ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಮೊಹಮ್ಮದ್ ಶಮಿಗೆ ಆರು ವಾರಗಳ ವಿಶ್ರಾಂತಿ

Ind vs Aus: Mohammed Shami advised to take six weeks rest

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಬ್ಯಾಟಿಂಗ್ ಮಾಡುವ ವೇಳೆ ಕೈಗೆ ಗಾಯಮಾಡಿಕೊಂಡಿದ್ದರು. ಹೀಗಾಗಿ ಇಡೀ ಸರಣಿಯಿಂದ ಮೊಹಮ್ಮದ್ ಶಮಿ ಹೊರಬಿದ್ದಿದ್ದಾರೆ. ಈಗ ಅವರಿಗೆ ಆರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೂರನೇ ದಿನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೃಹತ್ ಕುಸಿತವನ್ನು ಕಂಡಿತ್ತು. ಈ ಸಂದರ್ಭದಲ್ಲಿ ಅಂತಿಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಳಿದಿದ್ದ ಶಮಿ ಪ್ಯಾಟ್ ಕಮ್ಮಿನ್ಸ್ ಎಸೆದ ಬೌಲಿಂಗ್‌ನಲ್ಲಿ ಗಾಯಗೊಂಡಿದ್ದರು. ನೋವಿನ ತೀವ್ರತೆಗೆ ಶಮಿ ಬ್ಯಾಟ್ ಎತ್ತುವುದು ಅಸಾಧ್ಯವಾಗಿತ್ತು.

ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ: ಅಂಕಣದಲ್ಲಿ ಕಿಡಿಕಾರಿದ ಸುನಿಲ್ ಗವಾಸ್ಕರ್ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ: ಅಂಕಣದಲ್ಲಿ ಕಿಡಿಕಾರಿದ ಸುನಿಲ್ ಗವಾಸ್ಕರ್

ಬಳಿಕ ಸ್ಕ್ಯಾನಿಂಗ್ ನಡೆಸಲಾಗಿದ್ದು ಕೈಯ ಮೂಳೆಯಲ್ಲಿ ಬಿರುಕು ಕಂಡಿರುವುದು ಪತ್ತೆಯಾಗಿತ್ತು. ಹೀಗಾಗಿ ಮೊಹಮ್ಮದ್ ಶಮಿ ಮುಂದಿನ ಮೂರು ಪಂದ್ಯಗಳಿಂದಲೂ ಹೊರಗುಳಿಯಬೇಕಾದ ಸಂದರ್ಭ ಉಂಟಾಯಿತು. ಸದ್ಯ ಆರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

"ಮೊಹಮ್ಮದ್ ಶಮಿಗೆ ಆರು ವಾರಗಳ ವಿಶ್ರಾಂತಿಗೆ ಸೂಚಿಸಲಾಗಿದೆ. ಬುಧವಾರ ಅವರು ಭಾರತಕ್ಕೆ ಮರಳಲಿದ್ದಾರೆ" ಎಂದು ಮೂಲಗಳು ಮಾಹಿತಿಯನ್ನು ನೀಡಿದೆ. ಹೀಗಾಗಿ ಮೊಹಮ್ಮದ್ ಶಮಿ ಜನವರಿ ಅಂತ್ಯಕ್ಕೆ ಆರು ವಾರಗಳ ವಿಶ್ರಾಂತಿಯನ್ನು ಪೂರೈಸಿ ಫಿಟ್ ಆಗುವ ನಿರೀಕ್ಷೆಯಿದೆ.

ಸಿಡ್ನಿ ಟೆಸ್ಟ್ ಸ್ಥಳಾಂತರವಾದರೆ ಮತ್ತೆ ಕ್ವಾರಂಟೈನ್‌ಗೆ ಒಳಗಾಗಬೇಕಾ ರೋಹಿತ್ ಶರ್ಮಾ?ಸಿಡ್ನಿ ಟೆಸ್ಟ್ ಸ್ಥಳಾಂತರವಾದರೆ ಮತ್ತೆ ಕ್ವಾರಂಟೈನ್‌ಗೆ ಒಳಗಾಗಬೇಕಾ ರೋಹಿತ್ ಶರ್ಮಾ?

ಫೆಬ್ರವರಿ ತಿಂಗಳ 5ನೇ ತಾರೀಕಿನಿಂದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸರಣಿ ಆರಂಭವಾಗಲಿದ್ದು ಮೊದಲಿಗೆ ಟೆಸ್ಟ್ ನಾಲ್ಕು ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಈ ಸರಣಿಗೆ ಶಮಿ ಲಭ್ಯವಾಗುವ ನಿರೀಕ್ಷೆಯಿದೆ.

Story first published: Thursday, December 24, 2020, 9:51 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X