IND vs AUS: ಟಿಕೆಟ್‌ಗಾಗಿ ಕಾಲ್ತುಳಿತ; ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ FIR ದಾಖಲು

ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಟಿ20 ಪಂದ್ಯಕ್ಕೂ ಮುನ್ನ ಗುರುವಾರ (ಸೆಪ್ಟೆಂಬರ್ 22) ರಂದು ಹೈದರಾಬಾದ್‌ನ ಜಿಮ್ಖಾನಾ ಮೈದಾನದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ವಿರುದ್ಧ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರ ಪೊಲೀಸ್ ಕಾಯ್ದೆಯ ಕಲಂ 420, 337 ಮತ್ತು 21/76 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

Ind Vs Aus T20I: ಹೈದರಾಬಾದ್‌ನಲ್ಲಿ ಟಿಕೆಟ್ ಪಡೆಯಲು ಹೋದ ಅಭಿಮಾನಿಗಳಿಗೆ ಲಾಠಿಏಟುInd Vs Aus T20I: ಹೈದರಾಬಾದ್‌ನಲ್ಲಿ ಟಿಕೆಟ್ ಪಡೆಯಲು ಹೋದ ಅಭಿಮಾನಿಗಳಿಗೆ ಲಾಠಿಏಟು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದ ಟಿಕೆಟ್‌ಗಳನ್ನು ಖರೀದಿಸಲು ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ ಜಿಮ್ಖಾನಾ ಮೈದಾನದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಇಪ್ಪತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಲಾಠಿ ಚಾರ್ಜ್ ಮಾಡಿದ ಪೊಲೀಸರು

ಲಾಠಿ ಚಾರ್ಜ್ ಮಾಡಿದ ಪೊಲೀಸರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರಂದು ನಡೆಯಲಿದೆ. ಟಿಕೆಟ್ ಖರೀದಿಸಲು ಜಿಮ್ಖಾನಾ ಮೈದಾನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಭಿಮಾನಿಗಳ ದೊಡ್ಡ ಸರತಿ ಸಾಲಿನಲ್ಲಿ ಟಿಕೆಟ್ ಪಡೆಯಲು ಕಾದು ನಿಂತಿದ್ದರು.

ಆದರೆ, ಶೀಘ್ರದಲ್ಲೇ ಪರಿಸ್ಥಿತಿ ನಿಯಂತ್ರಣ ತಪ್ಪಿ ಹೋಯಿತು ಮತ್ತು ಕಾಲ್ತುಳಿತ ಸಂಭವಿಸಿತು. ಉತ್ಸುಕರಾದ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟುಮಾಡಿದರು. ಭಾರೀ ಗುಂಪನ್ನು ಚದುರಿಸಲು ಮತ್ತು ನಿಯಂತ್ರಣ ಪುನಃಸ್ಥಾಪಿಸಲು ಹೈದರಾಬಾದ್ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು ಮತ್ತು ಹಲವರು ಈ ವೇಳೆ ಗಾಯಗೊಂಡರು. ಇದೀಗ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

1-0 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯ

1-0 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯ

ಉಭಯ ತಂಡಗಳ ನಡುವಿನ ಸರಣಿಯಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾವು ಮಂಗಳವಾರ ಮೊಹಾಲಿಯಲ್ಲಿ ಗೆದ್ದ ನಂತರ ಪ್ರಸ್ತುತ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ಭಾರತಕ್ಕೆ ಆಹ್ವಾನಿಸಿತು. ನಾಯಕ ರೋಹಿತ್ ಶರ್ಮಾ (11) ಮತ್ತು ವಿರಾಟ್ ಕೊಹ್ಲಿ (2) ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಇದು ಮೆನ್ ಇನ್ ಬ್ಲೂ ತಂಡವನ್ನು 35 ರನ್‌ಗಳಿಗೆ 2 ಪ್ರಮುಖ ವಿಕೆಟ್‌ ಕಳೆದುಕೊಂಡು ಹೋರಾಡುವಂತೆ ಮಾಡಿತು.

ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ 71* ರನ್

ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ 71* ರನ್

ನಂತರ ಕೆಎಲ್ ರಾಹುಲ್ (55) ಮತ್ತು ಸೂರ್ಯಕುಮಾರ್ ಯಾದವ್ (46) 68 ರನ್ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 30 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 71* ರನ್ ಗಳಿಸಿ ಇನ್ನಿಂಗ್ಸ್ ಅನ್ನು 208/6 ರಲ್ಲಿ ಮುಗಿಸಿದರು.

ಆಸ್ಟ್ರೇಲಿಯ ಪರ ವೇಗಿಗಳಾದ ನಾಥನ್ ಎಲ್ಲಿಸ್ (3/30) ಮತ್ತು ಜೋಶ್ ಹೇಜಲ್‌ವುಡ್ (2/39) ಉತ್ತಮ ಬೌಲಿಂಗ್ ಸ್ಪೆಲ್ ಮಾಡಿದರು.

209 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ ಆಸ್ಟ್ರೇಲಿಯದ ಆರಂಭಿಕರಾದ ಆರೋನ್ ಫಿಂಚ್ (22) ಮತ್ತು ಕ್ಯಾಮರೂನ್ ಗ್ರೀನ್ 39 ರನ್‌ಗಳ ವೇಗದ ಜೊತೆಯಾಟದಿಂದ ಆಸ್ಟ್ರೇಲಿಯಕ್ಕೆ ದೃಢವಾದ ಆರಂಭವನ್ನು ನೀಡಿದರು. ಗ್ರೀನ್ ಪ್ರಭಾವಶಾಲಿ ಸ್ಟ್ರೋಕ್‌ಗಳನ್ನು ಆಡಿದರು ಮತ್ತು ಸ್ಟೀವ್ ಸ್ಮಿತ್ (35) ಅವರೊಂದಿಗೆ 70 ರನ್‌ಗಳ ಜೊತೆಯಾಟವನ್ನು ಮಾಡಿದರು. ಕ್ಯಾಮರೂನ್ ಗ್ರೀನ್ 30 ಎಸೆತಗಳಲ್ಲಿ ಆಕರ್ಷಕ 61 ರನ್ ಗಳಿಸಿ ಔಟಾದರು.

ನಾಲ್ಕು ವಿಕೆಟ್‌ಗಳಿಂದ ಗೆದ್ದ ಆಸೀಸ್

ನಾಲ್ಕು ವಿಕೆಟ್‌ಗಳಿಂದ ಗೆದ್ದ ಆಸೀಸ್

ಭಾರತ ತಂಡವು ಕೇವಲ 36 ರನ್‌ಗಳ ಅಂತರದಲ್ಲಿ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ (1), ಮತ್ತು ಜೋಶ್ ಇಂಗ್ಲಿಸ್ (17) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಉತ್ತಮ ಪುನರಾಗಮನ ಮಾಡಿತು. ಆದರೆ ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ (45*) ಮತ್ತು ಚೊಚ್ಚಲ ಪಂದ್ಯವಾಡಿದ ಟಿಮ್ ಡೇವಿಡ್ (18) ) ಆಸೀಸ್ ನಾಲ್ಕು ವಿಕೆಟ್‌ಗಳಿಂದ ಗೆಲ್ಲಲು 62-ರನ್ ಮುರಿಯದ ಜೊತೆಯಾಟ ನೀಡಿದರು ಮತ್ತು ಇನ್ನಿಂಗ್ಸ್ ಅನ್ನು 211/6ಕ್ಕೆ ಮುಗಿಸಿದರು.

ಕ್ಯಾಮರೂನ್ ಗ್ರೀನ್ ಅವರ 61 ಮತ್ತು 1/46 ಗೆ 'ಪಂದ್ಯದ ಶ್ರೇಷ್ಠ' ಪ್ರಶಸ್ತಿಯನ್ನು ಪಡೆದರು. ಎರಡನೇ ಟಿ20 ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 23, 2022, 15:24 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X