Ind vs Ban: ಮೊದಲ ಪಂದ್ಯದಲ್ಲಿ ಭಾರತಕ್ಕೆ ಆಘಾತ, ಒಂದು ವಿಕೆಟ್‌ ರೋಚಕ ಜಯ ಸಾಧಿಸಿ ದಾಖಲೆ ಬರೆದ ಬಾಂಗ್ಲಾದೇಶ

ಭಾರತದ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ 1 ವಿಕೆಟ್‌ನ ರೋಚಕ ಜಯ ಸಾಧಿಸಿದೆ. ಕೊನೆಯ ವಿಕೆಟ್‌ಗೆ ಮೆಹದಿ ಹಸನ್ ಮತ್ತು ಮುಸ್ತಾಫಿಜುರ್ ರೆಹಮಾನ್ ಅಜೇಯ 51 ರನ್‌ಗಳ ಜೊತೆಯಾಟ ಆಡುವ ಮೂಲಕ ಬಾಂಗ್ಲಾದೇಶಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 41.2 ಓವರ್ ಗಳಲ್ಲಿ 186 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಭಾರತ ಪರವಾಗಿ ಕೆಎಲ್ ರಾಹುಲ್ 73 ರನ್ ಗಳಿಸಿದ್ದು ಉಳಿದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು.

ನಾಯಕ ರೋಹಿತ್ ಶರ್ಮಾ 27 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 9 ರನ್ ಗಳಿಸಿ ನಿರಾಸೆ ಮೂಡಿಸಿದರು. ಶಿಖರ್ ಧವನ್ 7 ರನ್ ಗಳಿಸಿ ಮತ್ತೆ ವೈಫಲ್ಯ ಅನುಭವಿಸಿದರು. ಶ್ರೇಯಸ್ ಅಯ್ಯರ್ 24 ರನ್, ವಾಷಿಂಗ್ಟನ್ ಸುಂದರ್ 19 ರನ್ ಗಳಿಸಿ ಔಟಾದರು.

ಶಕೀಬ್ ಅಲ್ ಹಸನ್ 5 ವಿಕೆಟ್ ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಎಬಾಡಟ್ ಹೊಸೈನ್ 4 ವಿಕೆಟ್ ಪಡೆಯುವ ಮೂಲಕ ಶಕೀಬ್‌ಗೆ ಉತ್ತಮ ಸಾಥ್ ನೀಡಿದರು. ಮೆಹದಿ ಹಸನ್ ಮಿರ್ಜಾ ಉಳಿದ ಒಂದು ಪಡೆದರು.

ದಿಢೀರ್ ಕುಸಿದ ಮಧ್ಯಮ ಕ್ರಮಾಂಕ

ದಿಢೀರ್ ಕುಸಿದ ಮಧ್ಯಮ ಕ್ರಮಾಂಕ

187 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಇನ್ನಿಂಗ್ಸ್‌ನ ಮೊದಲನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಜ್ಮುಲ್ ಹೊಸೈನ್ ಶಾಂಟೋ ದೀಪಕ್ ಚಹರ್ ಬೌಲಿಂಗ್‌ನ ಮೊದಲನೇ ಎಸೆತದಲ್ಲೇ ರೋಹಿತ್ ಶರ್ಮಾಗೆ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ ಆದರು.

ನಾಯಕ ಲಿಟನ್ ದಾಸ್ 41 ರನ್ ಗಳಿಸಿದರೆ, ಅನಾಮುಲ್ ಹಕ್ 14 ರನ್ ಗಳಿಸಿದರು, ಅನುಭವಿ ಶಕೀಬ್ ಅಲ್ ಹಸನ್ 29 ರನ್ ಗಳಿಸಿದ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಒಂದು ಹಂತದಲ್ಲಿ ಸುಲಭವಾಗಿ ಗೆಲುವು ಸಾಧಿಸುವ ಹಂತದಲ್ಲಿದ್ದ ಬಾಂಗ್ಲಾದೇಶ ನಂತರ 128 ರನ್ ಗಳಿಸಿದ್ದಾಗ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

IND vs BAN: ಭಾರತ ಏಕದಿನ ತಂಡದಿಂದ ರಿಷಭ್ ಪಂತ್ ಕೊನೆಗೂ ಬಿಡುಗಡೆ; ಬದಲಿ ಆಟಗಾರನ ಹೆಸರಿಲ್ಲ

ಮೆಹದಿ ಹಸನ್ ಮಿರ್ಜಾ ಗೆಲುವಿನ ಆಟ

ಮೆಹದಿ ಹಸನ್ ಮಿರ್ಜಾ ಗೆಲುವಿನ ಆಟ

ನಂತರ 136 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಾಗ ಇನ್ನು ಬಾಂಗ್ಲಾದೇಶ ಸೋಲು ಖಚಿತ ಎಂದೇ ಭಾವಿಸಿದ್ದರು. ಆದರೆ ಮೆಹದಿ ಹಸನ್ ಮಿರ್ಜಾ 39 ಎಸೆತಗಳಲ್ಲಿ ಅಜೇಯ 38 ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಇವರಿಗೆ ಉತ್ತಮವಾಗಿ ಜೊತೆಯಾಟ ನೀಡಿದ ಮುಸ್ತಾಫಿಜುರ್ ರೆಹಮಾನ್ 10 ರನ್ ಗಳಿಸಿದರು.

