ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus T20: ರೋಹಿತ್ ಶರ್ಮಾ ಸ್ವಲ್ಪ ತಾಳ್ಮೆಯಿಂದ ಆಡಬೇಕು: ಆಕಾಶ್ ಚೋಪ್ರಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸರಣೀಯ ಮೊದಲನೇ ಟಿ20 ಪಂದ್ಯದಲ್ಲಿ ಬೇಗನೇ ಔಟಾಗಿದ್ದರ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ ಮಾಡುವಾಗ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಮೂಲಕ ತಮ್ಮ ಪ್ರತಿಭೆಗೆ ನ್ಯಾಯ ಸಲ್ಲಿಸುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೊಹಾಲಿಯಲ್ಲಿ ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಕೇವಲ 11 ರನ್ ಗಳಿಸಿ ಔಟಾದರು. ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ದೊಡ್ಡ ಸ್ಕೋರ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಂಬಿರುವ ಆಕಾಶ್ ಚೋಪ್ರಾ, ಆರಂಭದಲ್ಲೇ ವೇಗವಾಗಿ ರನ್ ಗಳಿಸುವ ಭರದಲ್ಲಿ ರೋಹಿತ್ ಶರ್ಮಾ ಔಟ್‌ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

IND vs AUS 2022: ದಿನೇಶ್‌ ಕಾರ್ತಿಕ್ ವಿಚಾರದಲ್ಲಿ ಮತ್ತೆ ಈ ತಪ್ಪು ಮಾಡಬೇಡಿ ಎಂದ ಗವಾಸ್ಕರ್IND vs AUS 2022: ದಿನೇಶ್‌ ಕಾರ್ತಿಕ್ ವಿಚಾರದಲ್ಲಿ ಮತ್ತೆ ಈ ತಪ್ಪು ಮಾಡಬೇಡಿ ಎಂದ ಗವಾಸ್ಕರ್

ಭಾರತ-ಆಸ್ಟ್ರೇಲಿಯಾ ಪಂದ್ಯದ ಮುಕ್ತಾಯದ ನಂತರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವೊಂದರಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ರೋಹಿತ್ ಶರ್ಮಾ ಕ್ರೀಸ್‌ನಲ್ಲಿ ಲಯವನ್ನು ಕಂಡುಕೊಳ್ಳಲು ಇನ್ನಷ್ಟು ಸಮಯ ಕಳೆಯಬೇಕು, ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದರೆ, ನಂತರ ಅವರು ವೇಗವಾಗಿ ರನ್ ಗಳಿಸುವ ಮೂಲಕ ಎದುರಾಳಿಗಳಿಗೆ ಹಾನಿ ಮಾಡಬಹುದು ಎಂದು ವಿವರಿಸಿದರು.

ಆರಂಭದಲ್ಲೇ ದೊಡ್ಡ ಹೊಡೆತ ಬೇಡ

ಆರಂಭದಲ್ಲೇ ದೊಡ್ಡ ಹೊಡೆತ ಬೇಡ

ರೋಹಿತ್ ಶರ್ಮಾ ಮೊದಲನೇ ಎಸೆತದಿಂದಲೇ ಎದುರಾಳಿಗಳ ಮೇಲೆ ಅಟ್ಯಾಕ್ ಮಾಡುವ ವಿಧಾನ ತನಗೆ ವೈಯಕ್ತಿಕವಾಗಿ ಇಷ್ಟವಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ರೋಹಿತ್ ಶರ್ಮಾ ಆರಂಭದಲ್ಲೇ ರನ್ ಗಳಿಸುವ ಭರದಲ್ಲಿ ಕಡಿಮೆ ಸ್ಕೋರ್‍‌ಗೆ ಔಟ್ ಆಗುತ್ತಿದ್ದಾರೆ. ಅವರು ಕನಿಷ್ಠ 40 ಬಾಲ್‌ಗಳನ್ನು ಎದುರಿಸಿದರೆ ಖಂಡಿತವಾಗಿಯೂ 75 ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರು ಅಷ್ಟು ದೀರ್ಘ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ, ಆತ ವಿಶೇಷ ಆಟಗಾರ, ಕ್ರೀಸ್‌ನಲ್ಲಿ ಸೆಟಲ್ ಆಗಲು, ವೇಗವಾಗಿ ರನ್ ಗಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಬೂಮ್ರಾ, ಯುಜಿ ಅಲ್ಲ: ಈ ವಿದೇಶಿ ಆಟಗಾರನೇ ನನ್ನ ನೆಚ್ಚಿನ ಬೌಲಿಂಗ್ ಪಾರ್ಟ್ನರ್ ಎಂದ ರವಿ ಬಿಷ್ಣೋಯ್

ಫಾರ್ಮ್ ಕಂಡುಕೊಂಡ ರಾಹುಲ್‌ ಬಗ್ಗೆ ಮೆಚ್ಚುಗೆ

ಫಾರ್ಮ್ ಕಂಡುಕೊಂಡ ರಾಹುಲ್‌ ಬಗ್ಗೆ ಮೆಚ್ಚುಗೆ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರನ್ ಗಳಿಸಲು ವಿಫಲರಾದರೂ, ಉಪನಾಯಕ ಕೆಎಲ್ ರಾಹುಲ್ ಅಗತ್ಯ ಫಾರ್ಮ್ ಅನ್ನು ಕಂಡುಕೊಂಡರು ಮತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇನ್ನಿಂಗ್ಸ್ ಅನ್ನು ಆಂಕರ್ ಮಾಡುವ ಬದಲು ನಿಯಮಿತವಾಗಿ ಬೌಂಡರಿಗಳನ್ನು ಗಳಿಸುತ್ತಿದ್ದರು.

