ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಆ ಒಂದು ನಿರ್ಧಾರದಿಂದ ಅವಕಾಶ ಕಳೆದುಕೊಳ್ಳಲಿದ್ದಾರೆ ಈ ಮೂವರು ಕ್ರಿಕೆಟಿಗರು!

Ind vs Ban: Ill Continue As A Wicket Keeper And Will Bat At No.4 : KL Rahul

ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ರಿಷಬ್ ಪಂತ್ ಗಾಯದ ಕಾರಣದಿಂದ ಹೊರಗುಳಿದ ನಂತರ, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಬಾಂಗ್ಲಾದೇಶದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟಿದ್ದಾರೆ.

ಇಷ್ಟು ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಕೆಎಲ್ ರಾಹುಲ್ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಅವರಂತಹ ಆಯ್ಕೆ ಇದ್ದಾಗಲೂ ಕೆಎಲ್ ರಾಹುಲ್‌ಗೆ ವಿಕೆಟ್ ಕೀಪಿಂಗ್ ಮಾಡಲು ಕೇಳಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು.

IND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆIND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ

ಕೆಲವು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಅದರಲ್ಲೂ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಆಯ್ಕೆಗೆ ಲಭ್ಯವಿದ್ದಾಗ ಕೆಎಲ್ ರಾಹುಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾಕೆ ವಹಿಸಿದ್ದಾರೆ ಎಂದು ಹಲವು ಮಂದಿ ತಲೆಕೆಡಿಸಿಕೊಂಡಿದ್ದರು. ಆದರೆ, ಪಂದ್ಯ ಮುಗಿದ ಬಳಿಕ ಕೆಎಲ್ ರಾಹುಲ್ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

ವಿಕೆಟ್ ಕೀಪಿಂಗ್ ಮಾಡಲು ಸೂಚನೆ

ವಿಕೆಟ್ ಕೀಪಿಂಗ್ ಮಾಡಲು ಸೂಚನೆ

ಪಂದ್ಯದ ಬಳಿಕ ಮಾತನಾಡಿದ ಕೆಎಲ್‌ ರಾಹುಲ್, "ತಂಡದ ಮ್ಯಾನೇಜ್‌ಮೆಂಟ್ ನನಗೆ ವಿಕೆಟ್ ಮಾಡುವಂತೆ ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಹೇಳಿದೆ" ಎಂದು ಹೇಳಿದರು.

ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇದೇ ಪಾತ್ರವನ್ನು ನಿರ್ವಹಿಸುವುದಾಗಿ ಹೇಳುವ ಮೂಲಕ ಉಳಿದ ವಿಕೆಟ್ ಕೀಪರ್ ಗಳ ಅವಕಾಶಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ. ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರದಿಂದ ಇಶಾನ್ ಕಿಶಾನ್, ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಮುಂದಿನ ದಿನಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕ್ಷೀಣವಾಗಿದೆ. ಕೆಎಲ್ ರಾಹುಲ್ ಗಾಯ ಅಥವಾ ಅನುಪಸ್ಥಿತಿಯಲ್ಲಿ ಮಾತ್ರ ಇತತರಿಗೆ ಅವಕಾಶ ಸಿಗಲಿದೆ.

IND vs BAN 1st ODI : ಭಾರತ ವಿರುದ್ಧ ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲ ಸ್ಪಿನ್ನರ್ ಶಕೀಬ್ ಅಲ್ ಹಸನ್

ಸಂಜು ಸ್ಯಾಮ್ಸನ್‌ಗೆ ಅನ್ಯಾಯ

ಸಂಜು ಸ್ಯಾಮ್ಸನ್‌ಗೆ ಅನ್ಯಾಯ

ಸದ್ಯದ ಪರಿಸ್ಥಿತಿಯಲ್ಲಿ ನತದೃಷ್ಟ ಕ್ರಿಕೆಟಿಗ ಎಂದರೆ ಅದು ಸಂಜು ಸ್ಯಾಮ್ಸನ್ ಎನ್ನಬಹುದು. ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಅವರನ್ನು ತಂಡಕ್ಕೆ ಮಾಡುವುದಿಲ್ಲ. ಒಂದು ವೇಳೆ ತಂಡಕ್ಕೆ ಆಯ್ಕೆಯಾದರೂ ಅವರದ್ದು ಬೆಂಚ್ ಕಾಯುವ ಕೆಲಸವಷ್ಟೇ ಎನ್ನುವಂತಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಸ್ಥಾನ ಪಡೆದರೂ, ಸರಣಿಯಲ್ಲಿ ಆಡಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ.

