ, ವಿಕೆಟ್ ರಹಿತರಾಗಿ ಉಳಿದಿದ್ದಾರೆ.

ಭಾರತವು ಮಧ್ಯಮ ಓವರ್‌ಗಳಲ್ಲಿ ತಮ್ಮ ಸ್ಪಿನ್ನರ್‌ಗಳ ಮೇಲೆ ಅವಲಂಬಿತವಾಗಿದೆ ಮತ್ತು ಅಕ್ಷರ್ ಪಟೇಲ್ ಉತ್ತಮ ಸ್ಪೆಲ್ ಮಾಡುತ್ತಿದ್ದರೂ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಎಡವಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರನ್ನೊಳಗೊಂಡ ಅಗ್ರ ಕ್ರಮಾಂಕವು ಹೆಚ್ಚು ಸ್ಥಿರವಾಗಿರಬೇಕು. ಇದೇ ಸರಣಿಯಲ್ಲಿ ಈ ಮೂವರು ಒಂದಲ್ಲ ಒಂದು ಪಂದ್ಯದಲ್ಲಿ ಕೈಕೊಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ಕೆಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ನೀಡಿದರು.

ಭಾರತ vs ಆಸ್ಟ್ರೇಲಿಯ ಫ್ಯಾಂಟಸಿ ಡ್ರೀಮ್ ತಂಡ ಹೀಗಿರಲಿದೆ

ಭಾರತ vs ಆಸ್ಟ್ರೇಲಿಯ ಫ್ಯಾಂಟಸಿ ಡ್ರೀಮ್ ತಂಡ ಹೀಗಿರಲಿದೆ

ಬ್ಯಾಟರ್‌ಗಳು: ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಆರೋನ್ ಫಿಂಚ್, ಕೆಎಲ್ ರಾಹುಲ್

ಆಲ್‌ರೌಂಡರ್: ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಕ್ಯಾಮೆರಾನ್ ಗ್ರೀನ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್,

ಬೌಲಿಂಗ್: ಜೋಶ್ ಹ್ಯಾಜಲ್‌ವುಡ್, ಆಡಮ್ ಜಂಪಾ, ಜಸ್ಪ್ರೀತ್ ಬುಮ್ರಾ.

ಭಾರತ vs ಆಸ್ಟ್ರೇಲಿಯ ಸಂಭಾವ್ಯ ತಂಡಗಳು

ಭಾರತ vs ಆಸ್ಟ್ರೇಲಿಯ ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್.

ಆಸ್ಟ್ರೇಲಿಯ: ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಸೀನ್ ಅಬಾಟ್, ಪ್ಯಾಟ್ ಕಮ್ಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 25, 2022, 13:32 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X