ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus Test: ಮಾರ್ನಸ್ ಲ್ಯಾಬುಸ್ಚಾಗ್ನೆಗೆ ಈ ಮೂವರು ಭಾರತದ ಬೌಲರ್‌ಗಳಿಂದಲೇ ತೊಂದರೆ!

Ind Vs Aus Test: Know About 3 Bowlers Wholl Be The Biggest Problem To Marnus Labuschagne

ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಠಿಣ ಅಭ್ಯಾಸ ಮಾಡುತ್ತಿವೆ. ಭಾರತ ತಂಡ ನಾಗ್ಪುರದಲ್ಲಿ ತರಬೇತಿ ಪಡಯುತ್ತಿದ್ದರೆ, ಆಸ್ಟ್ರೇಲಿಯಾ ಆಟಗಾರರು ಬೆಂಗಳೂರು ಹೊರವಲಯದಲ್ಲಿರುವ ಆಲೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಭಾರತದ ವಿರುದ್ಧ ಸರಣಿ ಗೆಲ್ಲುವುದನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದೆ. 2004-05ರ ನಂತರ ಅವರು ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ, ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯೆ ಕೊನೆಯ ಎರಡು ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿದೆ. ಕಳೆದ ಬಾರಿ ಆಸ್ಟ್ರೇಲಿಯಾ ತವರಿನಲ್ಲೇ ಸರಣಿ ಸೋತು ಮುಖಭಂಗ ಅನುಭವಿಸಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ ಪ್ರವೇಶಿಸಲು ಭಾರತ ತಂಡಕ್ಕೆ ಸರಣಿ ಗೆಲ್ಲುವುದು ಪ್ರಮುಖವಾಗಿದೆ. ಆದರೆ, ಭಾರತಕ್ಕೆ ಆಸ್ಟ್ರೇಲಿಯಾದ ವಿಶ್ವದ ಅತ್ಯುತ್ತಮ ಬ್ಯಾಟರ್ ಗಳನ್ನು ಕಟ್ಟಿಹಾಕುವುದು ಸುಲಭದ ವಿಚಾರವಲ್ಲ.

ಈ ಇಬ್ಬರಲ್ಲಿ ಈತ ಮಾತ್ರ ಮುಂದಿನ ಟಿ20 ವಿಶ್ವಕಪ್ ಆಡುತ್ತಾನೆ; ವಾಸಿಂ ಜಾಫರ್ ಭವಿಷ್ಯಈ ಇಬ್ಬರಲ್ಲಿ ಈತ ಮಾತ್ರ ಮುಂದಿನ ಟಿ20 ವಿಶ್ವಕಪ್ ಆಡುತ್ತಾನೆ; ವಾಸಿಂ ಜಾಫರ್ ಭವಿಷ್ಯ

ಸ್ಟೀವ್ ಸ್ಮಿತ್ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ. ಮಾರ್ನಸ್ ಲ್ಯಾಬುಸ್ಚಾಗ್ನೆ ಸದ್ಯ ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟರ್ ಆಗಿದ್ದಾರೆ. ಲ್ಯಾಬುಸ್ಚಾಗ್ನೆ ಯಾವುದೇ ಎದುರಾಳಿಗಳಿಗೂ ಅಪಾಯಕಾರಿ ಬ್ಯಾಟರ್ ಆಗಿದ್ದಾರೆ. ದೊಡ್ಡ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಿ ಅವರು ಅದನ್ನು ಸಾಬೀತು ಮಾಡಿದ್ದಾರೆ.

ಮಾರ್ನಸ್ ಲ್ಯಾಬುಸ್ಚಾಗ್ನೆಯನ್ನು ಕಟ್ಟಿಹಾಕಲು ಭಾರತ ಕೂಡ ಪ್ರಮುಖ ಬೌಲಿಂಗ್ ಅಸ್ತ್ರಗಳನ್ನು ಹೊಂದಿದೆ. ಈ ಮೂವರು ಬೌಲರ್‌ಗಳು ಅವರಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಕಂಟಕವಾಗುವ ಸಾಧ್ಯತೆ ಇದೆ.

ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ

ಜಡೇಜಾ ಭಾರತದ ಪ್ರಮುಖ ಅಸ್ತ್ರ

ಜಡೇಜಾ ಭಾರತದ ಪ್ರಮುಖ ಅಸ್ತ್ರ

ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ.

