ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್ ಸ್ಥಳಾಂತರವಾದರೆ ಮತ್ತೆ ಕ್ವಾರಂಟೈನ್‌ಗೆ ಒಳಗಾಗಬೇಕಾ ರೋಹಿತ್ ಶರ್ಮಾ?

Ind vs Aus : Rohit Sharma wont need to quarantine again if 3rd Test shifts to Melbourne

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಕೊರೊನಾ ವೈರಸ್ ಒಂದಷ್ಟು ಗೊಂದಲದ ಪರಿಸ್ಥಿತಿಗೆ ತಂದೊಡ್ಡಿದೆ. ಆಸ್ಟ್ರೇಲಿಯಾದಲ್ಲಿ ಹತೋಟಿಗೆ ಬಂದಿದ್ದ ಈ ವೈರಸ್ ಈಗ ಮತ್ತೆ ಸದ್ದುಮಾಡುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದ ನ್ಯೂಸೌಥ್ ವೇಲ್ಸ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು ಸಿಡ್ನಿಯಲ್ಲಿ ನಡೆಯಬೇಕಿದ್ದ ಮೂರನೇ ಟೆಸ್ಟ್‌ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.

ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ನಿರಾತಂಕವಾಗಿ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಆಯೋಜಿಸಲು ನಾವು ಬದ್ದರಾಗಿದ್ದೇವೆ ಎಂದು ಹೇಳುತ್ತಿದೆಯಾದರೂ ಪರಿಸ್ಥಿತಿ ಬದಲಾದರೆ ಅಚ್ಚಯಿಯಿಲ್ಲ. ಒಂದು ವೇಳೆ ಮೂರನೇ ಟೆಸ್ಟ್ ಸಿಡ್ನಿಯ ಬದಲಿಗೆ ಮೆಲ್ಬೋರ್ನ್‌ನಲ್ಲೇ ನಡೆಸುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ಬೆಳವಣಿಗೆ ಅಂತರರಾಜ್ಯ ಪ್ರಯಾಣಕ್ಕಿರುವ ನಿರ್ಬಂಧವಿರುವುದರಿಂದಾಗಿ ರೋಹಿತ್ ಶರ್ಮಾ ಮತ್ತೆ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆಯಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿ

ಹಾಗಾದರೆ ರೋಹಿತ್ ಶರ್ಮಾ ಮತ್ತೆ ಕ್ವಾರಂಟೈನ್‌ಗೆ ಒಳಗಾಗಬೇಕಾ? ಮೂರನೇ ಟೆಸ್ಟ್‌ಗೂ ರೋಹಿತ್ ಲಭ್ಯರಾಗುವುದು ಅನುಮಾನವೇ? ಇದಕ್ಕೆ ಉತ್ತರ ಈ ವರದಿಯಲ್ಲಿದೆ ಮುಂದೆ ಓದಿ..

ರೋಹಿತ್ ಪಾಡೇನು?

ರೋಹಿತ್ ಪಾಡೇನು?

ಸಿಡ್ನಿ ಟೆಸ್ಟ್ ಸ್ಥಳಾಂತರವಾಗಿ ಮೆಲ್ಬೋರ್ನ್‌ನಲ್ಲೇ ನಡೆಸುವ ಪರಿಸ್ಥಿತಿ ಬಂದರೆ ಸಿಡ್ನಿಯಲ್ಲಿ ಕ್ವಾರೈಂಟೈನ್‌ನಲ್ಲಿರುವ ರೋಹಿತ್ ಶರ್ಮಾ ಅವರ ಪಾಡೇನು ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ರೋಹಿತ್ ಶರ್ಮಾ ಮತ್ತೆ ಕ್ವಾರಂಟೈನ್ ಪೂರೈಸಬೇಕಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಪ್ರಯಾಣದ ವಿಕ್ಟೋರಿಯಾದಲ್ಲಿ ನಿರ್ಬಂಧ

ಪ್ರಯಾಣದ ವಿಕ್ಟೋರಿಯಾದಲ್ಲಿ ನಿರ್ಬಂಧ

ಆಸ್ಟ್ರೇಲಿಯಾದ ನ್ಯೂ ಸೌಥ್‌ವೇಲ್ಸ್‌ ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಸಿಡ್ನಿ ಇರುವುದು ಇದೇ ರಾಜ್ಯದಲ್ಲಿ ಆಗಿರುವ ಕಾರಣ ಮೆಲ್ಬೋರ್ನ್ ನಗರವಿರುವ ವಿಕ್ಟೋರಿಯಾ ರಾಜ್ಯಕ್ಕೆ ಪ್ರಯಾಣಿಸಿದರೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಪೂರೈಸಬೇಕಿದೆ. ಈ ನಿಯಮ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಕ್ವಾರಂಟೈನ್ ಅಗತ್ಯವಿಲ್ಲ

ಕ್ವಾರಂಟೈನ್ ಅಗತ್ಯವಿಲ್ಲ

ಆದರೆ ಅಭಿಮಾನಿಗಳ ಈ ಅತಂಕ ದೂರಮಾಡುವಂತಾ ವರದಿಯೊಂದನ್ನು ಕ್ರಿಕ್ ಬಜ್ ಪ್ರಕಟಿಸಿದೆ. ರೋಹಿತ್ ಶರ್ಮಾ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿರುವ ಕಾರಣ ಸಿಡ್ನಿ ಟೆಸ್ಟ್ ಮೆಲ್ಬೋರ್ನ್‌ಗೆ ಸ್ಥಳಾಂತರವಾದರೂ ಮತ್ತೆ ರೋಹಿತ್ ಕ್ವಾರಂಟೈನ್ ಪೂರೈಸುವ ಅಗತ್ಯವಿಲ್ಲ ಎಂದು ವರದಿ ಮಾಡಿದೆ. ಇದು ಅಭಿಮಾನಿಗಳ ಆತಂಕ ದೂರಮಾಡಿದೆ.

ಸಿಡ್ನಿ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್ ಶರ್ಮಾ

ಸಿಡ್ನಿ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್ ಶರ್ಮಾ

ಲಭ್ಯ ಮಾಹಿತಿಯ ಪ್ರಕಾರ ಬಿಸಿಸಿಐ ರೋಹಿತ್ ಶರ್ಮಾಗೆ ಮೆಲ್ಬೋರ್ನ್‌ನಲ್ಲೇ ಇಳಿಯಲು ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿತ್ತು. ಆದರೆ ವಿಕ್ಟೋರಿಯಾ ಆಡಳಿತ ರೋಹಿತ್ ಶರ್ಮಾಗೆ ಮೆಲ್ಬೋರ್ನ್‌ಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದೆ ಎಂದು ಬಳಿಕ ಬಿಸಿಸಿಐ ವಿವರಿಸಿದೆ. ಸಿಡ್ನಿಯಲ್ಲಿ ಎರಡು ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ಕ್ವಾರಂಟೈನ್ ಪೂರೈಸುತ್ತಿದ್ದು ಒಳಾಂಗಣ ಅಭ್ಯಾಸ ನಡೆಸಲು ಪೂರಕ ವ್ಯವಸ್ಥೆಯನ್ನು ಅಲ್ಲಿ ನಿರ್ಮಿಸಲಾಗಿದೆ.

Story first published: Wednesday, December 23, 2020, 17:40 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X