42.3ನೇ ಓವರ್ ನಲ್ಲಿ ಶಾರ್ದುಲ್ ಠಾಕೂರ್ ಬೌಲಿಂಗ್‌ನಲ್ಲಿ ಮೆಹದಿ ಹಸನ್ ನೀಡಿದ ಕ್ಯಾಚ್‌ ಅನ್ನು ಭಾರತದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಕೈ ಚೆಲ್ಲಿದ್ದು ದುಬಾರಿಯಾಗಿ ಪರಿಣಮಿಸಿತು. ಇದರ ಲಾಭ ಪಡೆದ ಪಡೆದ ಹಸನ್ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಜೋಡಿ 10ನೇ ವಿಕೆಟ್‌ಗೆ ದಾಖಲೆಯ 51 ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಸ್ಮರಣೀಯ ಗೆಲುವು ಸಾಧಿಸಲು ಸಹಾಯ ಮಾಡಿದರು. ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ. ಮೆಹದಿ ಹಸನ್ ವಿರೋಚಿತ ಆಟಕ್ಕಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದರೆ, ಕುಲ್ದೀಪ್ ಸೇನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಅಂತಿಮ ಓವರ್ ಗಳಲ್ಲಿ ಬೌಲಿಂಗ್ ಲಯ ಕಳೆದುಕೊಂಡ ದೀಪಕ್ ಚಹರ್ ದುಬಾರಿಯಾದರು.

ಒತ್ತಡದ ನಡುವೆ ಅರ್ಧಶತಕ ಗಳಿಸಿದ ಕೆಎಲ್ ರಾಹುಲ್

ಒತ್ತಡದ ನಡುವೆ ಅರ್ಧಶತಕ ಗಳಿಸಿದ ಕೆಎಲ್ ರಾಹುಲ್

ಭಾರತದ ಪ್ರಮುಖ ಬ್ಯಾಟರ್ ವಿಫಲರಾದರೂ ಕೆಎಲ್ ರಾಹುಲ್ ಏಕಾಂಗಿಯಾಗಿ ಹೋರಾಡಿದರು. ಸಾಮಾನ್ಯವಾಗಿ ಇನ್ನಿಂಗ್ಸ್ ಆರಂಭಿಸುವ ರಾಹುಲ್, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. 70 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ, 4 ಸಿಕ್ಸ್‌ಗಳು ಸೇರಿವೆ. ಒಂದು ಕಡೆ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರು, ಕೆಎಲ್‌ ರಾಹುಲ್ ವೇಗವಾಗಿಯೇ ರನ್ ಗಳಿಸಿದರು. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇದು ಅವರ 11ನೇ ಅರ್ಧಶತಕವಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದ ಕೆಎಲ್ ರಾಹುಲ್, ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.

ಮೋಡಿ ಮಾಡಿದ ಶಕೀಬ್ ಅಲ್ ಹಸನ್

ಮೋಡಿ ಮಾಡಿದ ಶಕೀಬ್ ಅಲ್ ಹಸನ್

ಉತ್ತಮ ರನ್ ಕಲೆಹಾಕುವ ವಿಶ್ವಾಸದಲ್ಲಿ ಕಣಕ್ಕಿಳಿದ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಗೆ ಆಘಾತ ನೀಡಿದ್ದು, ಅನುಭವಿ ಆಲ್‌ರೌಂಡರ್ ಶಕೀಬ್ ಅಲ್‌ ಹಸನ್. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ವಾಷಿಂಗ್ಟನ್ ಸುಂದರ್ ಸೇರಿದಂತೆ 5 ವಿಕೆಟ್‌ ಪಡೆಯುವ ಮೂಲಕ ಶಕೀಬ್ ಭಾರತ ತಂಡವನ್ನು ಕಟ್ಟಿ ಹಾಕಿದರು.

ಮತ್ತೊಂದೆಡೆ ವೇಗಿ ಎಬಡಾಟ್ ಹುಸೇನ್ ಕೂಡ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ 4 ವಿಕೆಟ್ ಪಡೆದು ಭಾರತವನ್ನು ಕಡಿಮೆ ಮೊತ್ತಕ್ಕೆ ಆಲ್‌ಔಟ್ ಮಾಡುವಲ್ಲಿ ಯಶಸ್ವಿಯಾದರು.

For Quick Alerts
ALLOW NOTIFICATIONS
For Daily Alerts
Story first published: Sunday, December 4, 2022, 19:57 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X