ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND Vs AUS Test : ಅಶ್ವಿನ್‌ ರೀತಿಯಲ್ಲೇ ಬೌಲಿಂಗ್: ಮಹೇಶ್ ಪಿಥಿಯಾ ಬೌಲಿಂಗ್‌ಗೆ ದಂಗಾದ ಆಸ್ಟ್ರೇಲಿಯಾ ಆಟಗಾರರು!

IND Vs AUS Test : Mahesh Pithiya Who Bowling Like R. Ashwin Impress Steve Smith In Nets

ಭಾರತದ ಸ್ಪಿನ್‌ ದಾಳಿಗೆ ಹೆದರಿರುವ ಆಸ್ಟ್ರೇಲಿಯಾ ಪಡೆ ಸ್ಪಿನ್ನರ್ ಗಳನ್ನು ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಎದುರಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಬೆಂಗಳೂರಿನ ಆಲೂರಿನಲ್ಲಿ ಅಭ್ಯಾಸ ಮಾಡುತ್ತಿರುವ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ಪ್ರಮುಖ ಸ್ಪಿನ್ನರ್ ಅಶ್ವಿನ್‌ರಂತೆಯೇ ಬೌಲಿಂಗ್ ಮಾಡುವ ಬೌಲರ್ ದೊರಕಿದ್ದಾರೆ.

ಬರೋಡಾದ ಸ್ಪಿನ್ನರ್ ಮಹೇಶ್ ಪಿಥಿಯಾ ಆರ್. ಅಶ್ವಿನ್‌ರಂತೆಯೇ ಬೌಲಿಂಗ್ ಮಾಡುವುದನ್ನು ಕಂಡು ಆಸ್ಟ್ರೇಲಿಯಾ ಆಟಗಾರರು ದಂಗಾಗಿದ್ದಾರೆ. ಅಶ್ವಿನ್‌ರನ್ನು ಎದುರಿಸಲು ಇದೇ ಸುವರ್ಣ ಅವಕಾಶ ಎಂದು ಅರಿತಿರುವ ಅವರು ಪಿಥಿಯಾ ಬೌಲಿಂಗ್‌ ವಿರುದ್ಧ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.

Ranji Trophy: ಆಂಧ್ರ ಮಣಿಸಿ ಸೆಮಿಫೈಲ್‌ ಪ್ರವೇಶಿಸಿದ ಹಾಲಿ ಚಾಂಪಿಯನ್ ಮಧ್ಯಪ್ರದೇಶRanji Trophy: ಆಂಧ್ರ ಮಣಿಸಿ ಸೆಮಿಫೈಲ್‌ ಪ್ರವೇಶಿಸಿದ ಹಾಲಿ ಚಾಂಪಿಯನ್ ಮಧ್ಯಪ್ರದೇಶ

ಆಸ್ಟ್ರೇಲಿಯಾದ ಆಟಗಾರ ಮ್ಯಾಥ್ಯೂ ರೆನ್‌ಶಾ ಅಶ್ವಿನ್‌ರಂತೆಯೇ ಬೌಲಿಂಗ್ ಮಾಡುವ ಮಹೇಶ್‌ ಪಿಥಿಯಾರನ್ನು ಮೊದಲು ಗುರುತಿಸಿದರು. ನಂತರ ಆಸ್ಟ್ರೇಲಿಯಾ ಬ್ಯಾಟರ್‌ಗಳಿಗೆ ಆತನ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ನೆಟ್ಸ್‌ನಲ್ಲಿ ಆಡುತ್ತಿದ್ದ ಸ್ಟೀವ್ ಸ್ಮಿತ್ ಕೂಡ ಪಿಥಿಯಾ ಬೌಲಿಂಗ್ ಶೈಲಿಯನ್ನು ಕಂಡು ಒಂದು ಕ್ಷಣ ಅಚ್ಚರಿಪಟ್ಟರು.

