ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus T20: ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ಗೆ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ವೈರಲ್

ಏಷ್ಯಾ ಕಪ್‌ನ ಅಂತಿಮ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಕೇವಲ ಎರಡು ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.

ಆದಾಗ್ಯೂ, ಅವರ ಅನಿಮೇಟೆಡ್ ಪ್ರತಿಕ್ರಿಯೆಗಳು ಉತ್ತಮ ವೀಕ್ಷಣೆಗೆ ಕಾರಣವಾಗುವುದರಿಂದ ಅವರ ಮೇಲೆ ಸದಾ ಕ್ಯಾಮೆರಾ ಕಣ್ಣು ಇದ್ದೇ ಇರುತ್ತದೆ. ಆಸೀಸ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಸಿಡಿಸಿದ ಬೌಂಡರಿಗೆ ವಿರಾಟ್ ಕೊಟ್ಟಿರುವ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.

Ind vs Aus T20: 2 ರನ್‌ ಗಳಿಸಿ ಔಟ್ ಆದ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳ ಟೀಕೆInd vs Aus T20: 2 ರನ್‌ ಗಳಿಸಿ ಔಟ್ ಆದ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳ ಟೀಕೆ

ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ, ಉಮೇಶ್ ಯಾದವ್ ಅವರ ಪೂರ್ಣ ಎಸೆತದಲ್ಲಿ ಕ್ರಿಸ್ ಗ್ರೀನ್ ಮಿಡ್‌ ಆನ್ ಫೀಲ್ಡರ್ ತಲೆ ಮೇಲೆ ಬೌಂಡರಿ ಬಾರಿಸಿದರು. ಗ್ರೀನ್ ಹೊಡೆತಕ್ಕೆ ಕಣ್ಣುಗುಡ್ಡೆಗಳನ್ನು ಸೆಳೆಯುವ ಮೂಲಕ ಕೊಹ್ಲಿ ಪ್ರತಿಕ್ರಿಯೆ ನೀಡಿದರು. ಕ್ರಿಸ್‌ ಗ್ರೀನ್ ಬ್ಯಾಟಿಂಗ್ ಕೌಶಲ್ಯಕ್ಕೆ ಆಶ್ಚರ್ಯಚಕಿತರಾದರು. ಅವರ ಪ್ರತಿಕ್ರಿಯೆಯು ಗ್ರೀನ್ ಆ ಚೆಂಡನ್ನು ಎಷ್ಟು ಕಠಿಣವಾಗಿ ಹೊಡೆದಿದ್ದಾರೆ ಎನ್ನುವುದನ್ನು ಹೇಳುತ್ತಿತ್ತು.

ಮೀಮ್ ಆಯ್ತು ಕೊಹ್ಲಿ ನೋಟ

ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಗೊಂದಲದ ನೋಟವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮೀಮ್ ಆಗಿ ಮಾರ್ಪಟ್ಟಿದೆ. ಭಾರತದ ಸ್ಟಾರ್ ಕ್ರಿಕೆಟಿಗನ ನೋಟವನ್ನು ವೈರಲ್ ಮೀಮ್ ಆಗಿ ಪರಿವರ್ತಿಸಲು ಟ್ವಿಟ್ಟರ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಹಲವು ಮೀಮ್‌ಗಳು ಹರಿದಾಡಿದವು.

Ind vs Aus T20: Virat Kohlis Reaction For Cameron Green Powerful Shot Went Viral

209 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯ ಅಮೋಘ ಆರಂಭವನ್ನು ಪಡೆದುಕೊಂಡಿತು, ಅರ್ಧ ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಕ್ಯಾಮರೂನ್ ಗ್ರೀನ್ ಕೇವಲ 30 ಎಸೆತಗಳಲ್ಲಿ 61 ರನ್ ಗಳಿಸಿ ಭಾರತೀಯ ಬೌಲರ್‌ಗಳನ್ನು ದಂಡಿಸಿದರು.

ಅಬ್ಬರದ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪುವ ಮೂಲಕ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ನಡೆಯಲಿದೆ.

Story first published: Wednesday, September 21, 2022, 17:27 [IST]
Other articles published on Sep 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X