ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS 2022: ದಿನೇಶ್‌ ಕಾರ್ತಿಕ್ ವಿಚಾರದಲ್ಲಿ ಮತ್ತೆ ಈ ತಪ್ಪು ಮಾಡಬೇಡಿ ಎಂದ ಗವಾಸ್ಕರ್

ಸೆಪ್ಟೆಂಬರ್ 20 ರ ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. ಮೊಹಾಲಿ ಪಿಚ್‌ನಲ್ಲಿ 208 ರನ್ ಗಳಿಸಿದರು ಕೂಡ ಟೀಂ ಇಂಡಿಯಾ ಸೋಲನುಭವಿಸಲು ಕೆಟ್ಟ ಬೌಲಿಂಗ್ ಕಾರಣ ಎಂದು ವಿಮರ್ಶಿಸಲಾಗುತ್ತಿದೆ. ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ತಂಡ ಮಾಡಿದ ತಪ್ಪುಗಳ ಬಗ್ಗೆ ಪಟ್ಟಿ ಮಾಡಲಾಗಿತ್ತಿದೆ. ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಭಾರತ ತಂಡ ಮಾಡಿದ ತಪ್ಪಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಬೂಮ್ರಾ, ಯುಜಿ ಅಲ್ಲ: ಈ ವಿದೇಶಿ ಆಟಗಾರನೇ ನನ್ನ ನೆಚ್ಚಿನ ಬೌಲಿಂಗ್ ಪಾರ್ಟ್ನರ್ ಎಂದ ರವಿ ಬಿಷ್ಣೋಯ್ಬೂಮ್ರಾ, ಯುಜಿ ಅಲ್ಲ: ಈ ವಿದೇಶಿ ಆಟಗಾರನೇ ನನ್ನ ನೆಚ್ಚಿನ ಬೌಲಿಂಗ್ ಪಾರ್ಟ್ನರ್ ಎಂದ ರವಿ ಬಿಷ್ಣೋಯ್

5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾದ ದಿನೇಶ್ ಕಾರ್ತಿಕ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಅಕ್ಷರ್ ಪಟೇಲ್‌ಗೆ ಬಡ್ತಿ ನೀಡಿ ದಿನೇಶ್ ಕಾರ್ತಿಕ್ ಬದಲಾಗಿ ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ನಾಯಕ ರೋಹಿತ್ ಶರ್ಮಾ ಮಾಡಿದ ಈ ನಿರ್ಧಾರದ ಬಗ್ಗೆ ಸುನಿಲ್ ಗವಾಸ್ಕರ್ ಟೀಕೆ ಮಾಡಿದ್ದಾರೆ.

ದಿನೇಶ್‌ ಕಾರ್ತಿಕ್‌ರನ್ನು ಮುಂಚಿತವಾಗಿ ಬ್ಯಾಟಿಂಗ್‌ಗೆ ಕಳುಹಿಸದೆ 2-3 ಓವರ್ ಇದ್ದಾಗ ಬ್ಯಾಟಿಂಗ್‌ಗೆ ಕಳುಹಿಸುವ ನಿರ್ಧಾರವನ್ನು ವಿರೋಧಿಸಿದ್ದಾರೆ. ಆಟದ ಪರಿಸ್ಥಿತಿಯನ್ನು ಲೆಕ್ಕಿಸದೆ ನಿರ್ದಿಷ್ಟ ಪರಿಕಲ್ಪನೆಗೆ ಅಂಟಿಕೊಳ್ಳುವ ಬಲೆಗೆ ಬೀಳದಂತೆ ಅವರು ತಂಡದ ನಿರ್ವಹಣೆಗೆ ಎಚ್ಚರಿಕೆ ನೀಡಿದರು.

