ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus T20: ರಾಹುಲ್, ಯಾದವ್ ಆರ್ಭಟ, ಪಾಂಡ್ಯ ಪವರ್; ಆಸ್ಟ್ರೇಲಿಯಾಗೆ 209 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ 209 ರನ್‌ಗಳ ಗುರಿ ನೀಡಿದೆ. ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು.

ಕೆಎಲ್‌ ರಾಹುಲ್ ಭರ್ಜರಿ ಅರ್ಧಶತಕ, ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟ ಮತ್ತು ಅಂತಿಮ ಓವರ್ ಗಳಲ್ಲಿ ಪಾಂಡ್ಯ ಪವರ್ ಫುಲ್ ಅರ್ಧಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆ ಹಾಕಿತು.

ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. 9 ಎಸೆತಗಳಲ್ಲಿ 11 ರನ್ ಗಳಿಸಿದ ನಾಯಕ ರೋಹಿತ್ ಶರ್ಮಾ ಹೇಝಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ರನ್ ಗಳಿಸುವಲ್ಲಿ ವಿಫಲರಾದರು. 7 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿದ ಕೊಹ್ಲಿ ನಥಾನ್ ಎಲ್ಲಿಸ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

T20 World Cup 2022: ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ, ಅಂಕಿಅಂಶT20 World Cup 2022: ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ, ಅಂಕಿಅಂಶ

ಮತ್ತೊಂದೆಡೆ ಉಪನಾಯಕ ಕೆ ಎಲ್‌ ರಾಹುಲ್ ಉತ್ತಮ ಆಟವಾಡಿದರು. ಸೂರ್ಯಕುಮಾರ್ ಯಾದವ್ ಮತ್ತು ಕೆ ಎಲ್‌ ರಾಹುಲ್ ಉತ್ತಮ ಜೊತೆಯಾಟ ಆಡಿದರು. ನಿಧಾನ ಗತಿಯ ಸ್ಟ್ರೈಕ್ ರೇಟ್ ಮತ್ತು ಕಳಪೆ ಫಾರ್ಮ್‌ಗಾಗಿ ಟೀಕೆಗೆ ಗುರಿಯಾಗಿದ್ದ ಕೆ.ಎಲ್ ರಾಹುಲ್ ತಮ್ಮ ಬ್ಯಾಟ್‌ ಮೂಲಕ ಉತ್ತರ ನೀಡಿದರು.

Ind vs Aus T20: KL Rahul Half, Suryakumar Yadav, Hardik Batted Well India Scored 208 Runs

ಕೆ.ಎಲ್ ರಾಹುಲ್ ಭರ್ಜರಿ ಅರ್ಧಶತಕ

ಪ್ರಮುಖ ವಿಕೆಟ್ ಬಿದ್ದರೂ ತಂಡದ ರನ್ ಗಳಿಸುವ ವೇಗ ಕಡಿಮೆಯಾಗಲಿಲ್ಲ. ಪ್ರತಿ ಓವರ್ ನಲ್ಲಿ ಇಬ್ಬರೂ ಆಟಗಾರರು ಬೌಂಡರಿಗಳನ್ನು ಹೊಡೆಯಲು ಪ್ರಯತ್ನಿಸಿದರು. 65 ರನ್‌ಗಳ ಜೊತೆಯಾಟ ಆಡಿದ ಈ ಜೋಡಿಯನ್ನು ಹೇಝಲ್‌ವುಡ್ ರಾಹುಲ್ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು.

35 ಎಸೆತಗಳಲ್ಲಿ 4 ಬೌಂಡರಿ ಭರ್ಜರಿ ಸಿಕ್ಸರ್ ಸಿಡಿಸಿದ ಕೆ ಎಲ್‌ ರಾಹುಲ್‌ 55 ರನ್ ಗಳಿಸಿದರು. ತಮ್ಮ 18ನೇ ಅರ್ಧಶತಕ ಪೂರೈಸುವ ಮೂಲಕ ಕೆ.ಎಲ್‌. ರಾಹುಲ್‌ ಟಿ20 ಮಾದರಿ ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಗಳಿಸಿದರು. 62 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಕೆ.ಎಲ್ ರಾಹುಲ್ 141.31 ಸ್ಟ್ರೈಕ್‌ ರೇಟ್‌ನಲ್ಲಿ 39.57 ಸರಾಸರಿಯಲ್ಲಿ ಈವರೆಗೆ 2018 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಕೂಡ ಸೇರಿದೆ.

Ind vs Aus T20: KL Rahul Half, Suryakumar Yadav, Hardik Batted Well India Scored 208 Runs

ಅಂತಿಮ ಓವರ್ ಗಳಲ್ಲಿ ಪಾಂಡ್ಯ ಪವರ್

ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 46 ರನ್‌ಗಳಿಸಿದರು. 2 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ ಯಾದವ್ ಕ್ಯಾಮೆರೂನ್ ಗ್ರೀನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ ಕೂಡ 5 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು.

ಆದರೆ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಆಟ ಭಾರತ ಬೃಹತ್ ಮೊತ್ತ ಕಲೆ ಹಾಕಲು ನೆರವಾಯಿತು. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಿಸಿದ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಬೌಲರ್ ಗಳ ಬೆವರಿಳಿಸಿದರು. 30 ಎಸೆತಗಳಲ್ಲಿ 7 ಬೌಂಡರಿ 5 ಭರ್ಜರಿ ಸಿಕ್ಸರ್ ನೆರವಿನಿಂದ 71 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರವಾಗಿ ಜೋಶ್ ಹೇಜಲ್‌ವುಡ್ 4 ಓವರ್ ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ನಥಾನ್ ಎಲ್ಲಿಸ್ 4 ಓವರ್ ಗಳಲ್ಲಿ ರನ್ ನೀಡಿ 3 ವಿಕೆಟ್ ಪಡೆದರು.

Story first published: Tuesday, September 20, 2022, 20:53 [IST]
Other articles published on Sep 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X