ಆಸಿಸ್ ಬ್ಯಾಟ್ಸ್‌ನ್‌ಗಳ ಅಬ್ಬರ : 390 ರನ್‌ಗಳ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತದ ಬೌಲಿಂಗ್ ಪಡೆಯ ಪ್ರದರ್ಶನ ನೀರಸವಾಗಿತ್ತು. ಆಸ್ಟ್ರೇಲಿಯಾದ ಯಾವೊನ್ನ ಬ್ಯಾಟ್ಸ್‌ಮನ್‌ನನ್ನು ಕೂಡ ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಫಲರಾದರು. ಅದರ ಪರಿಣಾಮವಾಗಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 389 ರನ್ ಗಳಿಸಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಲ್ವರು ಬ್ಯಾಟ್ಸ್‌ಮನ್‌ಗಳು ಅರ್ಧ ಶತಕ ಬಾರಿಸಿದರೆ ಸ್ಟೀವ್ ಸ್ಮಿತ್ ಸತತ ಎರಡನೇ ಪಂದ್ಯದಲ್ಲಿ ವೇಗದ ಶತಕವನ್ನು ಸಿಡಿಸಿದರು. ಆರಮಭಿಕ ಆಟಗಾರರು ಸತತ ಎರಡನೇ ಪಂದ್ಯದಲ್ಲಿ ಶತಕದ ಜೊತೆಯಾಟವನ್ನು ನೀಡಿ ಅದ್ಭುತ ಆರಂಭವನ್ನು ಒದಗಿಸಿದರು. ಒಟ್ಟಾರೆಯಾಗಿ ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಭಾರತ vs ಆಸ್ಟ್ರೇಲಿಯಾ: ವಿಶೇಷ ಮೈಲಿಗಲ್ಲು ಸ್ಥಾಪಿಸಿದ ವಿರಾಟ್ ಕೊಹ್ಲಿ

ಫಿಂಚ್ ವಾರ್ನರ್ ಅಬ್ಬರದ ಆರಂಭ

ಸತತ ಎರಡನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಹಾಗೂ ಆರೋನ್ ಫಿಂಚ್ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ಮೊದಲ ವಿಕೆಟ್‌ಗೆ 141 ರನ್‌ಗಳ ಜೊತೆಯಾಟವನ್ನು ಈ ಜೋಡಿ ಆಸಿಸ್ ಪರವಾಗಿ ನೀಡಿತು. ಡೇವಿಡ್ ವಾರ್ನರ್ 83ರನ್ ಗಳಿಸಿದರೆ ನಾಯಕ ಆರೋನ್ ಫಿಂಚ್ 60 ರನ್ ಬಾರಿಸಿದರು.

ಸ್ಟೀವ್ ಸ್ಮಿತ್ ಭರ್ಜರಿ ಶತಕ

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಯಾವಾಗಲೂ ಅದ್ಭುತ ಆಟವನ್ನು ಪ್ರದರ್ಶಿಸುತ್ತಾರೆ. ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದ ಸ್ಮಿತ್ ಎರಡನೇ ಪಂದ್ಯದಲ್ಲೂ ಶತಕ ಸಿಡಿಸಿದರು. 64 ಎಸೆತಗಳನ್ನು ಎದುರಿಸಿದರ ಸ್ಮಿತ್ ಭರ್ಜರಿ 104 ರನ್ ಸಿಡಿಸಿದರು. ಇದರಲ್ಲಿ 2 ಸಿಕ್ಸ್ ಹಾಗೂ 14 ಬೌಂಡರಿ ಸೇರಿತ್ತು.

ಮ್ಯಾಕ್ಸ್‌ವೆಲ್ ಲ್ಯಾಬುಶೈನ್ ಅಬ್ಬರ

ಮ್ಯಾಕ್ಸ್‌ವೆಲ್ ಲ್ಯಾಬುಶೈನ್ ಅಬ್ಬರ

ಇನ್ನು ಆಸ್ಟ್ರೇಲಿಯಾದ ಯುವ ಆಟಗಾರ ಮಾರ್ನಸ್ ಲ್ಯಾಬುಶೈನ್ ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 61 ಎಸೆತ ಎದುರಿಸಿದ ಲ್ಯಾಬುಶೈನ್ 70 ರನ್ ಸಿಡಿಸಿದರು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯದಲ್ಲೂ ಸ್ಪೋಟಕ ಪ್ರದರ್ಶನ ಮುಂದುವರಿಸಿದರು. ಕೇವಲ 29 ಎಸೆತಗಳಲ್ಲಿ 63ರನ್ ಚಚ್ಚಿ ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದರು.

ಬೌಲಿಂಗ್‌ ಪಡೆಯ ನೀರಸ ಪ್ರದರ್ಶನ

ಬೌಲಿಂಗ್‌ ಪಡೆಯ ನೀರಸ ಪ್ರದರ್ಶನ

ಟೀಮ್ ಇಂಡಿಯಾದ ಬೌಲಿಂಗ್ ಪಡೆ ನೀರಸ ಪ್ರದರ್ಶನವನ್ನು ಮುಂದುವರಿಸಿದೆ. ಏಳು ಬೌಲರ್‌ಗಳನ್ನು ಕಣಕ್ಕಿಳಿಸಿಯೂ ಅನಿವಾರ್ಯ ಸಂದರ್ಭಗಳಲ್ಲಿ ವಿಕೆಟ್ ಕಬಳಿಸಲು ತಂಡ ವಿಫಲವಾಯಿತು. ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದರು.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, November 29, 2020, 13:34 [IST]
Other articles published on Nov 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X