ರಾಹುಲ್ ತನ್ನ ಸ್ವಾಭಾವಿಕವಾಗಿ ಆಕ್ರಮಣಕಾರಿ ಆಟವಾಡುವುದನ್ನು ತಡೆಯಲು ಆತನಿಂದ ಮಾತ್ರ ಸಾಧ್ಯ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. "ಕೆಎಲ್ ರಾಹುಲ್ ತಾನು ಎಂತ ಆಟಗಾರ ಎಂದು ತೋರಿಸಿದರು. ಅವರು ನಂಬಲಾಗದಷ್ಟು ಕೌಶಲ್ಯಪೂರ್ಣ ಬ್ಯಾಟರ್ ಆಗಿದ್ದಾರೆ ಮತ್ತು ಲೆಗ್ ಸೈಡ್ ಮೇಲೆ ಸಿಕ್ಸ್‌ಗಾಗಿ ಆ ಎರಡು ಫ್ಲಿಕ್ ಶಾಟ್‌ಗಳು ನಂಬಲಸಾಧ್ಯವಾಗಿವೆ." ಎಂದು ಹೊಗಳಿದ್ದಾರೆ.

ಡಿಕೆ ಬದಲಿಗೆ ಅಕ್ಷರ್ ಪಟೇಲ್‌ಗೆ ಬ್ಯಾಟಿಂಗ್ ಸರಿಯಲ್ಲ

ಡಿಕೆ ಬದಲಿಗೆ ಅಕ್ಷರ್ ಪಟೇಲ್‌ಗೆ ಬ್ಯಾಟಿಂಗ್ ಸರಿಯಲ್ಲ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ಗಿಂತ ಮುಂಚಿತವಾಗಿ ಬ್ಯಾಟಿಂಗ್ ಮಾಡಲು ಅಕ್ಷರ್ ಪಟೇಲ್‌ಗೆ ಅವಕಾಶ ನೀಡಿರುವುದಕ್ಕೆ ಆಕಾಶ್ ಚೋಪ್ರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಕ್ಷರ್ ಪಟೇಲ್ ಆರು ಓವರ್‌ಗಳಿಗಿಂತ ಸ್ವಲ್ಪ ಹೆಚ್ಚು ಬಾಕಿ ಇರುವಾಗ ಕ್ರೀಸ್‌ಗೆ ಪ್ರವೇಶಿಸಿದರು, ಆದರೆ 16 ನೇ ಓವರ್‌ನಲ್ಲಿ ಆತ ಔಟಾದ ನಂತರ ಕಾರ್ತಿಕ್ ಬ್ಯಾಟಿಂಗ್‌ಗೆ ಬಂದರು.

"ಅಕ್ಸರ್ ಪಟೇಲ್ 13.2 ಓವರ್‌ಗಳಾಗಿದ್ದಾಗ ಬ್ಯಾಟಿಂಗ್ ಮಾಡಲು ಬಂದರು, ಆದರೆ ಆ ಸಮಯದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡಲು ಬಂದಿದ್ದರೆ ಉಳಿದಿರುವ 38 ಎಸೆತಗಳಲ್ಲಿ ಗರಿಷ್ಠ 19-20 ಎಸೆತಗಳನ್ನು ದಿನೇಶ್ ಕಾರ್ತಿಕ್ ಆಡಲು ಅವಕಾಶ ಸಿಗುತ್ತಿತ್ತು" ಎಂದು ಹೇಳಿದ್ದಾರೆ.

ಪಾಂಡ್ಯ ಆಟಕ್ಕೆ ಚೋಪ್ರಾ ಮೆಚ್ಚುಗೆ

ಪಾಂಡ್ಯ ಆಟಕ್ಕೆ ಚೋಪ್ರಾ ಮೆಚ್ಚುಗೆ

30 ಎಸೆತಗಳಲ್ಲಿ 71 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಬಿರುಸಿನ ಹೊಡೆತಕ್ಕೆ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಹಂತದಲ್ಲಿ 190 ರನ್‌ಗಳನ್ನು ತಲುಪಲು ಹೆಣಗಾಡುತ್ತಿರುವಂತೆ ತೋರಿದ ನಂತರ ಆಲ್‌ರೌಂಡರ್ ಪಾಂಡ್ಯ ಏಕಾಂಗಿಯಾಗಿ ಭಾರತವನ್ನು 200 ರನ್‌ಗಳ ಗಡಿ ದಾಟಿಸಿದರು.

"ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ವಿಸ್ಮಯಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಆಫ್-ಸೈಡ್‌ನಲ್ಲಿ ಅವನ ಹೊಡೆತವು ಸಂಪೂರ್ಣ ಉತ್ತಮವಾಗಿದೆ. ಅದಕ್ಕಾಗಿಯೇ ನಾನು ಪಾಂಡ್ಯರನ್ನು ಭಾರತದ ಅತ್ಯಮೂಲ್ಯ ಟಿ20 ಆಟಗಾರ ಎಂದು ಹೇಳಿದ್ದೇನೆ." ಎಂದು ಚೋಪ್ರಾ ಹೇಳಿದರು.

Story first published: Wednesday, September 21, 2022, 16:47 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X