ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳು

IND Vs AUS Test: Next 5 Test Matches Will Decide Future of Rohit Sharma As A Captain

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಸೋತಿದೆ.

ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅಧಿಕೃತ ನಾಯಕ ಎಂದು ಇನ್ನೂ ಘೋಷಣೆ ಮಾಡಿಲ್ಲವಾದರೂ 2024ರ ಟಿ20 ವಿಶ್ವಕಪ್‌ವರೆಗೆ ಅವರೇ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

PSL 2023: ಪಿಎಸ್‌ಎಲ್ ಸೌಹಾರ್ದ ಪಂದ್ಯದ ವೇಳೆ ಬಾಂಬ್‌ ಸ್ಫೋಟ ವರದಿ: ಕೆಲ ಕಾಲ ಪಂದ್ಯ ಸ್ಥಗಿತPSL 2023: ಪಿಎಸ್‌ಎಲ್ ಸೌಹಾರ್ದ ಪಂದ್ಯದ ವೇಳೆ ಬಾಂಬ್‌ ಸ್ಫೋಟ ವರದಿ: ಕೆಲ ಕಾಲ ಪಂದ್ಯ ಸ್ಥಗಿತ

2023ರ ಏಕದಿನ ವಿಶ್ವಕಪ್‌ವರೆಗೆ ರೋಹಿತ್ ಶರ್ಮಾ ಭಾರತದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ನಾಯಕರಾಗಿ ಮುಂದುವರೆಯಲಿದ್ದಾರೆ. ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಸಿದ್ಧತೆ ನಡೆಸುತ್ತಿದೆ.

ನಾಯಕ ರೋಹಿತ್ ಶರ್ಮಾಗೆ ಈ ಸರಣಿ ಬಾರಿ ಮಹತ್ವದ್ದಾಗಿದೆ. ನಾಯಕನಾಗಿ ತಂಡವನ್ನು ಗೆಲ್ಲಿಸುವ ಹೊಣೆ ಅವರ ಮೇಲಿದೆ. ಟಿ20 ವಿಶ್ವಕಪ್, ಏಷ್ಯಾಕಪ್ ಕಳೆದುಕೊಂಡಿದ್ದರು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಸುವರ್ಣ ಅವಕಾಶ ಈಗ ಭಾರತ ತಂಡಕ್ಕೆ ಇದೆ. ರೋಹಿತ್ ಶರ್ಮಾ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಒಳ್ಳೆಯ ಅವಕಾಶ ಎನ್ನಲಾಗಿದೆ.

ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ

ಮುಂದಿನ 5 ಟೆಸ್ಟ್‌ ಪಂದ್ಯಗಳು ನಿರ್ಣಾಯಕ

ಮುಂದಿನ 5 ಟೆಸ್ಟ್‌ ಪಂದ್ಯಗಳು ನಿರ್ಣಾಯಕ

ಬಿಸಿಸಿಐ ಮೂಲಗಳ ಪ್ರಕಾರ ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಪಂದ್ಯಗಳು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಸೇರಿ ಒಟ್ಟು 5 ಪಂದ್ಯಗಳು ಮಾತ್ರ ಉಳಿದಿದ್ದು, ಇದರಲ್ಲಿ ನಾಯಕತ್ವದ ಪರೀಕ್ಷೆಗೊಳಪಡಲಿದ್ದಾರೆ.

"ಇನ್ನೊಂದು ಐಸಿಸಿ ಟ್ರೋಫಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ" ಎಂದು ಬಿಸಿಸಿಯ ಭಾರತ ತಂಡ ಆಟಗಾರರಿಗೆ ಸ್ಪಷ್ಟ ಸಂದೇಶ ನೀಡಿದೆ. ಫೆಬ್ರವರಿ 9 ರಂದು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಐಸಿಸಿ ಟ್ರೋಫಿ ಗೆಲ್ಲುವುದೇ ಪ್ರಮುಖ ಗುರಿ

ಐಸಿಸಿ ಟ್ರೋಫಿ ಗೆಲ್ಲುವುದೇ ಪ್ರಮುಖ ಗುರಿ

ಭಾರತ ಕೊನೆಯದಾಗಿ 2013ರಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಅದಾದ ನಂತರ 2018ರಲ್ಲಿ ಏಷ್ಯಾಕಪ್‌ ಅನ್ನು ಗೆದ್ದುಕೊಂಡಿದೆ. ಕಳೆದ ವರ್ಷ ಟಿ20 ಮಾದರಿ ಕ್ರಿಕೆಟ್‌ ಕಡೆಗೆ ಹೆಚ್ಚಿನ ಗಮನ ನೀಡಿದರೂ, ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತು.

ದ್ವಿಪಕ್ಷೀಯ ಸರಣಿಗಳಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ. ಏಕದಿನ ಮತ್ತು ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ ಇಂದು ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಭಾರತ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಕೂಡ ಅಗ್ರಸ್ಥಾನಕ್ಕೇರಲಿದೆ. ಅಗ್ರಸ್ಥಾನಿಗಳಾಗಿದ್ದರೂ ಐಸಿಸಿ ಕಪ್ ಗೆದ್ದಿಲ್ಲ ಎನ್ನುವುದು ತಂಡದ ದೊಡ್ಡ ಕೊರಗಾಗಿದೆ.

"ಮತ್ತೊಂದು ಐಸಿಸಿ ಟ್ರೋಫಿಯನ್ನು ಕಳೆದುಕೊಳ್ಳಲು ನಾವು ಸಿದ್ಧವಿಲ್ಲ. ವಿಶ್ವಕಪ್‌ನಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೆ ದ್ವಿಪಕ್ಷೀಯ ಸರಣಿಯಲ್ಲಿ ಗೆದ್ದ ಸಾಧನೆ ಲೆಕ್ಕಕ್ಕೆ ಬರಲ್ಲ, ಎರಡು ವರ್ಷದಲ್ಲಿ ಮೂರು ಟೂರ್ನಿಗಳನ್ನು ಸೋತಿದ್ದೇವೆ. ಇದು ರೋಹಿತ್ ಶರ್ಮಾ ಮತ್ತು ಇತರೆ ಆಟಗಾರರಿಗೂ ತಿಳಿದಿದೆ. ಈ ಬಾರಿ ಐಸಿಸಿ ಟ್ರೋಫಿ ಗೆಲ್ಲಲೇಬೇಕೆಂದು ಸಂಕಲ್ಪ ಮಾಡಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

 ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವ ದಾಖಲೆ

ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವ ದಾಖಲೆ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಇದುವರೆಗು ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದು, ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಶ್ರೀಲಂಕಾ ವಿರುದ್ಧ ಆಡಿರುವ ಎರಡು ಪಂದ್ಯಗಳಲ್ಲಿ ಇನ್ನಿಂಗ್ಸ್ 222 ರನ್‌ಗಳ ಜಯ ಮತ್ತೊಂದು ಪಂದ್ಯದಲ್ಲಿ 238 ರನ್‌ಗಳ ಜಯ ಸಾಧಿಸಿದೆ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಗೆಲ್ಲಲೇಬೇಕಿದೆ.

Story first published: Sunday, February 5, 2023, 18:36 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X