ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus T20: ಟೀಂ ಇಂಡಿಯಾ ಗೆದ್ದ ನಂತರ ಒಟ್ಟಿಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

ಹೈದರಾಬಾದ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 25) ನಡೆದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ನಂತರ ನಾಯಕ ರೋಹಿತ್ ಶರ್ಮಾ ಮತ್ತು ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಒಟ್ಟಿಗೆ ಸಂಭ್ರಮಿಸಿದರು. ಗೆಲುವಿನೊಂದಿಗೆ, ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು.

End Vs Pak: 3 ರನ್‌ಗಳ ಅಂತರದಲ್ಲಿ ಇಂಗ್ಲೆಂಡ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನEnd Vs Pak: 3 ರನ್‌ಗಳ ಅಂತರದಲ್ಲಿ ಇಂಗ್ಲೆಂಡ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ

187 ರನ್ ಬೆನ್ನಟ್ಟಿದ ಭಾರತಕ್ಕೆ ಸೂರ್ಯಕುಮಾರ್ ಯಾದವ್ (36 ಎಸೆತಗಳಲ್ಲಿ 69) ಮತ್ತು ವಿರಾಟ್ ಕೊಹ್ಲಿ (48 ಎಸೆತಗಳಲ್ಲಿ 63) ಅದ್ಭುತ ಶತಕದ ಜೊತೆಯಾಟದಲ್ಲಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಕೊನೆಯಲ್ಲಿ ಓವರ್ ಗಳಲ್ಲಿ ಪಂದ್ಯ ರೋಚಕ ಘಟ್ಟ ತುಲುಪಿತು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.

ಡೇನಿಯಲ್ ಸಾಮ್ಸ್ ವೈಡ್ ಎಸೆತದಲ್ಲಿ ಪಾಂಡ್ಯ ಬ್ಯಾಟ್‌ಗೆ ಎಡ್ಜ್ ಆದ ರನ್ ಬೌಂಡರಿ ಗೆರೆ ದಾಟುವ ಮೂಲಕ ಭಾರತ ಗೆಲುವು ಸಾಧಿಸಿತು. ಚೆಂಡು ವಿಕೆಟ್‌ಗಳ ಹಿಂದೆ ಬೌಂಡರಿಯತ್ತ ಸಾಗುತ್ತಿದ್ದಾಗ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಒಂದೇ ಸಮನೆ ಪ್ರತಿಕ್ರಿಯಿಸಿ ಗೆಲುವಿನ ಮೆರಗು ತಂದರು. ನಂತರ ಕೊಹ್ಲಿ ತಮ್ಮ ನಾಯಕನ ಬೆನ್ನು ತಟ್ಟಿದಾಗ ಇಬ್ಬರೂ ಬೆಚ್ಚಗಿನ ಅಪ್ಪುಗೆಯನ್ನು ವಿನಿಮಯ ಮಾಡಿಕೊಂಡರು.

ಝಂಪಾ ವಿರುದ್ಧ ವಿರಾಟ್ ಭರ್ಜರಿ ಆಟ

ಝಂಪಾ ವಿರುದ್ಧ ವಿರಾಟ್ ಭರ್ಜರಿ ಆಟ

ಅಲ್ಪ ವಿರಾಮದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ನಂತರ ಕೊಹ್ಲಿ ಸೊಗಸಾದ ಫಾರ್ಮ್ ಪ್ರದರ್ಶಿಸಿದ್ದಾರೆ. ಅವರು ಏಷ್ಯಾ ಕಪ್‌ನಲ್ಲಿ ಭಾರತದ ಪ್ರಮುಖ ರನ್ ಸ್ಕೋರರ್ ಆಗಿದ್ದರು ಮತ್ತು ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದರು.

ವಿರಾಟ್ ಕೊಹ್ಲಿ ಆಟದ ಗಮನಾರ್ಹ ಅಂಶವೆಂದರೆ ಅವರು ಲೆಗ್-ಸ್ಪಿನ್ನರ್ ಆಡಮ್ ಝಂಪಾ ವಿರುದ್ಧ ಭಯವಿಲ್ಲದೆ ರನ್ ಹೊಡೆದ ರೀತಿ. ಈ ಹಿಂದೆ ಝಂಪಾ ಹಲವು ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು. ಹಿಂದಿನ ಪಂದ್ಯದಲ್ಲೂ ಝಂಪಾ ಕೊಹ್ಲಿಯನ್ನು ಔಟ್ ಮಾಡಿದ್ದರು. ಝಂಪಾ ಅವರ ಮೇಲೆ ದಾಳಿ ಮಾಡಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

IND vs AUS: ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಮಣಿಸಿ ಪಾಕಿಸ್ತಾನದ ಟಿ20 ದಾಖಲೆ ಮುರಿದ ಭಾರತ

 ಆತನ ವಿರುದ್ಧ ಉತ್ತಮವಾಗಿ ಆಡಬೇಕಿತ್ತು

ಆತನ ವಿರುದ್ಧ ಉತ್ತಮವಾಗಿ ಆಡಬೇಕಿತ್ತು

"ನಾನು ನನ್ನ ಅನುಭವವನ್ನು ಬಳಸಿಕೊಳ್ಳಬೇಕು ಮತ್ತು ತಂಡಕ್ಕೆ ಏನು ಬೇಕೋ ಅದನ್ನು ತಂಡಕ್ಕೆ ನೀಡಬೇಕು. ನಾನು ಉತ್ತಮ ಆರಂಭವನ್ನು ಪಡೆದಿದ್ದೆ ನಂತರ ನಾನು ಝಂಪಾ ವಿರುದ್ಧ ರನ್ ಹೊಡೆಯಬೇಕಾಗಿತ್ತು, ಏಕೆಂದರೆ ಆತ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿದ್ದಾರೆ." ಎಂದು ಹೇಳಿದರು.

