ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs BAN 2nd ODI: ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಕೊಹ್ಲಿ, ಧವನ್ ನಿವೃತ್ತಿಯಾಗಲಿ; ಫ್ಯಾನ್ಸ್ ತರಾಟೆ

IND vs BAN 2nd ODI: Indian Fans Upset On Kohli And Dhawan After Failed Against Bangladesh

ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ 2ನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮೂರು ಪಂದ್ಯಗಳ ಏಕದಿನ ಸರಣಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 272 ರನ್ ಚೇಸಿಂಗ್ ಮಾಡುವಾಗ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿ ಹಿಡಿದರು.

ಫೀಲ್ಡಿಂಗ್ ಮಾಡುವಾಗ ಬಾಲ್ ಬಡಿದು ಕೈಬೆರಳು ಗಾಯ ಮಾಡಿಕೊಂಡ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಇನ್ನಿಂಗ್ಸ್ ತೆರೆದ ವಿರಾಟ್ ಕೊಹ್ಲಿ, ಎರಡನೇ ಓವರ್‌ನಲ್ಲಿಯೇ ಎಬಾಡೋಟ್ ಹೋಸೈನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.

Google Search 2022: ಅತಿ ಹೆಚ್ಚು ಹುಡುಕಿದ ಕ್ರೀಡಾಕೂಟಗಳಲ್ಲಿ IPLಗೆ ಮೊದಲ ಸ್ಥಾನ; ಇತರೆ ಕ್ರೀಡೆಗಳ ಪಟ್ಟಿGoogle Search 2022: ಅತಿ ಹೆಚ್ಚು ಹುಡುಕಿದ ಕ್ರೀಡಾಕೂಟಗಳಲ್ಲಿ IPLಗೆ ಮೊದಲ ಸ್ಥಾನ; ಇತರೆ ಕ್ರೀಡೆಗಳ ಪಟ್ಟಿ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 8 ವರ್ಷಗಳ ನಂತರ ಓಪನಿಂಗ್ ಬ್ಯಾಟಿಂಗ್ ಮಾಡುತ್ತಿದ್ದು, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಸುದೀರ್ಘ ಇನ್ನಿಂಗ್ಸ್ ಆಡುವ ಆರಂಭಿಕನ ಅಗತ್ಯವಿದೆ. ಆದರೆ ಅತ್ಯಂತ ಕೆಟ್ಟ ಎಸೆತಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.

ಅತ್ಯಂತ ಕೆಟ್ಟ ಎಸೆತಕ್ಕೆ ವಿರಾಟ್ ಕೊಹ್ಲಿ ಬೌಲ್ಡ್

ಅತ್ಯಂತ ಕೆಟ್ಟ ಎಸೆತಕ್ಕೆ ವಿರಾಟ್ ಕೊಹ್ಲಿ ಬೌಲ್ಡ್

ಅದೇ ರೀತಿ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಈ ಬಾರಿಯೂ ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಲೆಂಗ್ತ್ ಬೌಲ್ ಬೌಂಡರಿ ಬಾರಿಸಲು ಹೋಗಿ ಪಾಯಿಂಟ್‌ನಲ್ಲಿದ್ದ ಮೆಹಿದಿ ಹಸನ್‌ಗೆ ಕ್ಯಾಚ್ ನೀಡಿದರು.

ಈಗಾಗಲೇ ಮೊದಲ ಏಕದಿನ ಪಂದ್ಯವನ್ನು ಗೆದ್ದಿರುವ ಬಾಂಗ್ಲಾದೇಶ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದ್ದು, ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕದಾರೆ ಭಾರತ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೊದಲ 20 ಓವರ್‌ಗಳಲ್ಲಿ ಎದುರಾಳಿ ತಂಡದ ಆರು ವಿಕೆಟ್‌

ಮೊದಲ 20 ಓವರ್‌ಗಳಲ್ಲಿ ಎದುರಾಳಿ ತಂಡದ ಆರು ವಿಕೆಟ್‌

ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಪಂದ್ಯದ ಮೊದಲ 20 ಓವರ್‌ಗಳಲ್ಲಿ ಎದುರಾಳಿ ತಂಡದ ಆರು ವಿಕೆಟ್‌ಗಳನ್ನು ಪಡೆದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಾಂಗ್ಲಾದೇಶದ ಮಹಮ್ಮದುಲ್ಲಾ ಮತ್ತು ಮೆಹಿದಿ ಹಸನ್ ಮಿರಾಜ್ ನಡುವಿನ 7ನೇ ವಿಕೆಟ್ ಜೊತೆಯಾಟ ಪಂದ್ಯವನ್ನು ದೂರ ತೆಗೆದುಕೊಂಡು ಹೋಯಿತು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ದಾಖಲೆಯ 148 ರನ್‌ಗಳ ಜೊತೆಯಾಟ ನೀಡಿದರು. ಭಾರತೀಯ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಕಳೆದುಕೊಂಡರು ಮತ್ತು ಬಾಂಗ್ಲಾದೇಶ ಪಾಳಯದಲ್ಲಿ ಸಂತೋಷ ಮೂಡಿತು. ವಿಶೇಷವಾಗಿ ಮೆಹಿದಿ ಹಸನ್ ಮಿರಾಜ್ 83 ಎಸೆತಗಳಲ್ಲಿ ಚೊಚ್ಚಲ ಅಜೇಯ ಶತಕವನ್ನು ಬಾರಿಸಿ, ಬಾಂಗ್ಲಾದೇಶವನ್ನು 271 ರನ್‌ಗಳ ಸುರಕ್ಷಿತ ಮೊತ್ತ ಗಳಿಸಲು ನೆರವಾದರು.

ತಮ್ಮ ಹತಾಶೆಯನ್ನು ಹೊರಹಾಕಿದ ಅಭಿಮಾನಿಗಳು

ಇತ್ತ ಭಾರತ ತಂಡ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆಯೇ ಆರಂಭಿಕ ವಿಕೆಟ್ ಕಳೆದುಕೊಂಡಿದ್ದರಿಂದ ಭಾರತೀಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಹತಾಶೆಯನ್ನು ಹೊರಹಾಕಿದರು.

ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ವಿರಾಮ ತೆಗೆದುಕೊಳ್ಳಬಾರದಿತ್ತು ಎಂದು ಹಲವರು ಸೂಚಿಸಿದರೆ, ಇನ್ನು ಕೆಲವರು ಶಿಖರ್ ಧವನ್ ಸೇರಿದಂತೆ 30 ವರ್ಷ ದಾಟಿರುವ ಈ ಆಟಗಾರರು ನಿವೃತ್ತಿಯಾಗಬೇಕು ಎಂದು ಹೇಳಿದ್ದಾರೆ.

Story first published: Wednesday, December 7, 2022, 19:59 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X