ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಕಠಿಣ ತಯಾರಿ ಆರಂಭಿಸಿದ ಚೇತೇಶ್ವರ ಪೂಜಾರ

IND vs AUS: Cheteshwar Pujara Begins Batting Practice For the Border-Gavaskar Trophy Test Series

ಭಾರತ ಟೆಸ್ಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಕಠಿಣ ತಯಾರಿ ಆರಂಭಿಸಿದ್ದಾರೆ. ಫೆಬ್ರವರಿ 9ರಿಂದ ಆಸೀಸ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ.

ತಮ್ಮ ಅಭ್ಯಾಸದ ಕೆಲವು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಚೇತೇಶ್ವರ ಪೂಜಾರ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಹೇಗೆ ತಯಾರಿ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟರ್ ಚೇತೇಶ್ವರ ಪೂಜಾರ ಬಲಿಷ್ಠ ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನು ಎದುರಿಸುವುದು ಮತ್ತು ಕ್ರೀಸ್‌ನಲ್ಲಿ ಬಂಡೆಯಂತೆ ನಿಂತು ತಂಡದ ಮೊತ್ತ ಹೆಚ್ಚಿಸುವ ಜವಾಬ್ದಾರಿ ನಿರ್ವಹಿಸುವುದು ಭಾರತ ತಂಡಕ್ಕೆ ಪ್ರಮುಖವಾಗಿದೆ.

ಕಳೆದ ವರ್ಷ ಚೇತೇಶ್ವರ ಪೂಜಾರ ಉತ್ತಮ ಫಾರ್ಮ್‌ನಲ್ಲಿದ್ದರು. 2022ರಲ್ಲಿ ಆಡಿದ ಐದು ಟೆಸ್ಟ್ ಮತ್ತು 10 ಇನ್ನಿಂಗ್ಸ್‌ಗಳಲ್ಲಿ 45.44ರ ಸರಾಸರಿಯಲ್ಲಿ 409 ರನ್ ಗಳಿಸಿದ್ದಾರೆ. ಇದೆ ವೇಳೆ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಗಳಿಸಿದ್ದರು.

IND vs AUS: Cheteshwar Pujara Begins Batting Practice For the Border-Gavaskar Trophy Test Series

1,400ಕ್ಕೂ ಅಧಿಕ ದಿನಗಳ ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೇತೇಶ್ವರ ಪೂಜಾರ ಟೆಸ್ಟ್ ಶತಕ ಬಾರಿಸಿದರು. ಜನವರಿ 2019ರಲ್ಲಿ ತಮ್ಮ ಕೊನೆಯ ಶತಕ ಗಳಿಸಿದ್ದರು. ಎರಡು ವರ್ಷಗಳ ಕಾಲ ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದ್ದ ಚೇತೇಶ್ವರ ಪೂಜಾರ 2020ರಲ್ಲಿ 20.37 ಮತ್ತು 2021ರಲ್ಲಿ 28.08 ಸರಾಸರಿಯನ್ನು ಹೊಂದಿದ್ದರು. ಇದರಲ್ಲಿ 18 ಟೆಸ್ಟ್ ಪಂದ್ಯಗಳ 34 ಇನ್ನಿಂಗ್ಸ್‌ಗಳಲ್ಲಿ ಏಳು ಅರ್ಧಶತಕಗಳೊಂದಿಗೆ ಒಟ್ಟು 865 ರನ್ ದಾಖಲಿಸಿದ್ದರು.

ಇಂಗ್ಲೆಂಡಿನ ಸಸೆಕ್ಸ್ ಕೌಂಟಿಯೊಂದಿಗಿನ ಒಪ್ಪಂದವು ಚೇತೇಶ್ವರ ಪೂಜಾರ ಬ್ಯಾಟಿಂಗ್ ಫಾರ್ಮ್ ಮರಳಿ ಪಡೆಯಲು ಸಹಕಾರಿಯಾಯಿತು. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್ ತಂಡದ ಪರವಾಗಿ ಆಡಿದ ಎಂಟು ಪಂದ್ಯಗಳಲ್ಲಿ 109.40 ಸರಾಸರಿಯಲ್ಲಿ 1,094 ರನ್ ಗಳಿಸಿದರು.

ಇನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಚೇತೇಶ್ವರ ಪೂಜಾರ ಅತಿ ಹೆಚ್ಚು ರನ್ ಗಳಿಸಿದ ಆರನೇ ಆಟಗಾರನಾಗಿದ್ದಾರೆ. 20 ಪಂದ್ಯಗಳ 37 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳು ಮತ್ತು 10 ಅರ್ಧ ಶತಕಗಳೊಂದಿಗೆ 54.08 ಸರಾಸರಿಯಲ್ಲಿ 1,893 ರನ್ ಗಳಿಸಿದ್ದಾರೆ ಮತ್ತು 204 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರು ನೋಡುತ್ತಿವೆ. ಹೀಗಾಗಿ ಈ ಸರಣಿ ಎಂದಿಗಿಂತ ಹೆಚ್ಚು ಮಹತ್ವ ಪಡೆದಿದೆ. ಕಳೆದ ಬಾರಿ ಆಸೀಸ್ ನೆಲದಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತ ತಂಡ, ಇದೀಗ ತವರಿನಲ್ಲಿ ಗೆದ್ದು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಲಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದ್ದು, ನಂತರದ ಪಂದ್ಯಗಳು ದೆಹಲಿ, ಧರ್ಮಶಾಲಾ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.

Story first published: Wednesday, February 1, 2023, 3:15 [IST]
Other articles published on Feb 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X