ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: ರೋಹಿತ್-ಕೊಹ್ಲಿ ನಂತರ ಈ ಸಾಧನೆ ಮಾಡಿದ 3ನೇ ಭಾರತೀಯ ಕೆಎಲ್ ರಾಹುಲ್

IND vs AUS T20: KL Rahul Becomes 3rd Indian To Score 2000 Runs In T20 Cricket After Rohit And Kohli

ಮಂಗಳವಾರ ರಾತ್ರಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಭಾರತೀಯ ತಂಡದ ಉಪನಾಯಕ ಕೆಎಲ್ ರಾಹುಲ್ ಟಿ20 ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಬಗ್ಗೆ ಇರುವ ಅನುಮಾನವನ್ನು ಬದಲಾಯಿಸಲು ನೋಡುತ್ತಿದ್ದಾರೆ.

ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗನೆ ಔಟಾಗಿ ನಿರ್ಗಮಿಸಿದ್ದರಿಂದ ಭಾರತಕ್ಕೆ ಅವಳಿ ಆಘಾತ ಬಿದ್ದಿತು. ಆದರೆ ಸೂರ್ಯಕುಮಾರ್ ಯಾದವ್ ಅವರ ಜೊತೆಯಲ್ಲಿ 10 ಓವರ್‌ಗಳ ನಂತರ ಭಾರತ ತಂಡವನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ಯಲು ಕೆಲವು ಸಂತೋಷಕರ ಸಿಕ್ಸರ್‌ಗಳನ್ನು ಬಾರಿಸಿದ್ದರಿಂದ ಕೆಎಲ್ ರಾಹುಲ್ ಪಂದ್ಯದ ಮೇಲೆ ತಮ್ಮದೇ ಆದ ಹಿಡಿತ ಸಾಧಿಸಿದರು.

Ind Vs Aus T20: ರಾಹುಲ್, ಯಾದವ್ ಆರ್ಭಟ, ಪಾಂಡ್ಯ ಪವರ್; ಆಸ್ಟ್ರೇಲಿಯಾಗೆ 209 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾInd Vs Aus T20: ರಾಹುಲ್, ಯಾದವ್ ಆರ್ಭಟ, ಪಾಂಡ್ಯ ಪವರ್; ಆಸ್ಟ್ರೇಲಿಯಾಗೆ 209 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

ಕೆಎಲ್ ರಾಹುಲ್ ಅವರ ಉತ್ತಮ ಬ್ಯಾಟಿಂಗ್ ಸಮಯದಲ್ಲಿ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2000 ರನ್ ಪೂರೈಸಿದರು. ಅವರು ಕಡಿಮೆ ಸ್ವರೂಪದಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಎಲೈಟ್ ಪಟ್ಟಿಯನ್ನು ತಲುಪಿದ ಮೂರನೇ ಭಾರತೀಯ ಆಟಗಾರನಾಗಿದ್ದಾರೆ.

ಟಿ20 ಕ್ರಿಕೆಟ್ ಪಂದ್ಯಗಳಲ್ಲಿ 2000 ರನ್ ಪೂರೈಸಿದ ಮೂರನೇ ಭಾರತೀಯ

ಟಿ20 ಕ್ರಿಕೆಟ್ ಪಂದ್ಯಗಳಲ್ಲಿ 2000 ರನ್ ಪೂರೈಸಿದ ಮೂರನೇ ಭಾರತೀಯ

ಕೆಎಲ್ ರಾಹುಲ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ವೇಗದ ಸ್ಕೋರ್ ಮಾಡುವ ಸಾಮರ್ಥ್ಯಕ್ಕೆ ಸಾಕಷ್ಟು ಉದಾಹರಣೆ ನೀಡಿದರು. ಕೆಎಲ್ ರಾಹುಲ್ ಅವರ ಈ ಸಾಧನೆಯಲ್ಲಿ 40 ಸರಾಸರಿ ಮತ್ತು 140 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಇಂದಿನ ಪಂದ್ಯದ ಅವರ ಇನ್ನಿಂಗ್ಸ್‌ನಲ್ಲಿ 35 ಎಸೆತಗಳಲ್ಲಿ 55 ರನ್ ಬಾರಿಸಿದರು ಮತ್ತು ಇದರಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

ಬಾರತದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಂತರ ಕೆಎಲ್ ರಾಹುಲ್ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ 2000 ರನ್ ಪೂರೈಸಿದ ಮೂರನೇ ಭಾರತೀಯರಾಗಿದ್ದಾರೆ.

