ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus Test : ಬೌಲಿಂಗ್ ಅಭ್ಯಾಸ ಆರಂಭಿಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ

Ind vs Aus Test : Ravindra Jadeja Started Bowling Practice Ahead of Test Series

ಫೆಬ್ರವರಿ 9 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ಭಾರತೀಯ ಆಲ್‌ರೌಂಡರ್ ರವೀಂದ್ರ ಜಡೇಜಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಬೌಲಿಂಗ್ ಆರಂಭಿಸಿದ್ದಾರೆ.

ಜಡೇಜಾ ಅವರು ಎಡಗೈ ಬೌಲಿಂಗ್ ಮಾಡುವ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಎಡಗೈ ಬೌಲಿಂಗ್‌ನಲ್ಲಿ ಮಾಡುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ತೆಳ್ಳಗಿನವರನ್ನೇ ಆಯ್ಕೆ ಮಾಡುತ್ತೀರಾದರೆ ಫ್ಯಾಶನ್ ಶೋಗೆ ಹೋಗಿ: ಸರ್ಫರಾಜ್ ನಿರ್ಲಕ್ಷ್ಯಕ್ಕೆ ಗವಾಸ್ಕರ್ ಕಿಡಿತೆಳ್ಳಗಿನವರನ್ನೇ ಆಯ್ಕೆ ಮಾಡುತ್ತೀರಾದರೆ ಫ್ಯಾಶನ್ ಶೋಗೆ ಹೋಗಿ: ಸರ್ಫರಾಜ್ ನಿರ್ಲಕ್ಷ್ಯಕ್ಕೆ ಗವಾಸ್ಕರ್ ಕಿಡಿ

2022ರ ಏಷ್ಯಾಕಪ್‌ ಸಂದರ್ಭದಲ್ಲಿ ರವೀಂದ್ರ ಜಡೇಜಾ ಗಾಯಗೊಂಡು ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಅವರು 2022ರ ಟಿ20 ವಿಶ್ವಕಪ್‌ನಿಂದ ಕೂಡ ಹೊರಬೀಳಬೇಕಾಯಿತು.

2022ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗೆ ಜಡೇಜಾ ಆಯ್ಕೆಯಾಗಿದ್ದರೂ, ಸಂಪೂರ್ಣವಾಗಿ ಫಿಟ್ ಆಗದ ಕಾರಣ ಅವರು ಪಂದ್ಯಾವಳಿಯಿಂದ ಹೊರಗುಳಿದರು.

ಸದ್ಯ ರವೀಂದ್ರ ಜಡೇಜಾ ಫಿಟ್ ಆಗಿದ್ದು ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಲಿದ್ದು, ಅದಕ್ಕೂ ಮುನ್ನ ಅವರು ಎನ್‌ಸಿಎಯಿಂದ ಕ್ಲಿಯರೆನ್ಸ್ ಪಡೆಯಬೇಕಿದೆ.

Ind vs Aus Test : Ravindra Jadeja Started Bowling Practice Ahead of Test Series

ಭಾರತಕ್ಕೆ ಮಹತ್ವದ ಸರಣಿ

2023ರ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ ತಲುಪಬೇಕಾದರೆ ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಬೇಕಿದೆ.

ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಹೊರಬಿದ್ದಿರುವುದು ಭಾರತ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಪಂತ್ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಏಕದಿನ ಟೆಸ್ಟ್‌ನಲ್ಲಿ ಅದ್ಭುತ ಶತಕದೊಂದಿಗೆ ತಂಡಕ್ಕೆ ಎಷ್ಟು ನಿರ್ಣಾಯಕ ಎಂಬುದನ್ನು ತೋರಿಸಿದರು.

ಪಂತ್ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಭಾರತಕ್ಕೆ ಮುಖ್ಯ ಆಟಗಾರರಾಗಿದ್ದಾರೆ. ಭಾರತದ ಪಿಚ್‌ಗಳಲ್ಲಿ ಜಡೇಜಾ ತಮ್ಮ ಸ್ಪಿನ್‌ನಿಂದ ಎದುರಾಳಿಗಳಿಗೆ ಮಾರಕವಾಗುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್‌ನಲ್ಲೂ ಕೂಡ ಜಡೇಜಾ ಅತ್ಯುತ್ತಮವಾಗಿದ್ದು, ಪ್ರಮುಖ ರನ್ ಗಳಿಸಿ ತಂಡಕ್ಕೆ ಸಹಾಯಕವಾಗಬಲ್ಲರು.

2017ರಲ್ಲಿ ಆಸ್ಟ್ರೇಲಿಯಾ ಭಾರತದಲ್ಲಿ ಟೆಸ್ಟ್ ಸರಣಿ ಆಡಿದಾಗ ಜಡೇಜಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರ ಪ್ರದರ್ಶನಕ್ಕೆ ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಅದೇ ಪ್ರದರ್ಶನವನ್ನು ಈಗ ಪುನರಾವರ್ತಿಸಿದರೆ ಭಾರತಕ್ಕೆ ಭಾರಿ ಅನುಕೂಲವಾಗಲಿದೆ.

ಜಡೇಜಾ ಅವರು ಜನವರಿ 24 ರಿಂದ ಸೌರಾಷ್ಟ್ರ ಪರ ರಣಜಿ ಟ್ರೋಫಿಯಲ್ಲಿ ಆಡುವ ಸಾಧ್ಯತೆಯಿರುವುದರಿಂದ ಮೊದಲು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗಿದೆ.

ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಸೂರ್ಯಕುಮಾರ್ ಯಾದವ್.

Story first published: Friday, January 20, 2023, 2:30 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X