ಆಸಿಸ್ ವಿರುದ್ಧದ ಸರಣಿಯಲ್ಲಿ ಆಡದಿದ್ದರೂ ODIನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ

ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ. ಹಾಗಿದ್ದರೂ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿನಲ್ಲೇ ಬರೆದುಕೊಂಡಿದ್ದಾರೆ. ಈ ಮೂಲಕ ಸತತ 8ನೇ ವರ್ಷ ಈ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಯಾವೊಬ್ಬ ಆಟಗಾರ ಶತಕವನ್ನು ದಾಖಲಿಸಿಲ್ಲ. ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಸಿದ 92 ರನ್ ಟೀಮ್ ಇಮಡಿಯಾ ಪರವಾಗ ದಾಖಲಾದ ಅತ್ಯಂತ ಹೆಚ್ಚಿನ ಸ್ಕೋರ್ ಆಗಿದೆ. ಈ ಮೂಲಕ ವಿಶೇಷ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿಯೇ ಉಳಿದುಕೊಂಡಿದೆ.

ಪಾಂಡ್ಯ, ಜಡೇಜಾ ಜೊತೆಯಾಟ ತಂಡಕ್ಕೆ ಬಲ ತುಂಬಿತು: ವಿರಾಟ್ ಕೊಹ್ಲಿ

ಹಿಟ್‌ಮ್ಯಾನ್ ರೋಹಿತ್ ಶರ್ಮಾ ದಾಖಲಿಸಿದ ಆ ವಿಶೇಷ ರೆಕಾರ್ಡ್ ಯಾವುದು? ಆಡದೆಯೇ ರೋಹಿತ್ ದಾಖಲೆ ಬರೆದಿದ್ದು ಹೇಗೆ? ಮುಂದೆ ಓದಿ

ರೋಹಿತ್ ಶರ್ಮಾನೇ ಗರಿಷ್ಠ ಸ್ಕೋರರ್

ರೋಹಿತ್ ಶರ್ಮಾನೇ ಗರಿಷ್ಠ ಸ್ಕೋರರ್

ರೋಹಿತ್ ಶರ್ಮಾ ಈ ವರ್ಷವೂ ಕೂಡ ಟೀಮ್ ಇಂಡಿಯಾ ಪರವಾಗಿ ಏಕದಿನ ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರನಾಗಿದ್ದಾರೆ. ರೋಹಿತ್ ಶರ್ಮಾ ಗಳಿಸಿದ ರನ್ ಸಮೀಪಕ್ಕೆ ಈ ವರ್ಷವೂ ಯಾವ ಆಟಗಾರನೂ ಸುಳಿದಿಲ್ಲ.

8ನೇ ವರ್ಷವೂ ರೋಹಿತ್ ಹೈಯೆಸ್ಟ್

8ನೇ ವರ್ಷವೂ ರೋಹಿತ್ ಹೈಯೆಸ್ಟ್

ಕುತೂಹಲಕಾರಿ ಸಂಗತಿಯೆಂದರೆ ಭಾರತದ ಪರವಾಗಿ ಹೈಯೆಸ್ಟ್ ರನ್ ಗಳಿಸಿದ ಆಟಗಾರನಾಗಿ ರೋಹಿತ್ ಶರ್ಮಾ 8ನೇ ವರ್ಷವೂ ಉಳಿದುಕೊಂಡಿದ್ದಾರೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಸರಣಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ 119 ರನ್ ಗಳಿಸಿದ್ದರು. ಇದು ಈ ವರ್ಷ ಟೀಮ್ ಇಂಡಿಯಾ ಪರವಾಗಿ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರ ದಾಖಲಿಸಿದ ಗರಿಷ್ಟ ಸ್ಕೋರ್ ಆಗಿದೆ.

ಕೆಲವೇ ಪಂದ್ಯಗಳನ್ನು ಆಡಿರುವ ಶರ್ಮಾ

ಕೆಲವೇ ಪಂದ್ಯಗಳನ್ನು ಆಡಿರುವ ಶರ್ಮಾ

2013ರ ಬಳಿಕ ಸತತವಾಗಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚಿನ ರನ್ ಗಳಿಸಿಕೊಂಡು ಬಂದಿದ್ದಾರೆ. ಈ ವರ್ಷ ಕೊರೊನಾ ಕಾರಣದಿಂದಾಗಿ ಅತ್ಯಂತ ಕಡಿಮೆ ಪಂದ್ಯಗಳನ್ನು ಆಡಲಾಗಿದೆ. ಹಾಗಿದ್ದರೂ ಈ ಬಾರಿಯೂ ಈ ಸಾಧನೆಯನ್ನು ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಸಿಡಿಸಿದ ಗರಿಷ್ಠ ಸ್ಕೋರ್‌ಗಳು

ರೋಹಿತ್ ಶರ್ಮಾ ಸಿಡಿಸಿದ ಗರಿಷ್ಠ ಸ್ಕೋರ್‌ಗಳು

ರೋಹಿತ್ ಶರ್ಮಾ 2013ರ ಬಳಿಕ ಭಾರತದ ಪರವಾಗಿ ಸಿಡಿಸಿದ ಗರಿಷ್ಠ ಮೊತ್ತಗಳು ಹೀಗಿದೆ.

2013 - 209

2014 - 264

2015 - 150

2016 - 171*

2017 - 208*

2018 - 152

2019 - 159

2020 - 119

ಆಸಿಸ್ ವಿರುದ್ಧ ಸೀಮಿತ ಓವರ್‌ಗಳಿಗಿಲ್ಲ ರೋಹಿತ್

ಆಸಿಸ್ ವಿರುದ್ಧ ಸೀಮಿತ ಓವರ್‌ಗಳಿಗಿಲ್ಲ ರೋಹಿತ್

ಇಲ್ಲಿ ಪ್ರಮುಖ ವಿಚಾರವೆಂದರೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿಲ್ಲ್. ಸ್ನಾಯುಸೆಳೆತಕ್ಕೆ ಒಳಗಾಗಿರುವ ರೋಹಿತ್ ಶರ್ಮಾ ಚೇತರಿಸಿಕೊಂಡಿದ್ದು ಬೆಂಗಳೂರಿನ ಎನ್‌ಸಿಎನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, December 2, 2020, 18:26 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X