ರಿಷಬ್‌ ಪಂತ್‌ಗೆ ಹೆಚ್ಚಿನ ಅವಕಾಶ ನೀಡುವ ದೃಷ್ಟಿಯಿಂದ ಸಂಜು ಸ್ಯಾಮ್ಸನ್‌ರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಅದಾದ ನಂತರ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಸ್ಯಾಮ್ಸನ್‌ ಆಯ್ಕೆ ಕೂಡ ಆಗಲಿಲ್ಲ. ಪಂತ್ ಹೊರಬಿದ್ದ ಬಳಿಕ ಅವರ ಬದಲಿಗೆ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ.

ತಂಡದಿಂದ ಹೊರಬಿದ್ದ ರಿಷಬ್ ಪಂತ್

ತಂಡದಿಂದ ಹೊರಬಿದ್ದ ರಿಷಬ್ ಪಂತ್

ಸತತ ವೈಫಲ್ಯದಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ರಿಷಬ್ ಪಂತ್‌ರನ್ನು ಗಾಯದ ಕಾರಣ ನೀಡಿ ಬಿಸಿಸಿಐ ಬಾಂಗ್ಲಾದೇಶದ ವಿರುದ್ಧದ ಏಕದಿನ ತಂಡದಿಂದ ಕೈಬಿಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ಬಳಿಕ ಪಂತ್‌ ವೈದ್ಯರ ತಪಾಸಣೆಗೆ ಒಳಗಾಗಿದ್ದರು.

ಪಂತ್ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, "ಕಳೆದ ಆರು ತಿಂಗಳಿನಿಂದ ನಾವು ಅನೇಕ ಏಕದಿನ ಪಂದ್ಯಗಳಲ್ಲಿ ಆಡಿಲ್ಲ. 2020-21ರಲ್ಲಿ ನಾನು ವಿಕೆಟ್ ಕೀಪಿಂಗ್ ಮಾಡುತ್ತಿದ್ದೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಈಗ ಮತ್ತೆ ಅದೇ ಜವಾಬ್ದಾರಿ ನಿಭಾಯಿಸುವಂತೆ ಕೇಳಲಾಗಿದೆ. ಪಂತ್ ಬಿಡುಗಡೆಗೆ ಕಾರಣ ಏನು ಎಂದು ನನಗೆ ತಿಳಿದಿಲ್ಲ. ವೈದ್ಯಕೀಯ ತಂಡ ಸರಿಯಾಗಿ ತಪಾಸಣೆ ಮಾಡಿದ ಬಳಿಕ ಈ ಬಗ್ಗೆ ತಿಳಿಸಬಹುದು" ಎಂದು ಕೆಎಲ್ ರಾಹುಲ್ ಹೇಳಿದರು.

ಇಶಾನ್ ಕಿಶಾನ್‌ಗೂ ಅವಕಾಶ ಸಿಗೋದು ಡೌಟು

ಇಶಾನ್ ಕಿಶಾನ್‌ಗೂ ಅವಕಾಶ ಸಿಗೋದು ಡೌಟು

ಮತ್ತೊಬ್ಬ ವಿಕೆಟ್ ಕೀಪರ್ ಇಶಾನ್ ಕಿಶಾನ್ ಅವಕಾಶ ಪಡೆಯೋದು ಕೂಡ ಅನುಮಾನವಾಗಿದೆ. ಕೆಎಲ್ ರಾಹುಲ್ ಮುಖ್ಯ ವಿಕೆಟ್ ಕೀಪರ್ ಆಗಿರಲಿದ್ದು, ಇವರ ಅನುಪಸ್ಥಿತಿಯಲ್ಲಿ ಪಂತ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇಶಾನ್ ಕಿಶಾನ್‌ಗೆ ಅವಕಾಶ ಸಿಗೋದು ಕಷ್ಟವಾಗಲಿದೆ.

2023ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ತಂಡದ ಆಡಳಿತ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ತಂಡದಲ್ಲಿ ಆಲ್‌ರೌಂಡರ್ ಗೆ ಅವಕಾಶ ಮಾಡಿಕೊಡಲು ಕೆಎಲ್‌ ರಾಹುಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದೆ.

Story first published: Monday, December 5, 2022, 12:24 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X