ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ

Ind Vs Aus Test: Skipper Rohit Sharma Request To Curators To Good Test Cricket Pitch In All Venues

ಆಸ್ಟ್ರೇಲಿಯಾ ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ಸ್ಪಿನ್‌ಗೆ ಸಹಕಾರಿಯಾದ ಪಿಚ್‌ಗಳಲ್ಲಿ ಅಭ್ಯಾಸ ಮಾಡುತ್ತಿದೆ. ಭಾರತದ ಯುವ ಸ್ಪಿನ್ನರ್ ಗಳನ್ನು ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಮನವಿ ಮಾಡಿದ್ದು, ಅಶ್ವಿನ್, ಜಡೇಜಾ, ಅಕ್ಷರ್ ದಾಳಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಟೀಂ ಇಂಡಿಯಾ ಕೂಡ ನಾಗ್ಪುರದಲ್ಲಿ ಕಠಿಣ ಅಭ್ಯಾಸ ಮಾಡುತ್ತಿದೆ. ಭಾರತದಲ್ಲಿ ಸ್ಪಿನ್‌ ಪಿಚ್‌ಗಳಲ್ಲಿ ಆಡಲು ಸಿದ್ಧವಾಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ಕೊಡಲು ತೀರ್ಮಾನಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಹೊಸ ಉಪಾಯ ಮಾಡಿದ್ದಾರೆ.

ಸರಣಿಯ ನಾಲ್ಕು ಪಂದ್ಯಗಳನ್ನು ಆಯೋಜಿಸುವ ಕ್ರೀಡಾಂಗಣಗಳ ಪಿಚ್‌ ಕ್ಯುರೇಟರ್‌ಗಳಿಗೆ ಮನವಿ ಮಾಡಿದ್ದು, ಎಲ್ಲಾ ಸ್ಥಳಗಳಲ್ಲಿ ಉತ್ತಮವಾದ ಟೆಸ್ಟ್ ಕ್ರಿಕೆಟ್‌ ಪಿಚ್‌ ನಿರ್ಮಿಸುವಂತೆ ಕೇಳಿಕೊಂಡಿದ್ದಾರೆ.

Ranji Trophy: ಪಂಜಾಬ್ ವಿರುದ್ಧ ಗೆದ್ದ ಸೌರಾಷ್ಟ್ರ: ಸೆಮಿಫೈನಲ್‌ನಲ್ಲಿ ಕರ್ನಾಟಕ-ಸೌರಾಷ್ಟ್ರ ಮುಖಾಮುಖಿRanji Trophy: ಪಂಜಾಬ್ ವಿರುದ್ಧ ಗೆದ್ದ ಸೌರಾಷ್ಟ್ರ: ಸೆಮಿಫೈನಲ್‌ನಲ್ಲಿ ಕರ್ನಾಟಕ-ಸೌರಾಷ್ಟ್ರ ಮುಖಾಮುಖಿ

ರೋಹಿತ್ ಶರ್ಮಾ ಈ ನಿರ್ಧಾರದ ಹಿಂದೆ ಇನ್ನೊಂದು ಕಾರಣವೂ ಇದೆ. ಆಸ್ಟ್ರೇಲಿಯಾ ತಂಡದ ಬ್ಯಾಟರ್ ಗಳು ಈಗಾಗಲೇ ಸ್ಪಿನ್‌ ವಿರುದ್ಧ ಆಡಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಚಾರವೆಂದರೆ ಸ್ಪಿನ್ ಬೌಲಿಂಗ್ ವಿರುದ್ಧ ಆಡಲು ಭಾರತದ ಬ್ಯಾಟರ್ ಗಳೇ ಪರದಾಡುತ್ತಿರುವುದು. ರಿಷಬ್ ಪಂತ್ ಸರಣಿಗೆ ಅಲಭ್ಯವಾಗಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ವಿರಾಟ್ ಕೊಹ್ಲಿ ಕೂಡ ಈ ಮಧ್ಯೆ ಸ್ಪಿನ್ನರ್ ವಿರುದ್ದ ಉತ್ತಮವಾಗಿ ಆಡುತ್ತಿಲ್ಲ.

