ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus T20: ಈ ಆಟಗಾರ ಟಿ20 ವಿಶ್ವಕಪ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದಾನೆ

ಶುಕ್ರವಾರ (ಸೆಪ್ಟೆಂಬರ್ 23) ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬೌಲಿಂಗ್ ಪ್ರದರ್ಶನಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಮ್, ಆಲ್ ರೌಂಡರ್ ಅಕ್ಷರ್ ಪಟೇಲ್‌ರನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಪವರ್-ಹಿಟ್ಟರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ (0) ಮತ್ತು ಟಿಮ್ ಡೇವಿಡ್ (2) ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಸ್ಪಿನ್ನರ್ ಅಕ್ಷರ್ ಪಟೇಲ್ ಟೀಂ ಇಂಡಿಯಾದ ಗೇಮ್ ಚೇಂಜರ್ ಎಂದು ಸಾಬೀತುಪಡಿಸಿದರು.

ಫೆಡರರ್ ವಿದಾಯದ ವೇಳೆ ನಡಾಲ್ ಕಣ್ಣೀರು: ಕ್ರೀಡೆಯ ಅತ್ಯಂತ ಸುಂದರ ಫೋಟೋ ಎಂದ ವಿರಾಟ್ ಕೊಹ್ಲಿಫೆಡರರ್ ವಿದಾಯದ ವೇಳೆ ನಡಾಲ್ ಕಣ್ಣೀರು: ಕ್ರೀಡೆಯ ಅತ್ಯಂತ ಸುಂದರ ಫೋಟೋ ಎಂದ ವಿರಾಟ್ ಕೊಹ್ಲಿ

ಮಳೆಯಿಂದಾಗಿ ಪಂದ್ಯ ಆರಂಭವಾಗಲು ತಡವಾಗಿದ್ದರಿಂದ 8 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡ ಉತ್ತಮ ಬೌಲಿಂಗ್ ಮಾಡಿದ್ದರಿಂದ ಆಸ್ಟ್ರೇಲಿಯಾ ನಿಗದಿತ 8 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿತು. ಭಾರತದ ಪರವಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ಎರಡು ಓವರ್‌ಗಳಲ್ಲಿ 13 ರನ್ ನೀಡಿ ಎರಡು ಮುಖ್ಯ ವಿಕೆಟ್‌ಗಳನ್ನು ಪಡೆದರು.

ಅಕ್ಷರ್ ಪಟೇಲ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾಬಾ ಕರೀಮ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಹರ್ಷಲ್ ಪಟೇಲ್ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಆಡುವ ಬಳಗದಲ್ಲಿ ಆತನ ಸ್ಥಾನ ಖಚಿತವಾಗಿದೆ

ಆಡುವ ಬಳಗದಲ್ಲಿ ಆತನ ಸ್ಥಾನ ಖಚಿತವಾಗಿದೆ

"ಅಕ್ಷರ್ ಪಟೇಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಆತ ಉತ್ತಮ ಕೌಶಲ್ಯ ಮತ್ತು ಪ್ರಬುದ್ಧತೆಯನ್ನು ಹೊಂದಿದ್ದಾನೆ. ಬಹಳ ಬುದ್ಧಿವಂತ ಮನಸ್ಥಿತಿಯೊಂದಿಗೆ ಬೌಲಿಂಗ್ ಮಾಡುತ್ತಿದ್ದಾನೆ. ಇತ್ತೀಚಿನ ಹಲವು ಪಂದ್ಯಗಳಲ್ಲಿ ಆತ ಭಾರತ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದ್ದಾನೆ" ಎಂದು ಹೇಳಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲೂ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲನೇ ಪಂದ್ಯದಲ್ಲಿ ಎಲ್ಲಾ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಡುವಾಗ ಅಕ್ಷರ್ ಪಟೇಲ್ ಮಾತ್ರ 4 ಓವರ್ ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಪಡೆದಿದ್ದರು.

ಆಸ್ಟ್ರೇಲಿಯಾ ವಿರುದ್ಧ ದುಬಾರಿ ರನ್‌ ಬಿಟ್ಟುಕೊಟ್ಟ ಹರ್ಷಲ್ ಪಟೇಲ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್

ರೋಹಿತ್ ನಾಯಕತ್ವ ಉತ್ತಮವಾಗಿತ್ತು

ರೋಹಿತ್ ನಾಯಕತ್ವ ಉತ್ತಮವಾಗಿತ್ತು

ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆಯೂ ಮಾತನಾಡಿರುವ ಸಾಬಾ ಕರೀಮ್ ಅತ್ಯುತ್ತಮವಾಗಿ ರಣತಂತ್ರ ರೂಪಿಸಿದರು ಎಂದು ಹೊಗಳಿದ್ದಾರೆ.