2017ರಲ್ಲಿ ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ಸರಣಿಯಲ್ಲಿ 25 ವಿಕೆಟ್‌ ಪಡೆಯುವ ಮೂಲ ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಬ್ಯಾಟಿಂಗ್ ಮಾಡುವುದು ಭಾರತಕ್ಕೆ ದೊಡ್ಡ ಆಸ್ತಿಯಾಗಿದೆ. ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ನಾಯಕನಾಗಿ ಆಡಿದ್ದ ಜಡೇಜಾ, ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ಪಡೆದು ಎದುರಾಳಿಗಳಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ ಮೂರು ಬಾರಿ ಲ್ಯಾಬುಸ್‌ಚಾಗ್ನೆ ವಿಕೆಟ್ ಪಡೆದಿದ್ದಾರೆ. ನಂಬರ್ 1 ಬ್ಯಾಟರ್ ಮತ್ತು ನಂಬರ್ 1 ಆಲ್‌ರೌಂಡರ್ ನಡುವಿನ ಹಣಾಹಣಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಶ್ವಿನ್ ಬೌಲಿಂಗ್ ಬಗ್ಗೆ ಭಯ

ಅಶ್ವಿನ್ ಬೌಲಿಂಗ್ ಬಗ್ಗೆ ಭಯ

ರವಿಚಂದ್ರನ್ ಅಶ್ವಿನ್ ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚಿನ ತೊಂದರೆ ನೀಡಿದ್ದರು. ಮಾರ್ನಸ್ ಲ್ಯಾಬುಸ್ಚಾಗ್ನೆಯವರನ್ನು ಎರಡು ಬಾರಿ ಔಟ್ ಮಾಡಿದ್ದರು.

ರವಿಚಂದ್ರನ್ ಅಶ್ವಿನ್ ಬೌಲಿಂಗ್‌ ವಿರುದ್ಧ ಆಡಲು ಲ್ಯಾಬುಸ್ಚಾಗ್ನೆ ಕಷ್ಟಪಟ್ಟಿರುವುದು ಸ್ಪಷ್ಟವಾಗಿ ತಿಳಿದಿದೆ. ರವಿಚಂದ್ರನ್ ಅಶ್ವಿನ್‌ ಬೌಲಿಂಗ್‌ನಲ್ಲಿ ಆಡುವುದು ಕಷ್ಟ ಎಂದು ಲ್ಯಾಬುಸ್ಚಾಗ್ನೆ ಒಪ್ಪಿಕೊಂಡಿದ್ದಾರೆ. ಅವರ ಬೌಲಿಂಗ್ ಎದುರಿಸಲು ಬ್ಯಾಟಿಂಗ್ ಶೈಲಿಯಲ್ಲಿ ಬದಾಲಾವಣೆ ಮಾಡಿಕೊಳ್ಳಬೇಕಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ.

ಇಬ್ಬರೂ ಕೂಡ ಅತ್ಯಂತ ಬುದ್ಧಿವಂತ ಆಟಗಾರರು, ಟೆಸ್ಟ್ ಆಟದಲ್ಲಿ ಕೌಶಲ್ಯದ ಜೊತೆ ಮೈಂಡ್‌ ಗೇಮ್‌ ಕೂಡ ಮುಖ್ಯವಾಗುತ್ತದೆ. ಯಾರು ಯಾರ ಮೇಲೆ ಸವಾರಿ ಮಾಡುತ್ತಾರೆ ಎನ್ನುವುದು ಫೆಬ್ರವರಿ 9ರ ಬಳಿಕ ತಿಳಿಯಲಿದೆ.

 ಮೊಹಮ್ಮದ್ ಸಿರಾಜ್ ಸ್ವಿಂಗ್‌

ಮೊಹಮ್ಮದ್ ಸಿರಾಜ್ ಸ್ವಿಂಗ್‌

ಮೊಹಮ್ಮದ್ ಸಿರಾಜ್‌ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಔಟ್ ಮಾಡಿದ್ದೇ ಮಾರ್ನಸ್ ಲ್ಯಾಬುಸ್ಚಾಗ್ನೆಯವರನ್ನು. ಸಿರಾಜ್ ಇಂದು ಭಾರತದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರು. ಏಕದಿನ ಮಾದರಿಯಲ್ಲಿ ಸದ್ಯ ನಂಬರ್ 1 ಆಗಿರುವ ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ.

ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸಿರಾಜ್ 13 ವಿಕೆಟ್ ಪಡೆದುಕೊಂಡಿದ್ದರು. ಅವರು ಎರಡು ಬಾರಿ ಲ್ಯಾಬುಸ್ಚಾಗ್ನೆಯನ್ನು ಔಟ್ ಮಾಡಿದ್ದಾರೆ. ಪಿಚ್‌ ಏನಾದರೂ ಸ್ವಿಂಗ್‌ಗೆ ನೆರವು ನೀಡಿದರೆ ಸಿರಾಜ್ ಮಾರಕವಾಗುತ್ತಾರೆ.

Story first published: Saturday, February 4, 2023, 11:55 [IST]
Other articles published on Feb 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X