ಅಶ್ವಿನ್‌ರಂತೆಯೇ ಬೌಲಿಂಗ್ ಮಾಡುವ ಅವರನ್ನು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಂತೆ ಕೇಳಿಕೊಂಡರು. ನೆಟ್ಸ್‌ನಲ್ಲಿ ಪಿಥಿಯಾ ಬೌಲಿಂಗ್‌ಗೆ ಸಾಕಷ್ಟು ಅಭ್ಯಾಸ ಮಾಡಿದ ಸ್ಟೀವ್ ಸ್ಮಿತ್‌ ಖುಷಿಪಟ್ಟರು. ಆಸ್ಟ್ರೇಲಿಯಾ ತಂಡಕ್ಕೆ ಮಹೇಶ್ ಪಿಥಿಯಾ ಬೌಲಿಂಗ್ ಸಾಕಷ್ಟು ಇಷ್ಟವಾಗಿದೆ.

BGT 2023: ರೋಹಿತ್ ಶರ್ಮಾ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಸಂಜಯ್ ಬಂಗಾರ್BGT 2023: ರೋಹಿತ್ ಶರ್ಮಾ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಸಂಜಯ್ ಬಂಗಾರ್

ನೆಟ್ಸ್‌ನಲ್ಲಿ ಹಲವು ಸ್ಪಿನ್ನರ್ ಗಳು

ನೆಟ್ಸ್‌ನಲ್ಲಿ ಹಲವು ಸ್ಪಿನ್ನರ್ ಗಳು

ಮಹೇಶ್ ಪಿಥಿಯಾರ ಬೌಲಿಂಗ್ ಮಾಡುವ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೋಡಿದ್ದ ಆಸ್ಟ್ರೇಲಿಯಾದ ಕೋಚ್‌ ಸಿಬ್ಬಂದಿ ಅವರನ್ನು ಇಷ್ಟಪಟ್ಟಿದ್ದರು. ಆಲೂರಿಗೆ ಅವರನ್ನು ತಮ್ಮ ತರಬೇತಿಗಾಗಿ ಕರೆದೊಯ್ದರು. ಸದ್ಯ ಆಸ್ಟ್ರೇಲಿಯಾ ತಂಡದ ಜೊತೆ ಆಲೂರಿನಲ್ಲಿ ಇರುವ ಮಹೇಶ್ ಪಿಥಿಯಾ ನೆಟ್ಸ್‌ನಲ್ಲಿ ಬೌಲರ್ ಆಗಿದ್ದಾರೆ.

ಅಶ್ವಿನ್ ಮಾತ್ರವಲ್ಲ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾರಂತೆ ಬೌಲಿಂಗ್ ಮಾಡುವ ಶಶಾಂಕ್‌ ಮೆಹ್ರೋತ್ರಾರನ್ನು ಕೂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಕೇಳಿಕೊಂಡಿರುವ ಆಸ್ಟ್ರೇಲಿಯಾ ಆಟಗಾರರು, ಅಭ್ಯಾಸ ಮಾಡುತ್ತಿದ್ದಾರೆ. ಮಾರ್ನಸ್ ಲ್ಯಾಬುಸ್ಚಾಗ್ನೆ, ಅಲೆಕ್ಸ್ ಕ್ಯಾರಿ ಮತ್ತು ಮ್ಯಾಟ್ ರೆನ್‌ ಶಾ ನೆಟ್ಸ್‌ನಲ್ಲಿ ಮೆಹ್ರೋತ್ರಾ ಬೌಲಿಂಗ್‌ ಅನ್ನು ಎದುರಿಸಿದರು.

ಬರೋಡಾ ತಂಡದ ಸ್ಪಿನ್ನರ್

ಮಹೇಶ್ ಪಿಥಿಯಾ ಮೂಲತಃ ಸೌರಾಷ್ಟ್ರದ ಜುನಾಗಢದವರು. ಕ್ರಿಕೆಟ್‌ ಆಡುವ ಉದ್ದೇಶದಿಂದ ಅವರು ಬರೋಡಾಗೆ ತೆರಳಿದರು. 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡುವುದನ್ನು ನೋಡಿದ ಮಹೇಶ್ ಪಿಥಿಯಾ ಅವರಂತೆ ಬೌಲಿಂಗ್ ಮಾಡಲು ಅಭ್ಯಾಸ ಮಾಡಲು ಆರಂಭಿಸಿದರು.