"ರೋಹಿತ್ ಶರ್ಮಾ ನಾಯಕತ್ವ ತುಂಬಾ ಚೆನ್ನಾಗಿತ್ತು. ಪವರ್‌ಪ್ಲೇನಲ್ಲಿ ಅಕ್ಷರ್ ಪಟೇಲ್‌ರನ್ನು ಬೌಲ್ ಮಾಡುವುದು ಒಂದು ದಿಟ್ಟ ಕ್ರಮವಾಗಿತ್ತು ಮತ್ತು ಇದು ಆಟವನ್ನು ಸಂಪೂರ್ಣವಾಗಿ ಬದಲಾಯಿಸಿತು. ವಿರಾಟ್ ಕೊಹ್ಲಿಯಿಂದ ರನ್ ಔಟ್ ಮತ್ತು ಮ್ಯಾಕ್ಸ್‌ವೆಲ್‌ರನ್ನು ಮೊದಲನೇ ಬಾಲ್‌ಗೆ ಬೌಲ್ಡ್ ಮಾಡಿದ್ದು ಪಂದ್ಯವನ್ನು ಬದಲಾಯಿಸಿತು" ಎಂದು ಹೇಳಿದ್ದಾರೆ.

ನಂತರ ನಾಲ್ಕರನೇ ಓವರ್ ಬೌಲಿಂಗ್‌ ಮಾಡಿದ ಅಕ್ಷರ್ ಪಟೇಲ್ ಟಿಮ್ ಡೇವಿಡ್ ವಿಕೆಟ್ ಪಡೆದರು. ಅವರು ಆಸ್ಟ್ರೇಲಿಯಾದ ಇಬ್ಬರು ದೊಡ್ಡ ಪವರ್-ಹಿಟ್ಟರ್‌ಗಳನ್ನು ಹೊರಹಾಕಿದರು.

ಜಡೇಜಾ ಸ್ಥಾನಕ್ಕೆ ಈತ ಉತ್ತಮ ಆಯ್ಕೆ

ಜಡೇಜಾ ಸ್ಥಾನಕ್ಕೆ ಈತ ಉತ್ತಮ ಆಯ್ಕೆ

ಏಷ್ಯಾಕಪ್‌ ಟೂರ್ನಿ ವೇಳೆ ಗಾಯಗೊಂಡು ವಿಶ್ವಕಪ್‌ನಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಸ್ಥಾನವನ್ನು ಅಕ್ಷರ್ ಪಟೇಲ್ ಸಮರ್ಥವಾಗಿ ತುಂಬಬಲ್ಲರು ಎಂದು ಸಾಬಾ ಕರೀಮ್ ವಿಶ್ವಾಸ ವ್ಯಕ್ತಪಡಿಸಿದರು.

"ಅಕ್ಷರ್ ಪಟೇಲ್ ರವೀಂದ್ರ ಜಡೇಜಾ ಬದಲಿಗೆ ತಂಡಕ್ಕೆ ಬರುತ್ತಿದ್ದಾರೆ ಮತ್ತು ತಂಡಕ್ಕಾಗಿ ಪ್ರದರ್ಶನ ನೀಡುತ್ತಿದ್ದಾರೆ, ಇದು ಅವರ ಬಲವಾದ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ಬ್ಯಾಟಿಂಗ್ ಕೂಡ ಸುಧಾರಿಸುತ್ತಿದೆ ಮತ್ತು ಅವರು ಜಡೇಜಾಗೆ ಉತ್ತಮ ಬದಲಿ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.

ಬ್ಯಾಟಿಂಗ್‌ನಲ್ಲೂ ಉತ್ತಮ ಅಂಕಿ ಅಂಶ

ಬ್ಯಾಟಿಂಗ್‌ನಲ್ಲೂ ಉತ್ತಮ ಅಂಕಿ ಅಂಶ

ಭಾರತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಕ್ಷರ್ ಪಟೇಲ್‌ ಉತ್ತಮ ಬ್ಯಾಟಿಂಗ್ ಕೂಡ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ 40 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದ್ದ ಅಕ್ಷರ್ ಪಟೇಲ್ ಭಾರತ ತಂಡವನ್ನು ಎರಡು ವಿಕೆಟ್‌ಗಳಿಂದ ಗೆಲ್ಲಿಸಿದ್ದರು.

ಅಕ್ಷರ್ ಪಟೇಲ್ ತನ್ನ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ ವೃತ್ತಿಜೀವನದಲ್ಲಿ 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲೂ ಕೂಡ ಅಕ್ಷರ್ ಪಟೇಲ್ ಉತ್ತಮ ರನ್ ಗಳಿಸಿದ್ದಾರೆ.

Story first published: Saturday, September 24, 2022, 16:20 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X