ಭಾರತದ ಸ್ಪಿನ್‌ ಪಿಚ್‌ಗಳಲ್ಲಿ ಆಡಲು ಆಸ್ಟ್ರೇಲಿಯಾ ಉತ್ತಮ ಸ್ಪಿನ್ನರ್ ಗಳ ಜೊತೆಯಲ್ಲೇ ಭಾರತಕ್ಕೆ ಬಂದಿದೆ. ನಾಥನ್ ಲಿಯಾನ್, ಅಶ್ಟನ್ ಅಗರ್ ಅಂತಹ ಸ್ಪಿನ್ ಬೌಲರ್ ಇದ್ದಾರೆ.

Ind Vs Aus Test: Skipper Rohit Sharma Request To Curators To Good Test Cricket Pitch In All Venues

ಉತ್ತಮ ಸ್ಥಳಗಳ ಆಯ್ಕೆ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿರುವ ಸ್ಥಳಗಳ ಹಿಂದೆ ಕೂಡ ಲೆಕ್ಕಾಚಾರ ಇದೆ. ಫೆಬ್ರವರಿ ತಿಂಗಳಿನಲ್ಲಿ ಉತ್ತರ ಭಾರತದಲ್ಲಿ ಬೆಳಿಗ್ಗೆ ವೇಳೆ ಹೆಚ್ಚಿನ ಚಳಿ ಇರುತ್ತದೆ. ಪಿಚ್‌ಗಳು ಈ ಸಮಯದಲ್ಲಿ ನಿಧಾನವಾಗಿರುತ್ತವೆ. ಅಲ್ಲದೆ ಚೆಂಡು ಸ್ವಿಂಗ್ ಆಗುವುದರಿಂದ ಉಭಯ ತಂಡದ ವೇಗಿಗಳಿಗೆ ಅನುಕೂಲಕರವಾಗಲಿದೆ.

ಈ ಕ್ರೀಡಾಂಗಣಗಳಲ್ಲಿ ಹೆಚ್ಚಿನ ಬೌನ್ಸ್‌ಗಾಗಲಿ ಅಥವಾ ಸ್ಪಿನ್ ಆಗಲಿ ನೆರವು ನೀಡುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಆಸ್ಟ್ರೇಲಿಯಾ ಹೇಗೆ ಆಡುತ್ತದೆ ಎನ್ನುವುದನ್ನು ನೋಡಲು ಕೋಚ್ ರಾಹುಲ್ ದ್ರಾವಿಡ್ ಆಸಕ್ತಿ ಹೊಂದಿದ್ದಾರೆ.

Ind Vs Aus Test: Skipper Rohit Sharma Request To Curators To Good Test Cricket Pitch In All Venues

ದೆಹಲಿ ಮತ್ತು ಧರ್ಮಶಾಲಾ ಪಿಚ್‌ಗಳು

ದೆಹಲಿ ಮತ್ತು ಧರ್ಮಶಾಲಾ ಪಿಚ್‌ಗಳಲ್ಲಿ ಭಾರತ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಭಾರತದ ಬ್ಯಾಟರ್ ಗಳು ನಿಧಾನಗತಿಯ ಪಿಚ್‌ಗಳಿಗೆ ಸೂಕ್ತವಾಗಿ ಹೊಂದಿಕೊಂಡಿದ್ದಾರೆ. ಮಣಿಕಟ್ಟಿನ ಹೊಡೆತಗಳ ಮೂಲಕ ಸುಲಭವಾಗಿ ತನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಹೇಳುವ ಪ್ರಕಾರ ಟೆಸ್ಟ್ ಪಂದ್ಯ 5ನೇ ದಿನದವರೆಗೆ ನಡೆದರೆ ಭಾರತ ತಂಡ ಸುಲಭವಾಗಿ ಜಯ ಸಾಧಿಸುತ್ತದೆ ಎಂದು ಹೇಳುತ್ತಿದ್ದಾರೆ.

Story first published: Sunday, February 5, 2023, 5:35 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X