ಬ್ಯಾಟಿಂಗ್‌ನಲ್ಲಿ ಅಕ್ಷರ್‍‌ ಪಟೇಲ್‌ಗೆ ಬಡ್ತಿ

ಬ್ಯಾಟಿಂಗ್‌ನಲ್ಲಿ ಅಕ್ಷರ್‍‌ ಪಟೇಲ್‌ಗೆ ಬಡ್ತಿ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಕಾರ್ತಿಕ್ 16 ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದರು. ಅಕ್ಸರ್ ಪಟೇಲ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೀಪರ್-ಬ್ಯಾಟರ್‌ಗಿಂತ ಬಡ್ತಿ ಪಡೆದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಪ್ರಭಾವ ಬೀರಲು ವಿಫಲರಾದರು ಮತ್ತು ತಲಾ 6 ರನ್‌ಗಳಿಗೆ ಔಟಾದರು.

ಕಾರ್ತಿಕ್ ಕೊನೆಯ 3-4 ಓವರ್‌ಗಳಲ್ಲಿ ಮಾತ್ರ ಬ್ಯಾಟಿಂಗ್‌ಗೆ ಇಳಿಯುತ್ತಾರೆ ಎಂದು ಟೀಮ್ ಇಂಡಿಯಾ ನಿರ್ಧರಿಸಿದೆ. ಆರಂಭಿಕ ಪಂದ್ಯದಲ್ಲಿ ಅಕ್ಷರ್ ಪಟೇಲ್‌ರನ್ನು ದಿನೇಶ್‌ ಕಾರ್ತಿಗ್‌ಗಿಂತ ಮುಂಚಿತವಾಗಿ ಕಳುಹಿಸುವ ಭಾರತದ ನಿರ್ಧಾರವನ್ನು ನೀವು ಒಪ್ಪುತ್ತೀರಾ ಎಂದು ಕೇಳಿದಾಗ, ಗವಾಸ್ಕರ್ ಇಲ್ಲ ಎಂದು ಹೇಳಿದ್ದಾರೆ.

Ind vs Aus: 48 ಎಸೆತ 101 ರನ್, ಭುವಿ ಮತ್ತು ಹರ್ಷಲ್ ಪಟೇಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ!

ಕೊನೆಯ 3-4 ಓವರ್‌ಗಳಿಗೆ ಸೀಮಿತ ಮಾಡಬೇಡಿ

ಕೊನೆಯ 3-4 ಓವರ್‌ಗಳಿಗೆ ಸೀಮಿತ ಮಾಡಬೇಡಿ


"ದಿನೇಶ್ ಕಾರ್ತಿಕ್ ಅಕ್ಷರ್ ಪಟೇಲ್‌ಗಿಂತ ಉತ್ತಮ ಬ್ಯಾಟ್ಸ್‌ಮನ್ ಎಂದು ನೀವು ಭಾವಿಸಿದರೆ, ಅವರು 12 ಅಥವಾ 13 ನೇ ಓವರ್ ಆಗಿದ್ದರೂ ಬ್ಯಾಟಿಂಗ್‌ಗೆ ಬರಬೇಕು. ಕೊನೆಯ 3-4 ಓವರ್‌ಗಳಿಗೆ ಮಾತ್ರ ಬರುವುದು ಈ ವಿಷಯವಲ್ಲ. ನಾವು ಸಿದ್ಧಾಂತದ ಮೂಲಕ ಹೋಗಬಾರದು" ಎಂದು ಹೇಳಿದ್ದಾರೆ.

ಪ್ರತಿ ಬಾರಿಯೂ ಕೊನೆಯ 3-4 ಓವರ್‌ಗಳಲ್ಲಿ ಅದೇ ರೀತಿ ರನ್ ಗಳಿಸುವುದು ಸುಲಭವಲ್ಲ, ಅಗ್ರ ಆಟಗಾರರ ವಿಕೆಟ್ ಕಳೆದುಕೊಂಡಾಗ ಕೊನೆಯ ಓವರ್ ವರೆಗೆ ದಿನೇಶ್‌ ಕಾರ್ತಿಕ್‌ರನ್ನು ಕಾಯಿಸುವುದು ಸರಿಯಲ್ಲ, ಪರಿಸ್ಥಿತಿಗೆ ಅನುಗುಣವಾಗಿ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲಿಷ್‌ನವರ ಮನಸ್ಥಿತಿ ಬಿಟ್ಟುಬಿಡಿ