ಟಿ20 ಸ್ವರೂಪದಲ್ಲಿ 3500ಕ್ಕೂ ಹೆಚ್ಚು ರನ್ ಗಳಿಸಿರುವ ರೋಹಿತ್-ಕೊಹ್ಲಿ

ಟಿ20 ಸ್ವರೂಪದಲ್ಲಿ 3500ಕ್ಕೂ ಹೆಚ್ಚು ರನ್ ಗಳಿಸಿರುವ ರೋಹಿತ್-ಕೊಹ್ಲಿ

ರೋಹಿತ್ ಮತ್ತು ವಿರಾಟ್ ಇಬ್ಬರೂ ಈ ಸ್ವರೂಪದಲ್ಲಿ 3500ಕ್ಕೂ ಹೆಚ್ಚು ರನ್ ಗಳಿಸುವ ಮೂಲಕಗ ಟಾಪ್ ಇಬ್ಬರು ಆಟಗಾರರಾಗಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಅವರು ಭಾರತೀಯ ಜೋಡಿಯ ನಂತರದ ಸ್ಥಾನದಲ್ಲೊದ್ದಾರೆ, ಅವರು ವರ್ಷಗಳಿಂದಲೂ ಇದ್ದಾರೆ.

ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ನಾಯಕ ಬಾಬರ್ ಅಜಂ ಹೊರತುಪಡಿಸಿ ಟಿ20 ಸ್ವರೂಪದಲ್ಲಿ 40ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಬ್ಯಾಟರ್ ಕೆಎಲ್ ರಾಹುಲ್, ಇದು ಅವರ ಸ್ಥಿರತೆಯ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆಸ್ಟ್ರೇಲಿಯ ವಿರುದ್ಧ ಅವರು ರನ್ ರೇಟ್ ಅನ್ನು ಮತ್ತಷ್ಟು ಹೆಚ್ಚಿಸಲು ನೋಡಿದಾಗ ರಾಹುಲ್ ಅಂತಿಮವಾಗಿ 55 ರನ್ ಗಳಿಸಿ ಔಟಾದರು.

ಟಿ20 ಕ್ರಿಕೆಟ್‌ನಲ್ಲಿ ಮಾರ್ಟಿನ್ ಗಪ್ಟಿಲ್ ಸರಿಗಟ್ಟಿದ ರೋಹಿತ್ ಶರ್ಮಾ

ಟಿ20 ಕ್ರಿಕೆಟ್‌ನಲ್ಲಿ ಮಾರ್ಟಿನ್ ಗಪ್ಟಿಲ್ ಸರಿಗಟ್ಟಿದ ರೋಹಿತ್ ಶರ್ಮಾ

ಆಸ್ಟ್ರೇಲಿಯ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅವರನ್ನು ರೋಹಿತ್ ಶರ್ಮಾ ಸರಿಗಟ್ಟಿದರು.

ಮಾರ್ಟಿನ್ ಗಪ್ಟಿಲ್ ಮತ್ತು ರೋಹಿತ್ ಶರ್ಮಾ ಇಬ್ಬರೂ ಟಿ20 ಕ್ರಿಕೆಟ್‌ನಲ್ಲಿ 172 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಗಪ್ಟಿಲ್ ಅವರ ದಾಖಲೆಯನ್ನು ಮುರಿಯಲು ರೋಹಿತ್ ಶರ್ಮಾಗೆ 2 ಸಿಕ್ಸರ್‌ಗಳು ಬೇಕಾಗಿದ್ದವು. ಆದರೆ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ ಟಿ20 ಪಂದ್ಯದಲ್ಲಿ ಒಂದು ಸಿಕ್ಸರ್ ಬಾರಿಸಿದ ನಂತರ ಭಾರತದ ನಾಯಕನನ್ನು ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಔಟ್ ಮಾಡಿದರು.

ಇನ್ನು ಎರಡು ಬಾರಿಯ ವಿಶ್ವ ಚಾಂಪಿಯನ್‌ಗಾಗಿ ಕೇವಲ 79 ಪಂದ್ಯಗಳಲ್ಲಿ 124 ಸಿಕ್ಸರ್‌ಗಳನ್ನು ಸಿಡಿಸಿರುವ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಗಪ್ಟಿಲ್-ರೋಹಿತ್ ನಂತರದ ಸ್ಥಾನದಲ್ಲಿದ್ದಾರೆ.

Story first published: Wednesday, September 21, 2022, 8:53 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X