ಪ್ರಥಮ ದರ್ಜೆ ಪಂದ್ಯಗಳಲ್ಲಿ ಬರೋಡ ಪರವಾಗಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಈ ಬಾರಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಅವರು ಪದಾರ್ಪಣೆ ಮಾಡಿದರು. ಆಫ್‌ ಸ್ಪಿನ್ನರ್ ಆಗಿರುವ ಮಹೇಶ್ ಪಿಥಿಯಾ ಉತ್ತಮ ಬ್ಯಾಟರ್ ಕೂಡ ಹೌದು. ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಪಡೆದ ಪಿಥಿಯಾ, ಎರಡೂ ಇನ್ನಿಂಗ್ಸ್‌ಗಳಿಂದ 116 ರನ್‌ಗಳನ್ನು ಗಳಿಸಿ ಗಮನ ಸೆಳೆದರು. ಅಶ್ವಿನ್‌ರಷ್ಟೇ ಎತ್ತರವಿರುವ ಮಹೇಶ್ ಪಿಥಿಯಾ ಅವರಂತೆಯೇ ಬೌಲಿಂಗ್ ಆಕ್ಷನ್ ಹೊಂದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಸ್ಪಿನ್ ದಾಳಿ ವಿರುದ್ಧ ವಿಶೇಷ ಸಿದ್ಧತೆ

ಸ್ಪಿನ್ ದಾಳಿ ವಿರುದ್ಧ ವಿಶೇಷ ಸಿದ್ಧತೆ

ಭಾರತದ ಸ್ಪಿನ್‌ ಪಿಚ್‌ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ತೊಡಕಾಗಿರುವುದು ಮೂವರು ಸ್ಪಿನ್ನರ್ ಗಳು. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್‌ ಸ್ಪಿನ್ ದಾಳಿಯ ಭಯದಿಂದ ಆಸ್ಟ್ರೇಲಿಯಾ ಸಾಕಷ್ಟು ಅಭ್ಯಾಸ ಮಾಡುತ್ತಿದೆ. ಸ್ಪಿನ್‌ಗೆ ನೆರವಾಗುವ ಪಿಚ್‌ಗಳನ್ನು ನಿರ್ಮಿಸುವಂತೆ ಬಿಸಿಸಿಐಗೆ ಮನವಿ ಮಾಡಿತ್ತು. ಈಗ ಸ್ಪಿನ್‌ಗೆ ನೆರವಾಗುವ ಪಿಚ್‌ಗಳಲ್ಲಿ ಭಾರತ ಸ್ಪಿನ್ ಬೌಲರ್ ಗಳ ವಿರುದ್ಧ ಅಭ್ಯಾಸ ಮಾಡುವ ಮೂಲಕ ಸ್ಪಿನ್ ದಾಳಿಯನ್ನು ಎದುರಿಸಲು ಸಜ್ಜಾಗಿದೆ.

ಮಹೇಶ್ ಪಿಥಿಯಾ ನೆಟ್ಸ್‌ನಲ್ಲಿ ಸ್ಟೀವ್‌ ಸ್ಮಿತ್‌ಗೆ ಹೆಚ್ಚಿನ ಬೌಲಿಂಗ್ ಮಾಡಿದರು. ಮಹೇಶ್ ಪಿಥಿಯಾರ ಹಲವು ಎಸೆತಗಳನ್ನು ಆಡುವಲ್ಲಿ ಸ್ಮಿತ್ ವಿಫಲರಾದರು. ಹಲವು ಬಾರಿ ಬೌಲ್ಡ್ ಕೂಡ ಆದರು. ನಂತರ ಕೆಲವು ಎಸೆತಗಳನ್ನು ಸ್ವೀಪ್ ಮಾಡಲು, ಕವರ್ ಡ್ರೈವ್‌ ಕಡೆ ಹೊಡೆಯುವಲ್ಲಿ ಯಶಸ್ವಿಯಾದರು.

ಫೆಬ್ರವರಿ 9ರಂದು ಬಾರ್ಡರ್ ಗವಾಸ್ಕರ್ ಸರಣಿಯ ಮೊದಲನೇ ಪಂದ್ಯ ನಾಗ್ಪುರದಲ್ಲಿ ಆರಂಭವಾಗಲಿದೆ. ನಾಗ್ಪುರ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಕಾರಣ ಭಾರತ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

Story first published: Friday, February 3, 2023, 21:34 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X