ಇಂಗ್ಲಿಷ್‌ನವರ ಮನಸ್ಥಿತಿ ಬಿಟ್ಟುಬಿಡಿ

"ಇಂಗ್ಲಿಷ್ ಕ್ರಿಕೆಟ್ ಸಿದ್ಧಾಂತವನ್ನು ಅನುಸರಿಸದೆ ಹೇಗೆ ಬದಲಾಗಿದೆ ಎಂಬುದನ್ನು ನೀವು ನೋಡಿಬೇಕಿದೆ. ಇಂಗ್ಲೆಂಡ್ ತಂಡ ಈಗ ತುಂಬಾ ಮುಕ್ತ ಕ್ರಿಕೆಟ್ ಆಡುತ್ತಿದ್ದಾರೆ. ಇದು ಸಂಭವಿಸಿದರೆ ಮಾತ್ರ ಇದು ಸಂಭವಿಸುತ್ತದೆ ಎಂಬ ಸಿದ್ಧಾಂತಕ್ಕೆ ಅವರು ಜೋತುಬಿದ್ದಿಲ್ಲ. ಅವರ ಕ್ರಿಕೆಟ್‌ ತಂತ್ರದಲ್ಲಿನ ವ್ಯತ್ಯಾಸ ಮತ್ತು ಅವರ ಫಲಿತಾಂಶಗಳಲ್ಲಿನ ವ್ಯತ್ಯಾಸವನ್ನು ನೋಡಿ." ಎಂದು ಹೇಳಿದರು.

ಸಿದ್ಧಾಂತಗಳ ಬಲೆಗೆ ಬೀಳದಂತೆ ಭಾರತ ತಂಡ ಎಚ್ಚರಿಕೆಯಿಂದ ಇರಬೇಕು. ಅವರು ಪರಿಸ್ಥಿತಿಯ ಪ್ರಾಯೋಗಿಕತೆಯನ್ನು ನೋಡಬೇಕು ಮತ್ತು ಅದಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

 ಉತ್ತಮ ಬ್ಯಾಟಿಂಗ್, ಕೈಕೊಟ್ಟ ಬೌಲಿಂಗ್

ಉತ್ತಮ ಬ್ಯಾಟಿಂಗ್, ಕೈಕೊಟ್ಟ ಬೌಲಿಂಗ್

ದಿನೇಶ್ ಕಾರ್ತಿಕ್ ಮತ್ತು ಅಕ್ಷರ್ ಪಟೇಲ್ ಹೆಚ್ಚಿನ ರನ್ ಗಳಿಸಲು ವಿಫಲರಾದರು. ಟೀಂ ಇಂಡಿಯಾ ರಾಹುಲ್ (55), ಸೂರ್ಯಕುಮಾರ್ (46) ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ಅಜೇಯ 71 ರನ್‌ಗಳ ಸಹಾಯದಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 208 ರನ್‌ಗಳ ಬೃಹತ್ ಮೊತ್ತ ಗಳಿಸಿತು.

ಟೀಂ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಯಶಸ್ವಿಯಾಗಿ ತಲುಪಿದ ಆಸ್ಟ್ರೇಲಿಯಾ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆಸ್ಟ್ರೇಲಿಯಾ ಪರ ಕ್ಯಾಮರೂನ್ ಗ್ರೀನ್ 30 ಎಸೆತಗಳಲ್ಲಿ 61 ರನ್ ಗಳಿಸಿದರೆ, ಮ್ಯಾಥ್ಯೂ ವೇಡ್ 21 ಎಸೆತಗಳಲ್ಲಿ 45 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕೊಡುಗೆ ನೀಡಿದರು.

Story first published: Wednesday, September 21, 2022, 15:28 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X