ಸೂರ್ಯ ಹಾಗೆ ಹೊಡೆಯಲು ಪ್ರಾರಂಭಿಸಿದಾಗ, ನಾನು ಡಗ್-ಔಟ್ ಅನ್ನು ನೋಡಿದೆ. ರೋಹಿತ್ ಮತ್ತು ದ್ರಾವಿಡ್ ಭಾಯ್ ಇಬ್ಬರೂ ನನಗೆ 'ನೀವು ಬ್ಯಾಟಿಂಗ್ ಮುಂದುವರಿಸಬಹುದು' ಎಂದು ಹೇಳಿದರು. ಏಕೆಂದರೆ ಸೂರ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಜೊತೆಯಾಟ ಉತ್ತಮವಾಗಿಸಲು ನಾನು ನನ್ನ ಅನುಭವವನ್ನು ಸ್ವಲ್ಪಮಟ್ಟಿಗೆ ಬಳಸಿದ್ದೇನೆ," ಎಂದು ಕೊಹ್ಲಿ ಹೇಳಿದರು.

ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತೇನೆ

ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತೇನೆ

"ತಂಡಕ್ಕೆ ನನ್ನ ಕೊಡುಗೆಯಿಂದ ನನಗೆ ಸಂತೋಷವಾಗಿದೆ, ನಾನು ವಿರಾಮ ತೆಗೆದುಕೊಂಡೆ, ನೆಟ್ಸ್‌ಗೆ ಹಿಂತಿರುಗಿದೆ, ನನ್ನ ಫಿಟ್‌ನೆಸ್‌ನಲ್ಲಿ ಶ್ರಮಿಸಿದೆ. ಉತ್ತಮವಾಗಿ ಆಟವಾಡುತ್ತಿದ್ದೇನೆ ನಾನು ಭಾವಿಸುತ್ತೇನೆ. ನಾನು ತಂಡಕ್ಕೆ ನನ್ನ ಕೈಲಾದಷ್ಟು ಕೊಡುಗೆಯನ್ನು ನೀಡಲು ಬಯಸುತ್ತೇನೆ." ಎಂದು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದ ನಂತರ ಹೇಳಿದರು.

ವಿರಾಟ್ ಕೊಹ್ಲಿ ತಮ್ಮ 33ನೇ ಅರ್ಧಶತಕವನ್ನು ಗಳಿಸಿದರೆ. ಅತ್ಯುತ್ತಮ ಸ್ಟ್ರೋಕ್‌ಪ್ಲೇ ಮೂಲಕ ಪಂದ್ಯದ ಗೆಲುವಿಗಾಗಿ ಉತ್ತಮ ರನ್ ಕಲೆಹಾಕಿದ ಸೂರ್ಯಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಪಂದ್ಯ ಒಂದು, ಅರ್ಧಶತಕ ನಾಲ್ಕು

ಪಂದ್ಯ ಒಂದು, ಅರ್ಧಶತಕ ನಾಲ್ಕು

ರೋಹಿತ್ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಕ್ಯಾಮರೂನ್ ಗ್ರೀನ್ (21 ಎಸೆತಗಳಲ್ಲಿ 52) ಮತ್ತು ಟಿಮ್ ಡೇವಿಡ್ (27 ಎಸೆತಗಳಲ್ಲಿ 54) ತ್ವರಿತ ಅರ್ಧಶತಕಗಳ ನೆರವಿನಿಂದ 7 ವಿಕೆಟ್‌ಗೆ ಆಕರ್ಷಕ 186 ರನ್ ಗಳಿಸಿದರು.

ಭಾರತ ತಂಡವು ರೋಹಿತ್ (17) ಮತ್ತು ಕೆಎಲ್ ರಾಹುಲ್ (1) ಅವರನ್ನು ಚೇಸಿಂಗ್‌ನ ಆರಂಭದಲ್ಲಿಯೇ ಕಳೆದುಕೊಂಡಿತು. ಆದಾಗ್ಯೂ, ಹಾರ್ದಿಕ್ ಬಂದು ಅಂತಿಮ ಸ್ಪರ್ಶ ನೀಡುವ ಮೊದಲು ಕೊಹ್ಲಿ ಮತ್ತು ಸೂರ್ಯಕುಮಾರ್ ಸೊಗಸಾದ ಜೊತೆಯಾಟದಲ್ಲಿ ಕಾಣಿಸಿಕೊಂಡರು.

Story first published: Monday, September 26, 2022, 0:39 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X