149 ಪಂದ್ಯಗಳಲ್ಲಿ ಅವರು 45.53 ಸರಾಸರಿಯಲ್ಲಿ 6,284 ರನ್
2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಶಿಖರ್ ಧವನ್, ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಂತಹ ದಂತಕಥೆಗಳ ಉಪಸ್ಥಿತಿಯಿಂದಾಗಿ, ಆರಂಭದಲ್ಲಿ ತಮ್ಮ ವೃತ್ತಿಜೀವನದ ಅವಕಾಶಗಳಿಗಾಗಿ ಕಾಯಬೇಕಾಯಿತು.
ಆದರೆ 2013ರ ಚಾಂಪಿಯನ್ಸ್ ಟ್ರೋಫಿಯು ಶಿಖರ್ ಧವನ್‌ಗೆ ಜೀವನವನ್ನು ಬದಲಾಯಿಸುವ ಕ್ಷಣವಾಗಿತ್ತು. ಅಲ್ಲಿ ಅವರು ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಜೋಡಿಯಾಗಿದ್ದರು. ಮುಂದಿನ ಕೆಲವು ವರ್ಷಗಳಲ್ಲಿ ಅವರು ಅಸಾಧಾರಣ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದರು. ಅವರಿಬ್ಬರು ಆರಂಭಿಕರಾಗಿ 111 ಬಾರಿ ಒಟ್ಟಿಗೆ ಆಡಿದ್ದಾರೆ. ಈ ವೇಳೆ 17 ಶತಕ ಮತ್ತು 15 ಅರ್ಧ ಶತಕಗಳೊಂದಿಗೆ 45.4 ಸರಾಸರಿಯಲ್ಲಿ 4,994 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ- ಶಿಖರ್ ಧವನ್ ಜೋಡಿ ನಾಲ್ಕನೇ ಸ್ಥಾನ
ಗೋರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್, ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೇಡನ್ ಮತ್ತು ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರ ನಂತರದ ಓಪನರ್‌ಗಳ ಒಟ್ಟಾರೆ ಜೊತೆಯಾಟದಲ್ಲಿ ರೋಹಿತ್ ಶರ್ಮಾ- ಶಿಖರ್ ಧವನ್ ಜೋಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಎಡಗೈ ಆಟಗಾರ ಶಿಖರ್ ಧವನ್ ಮೆನ್ ಇನ್ ಬ್ಲೂ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ ಆಟಗಾರ. ಅವರು ಐಸಿಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ವಿಜೇತ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಇದೇ ವೇಳೆ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ 363 ರನ್‌ಗಳೊಂದಿಗೆ ಭಾರತದ ಪರ ಅಗ್ರ ಸ್ಕೋರರ್ ಆಗಿದ್ದಾರೆ ಮತ್ತು ಒಟ್ಟಾರೆ ಅಗ್ರ ರನ್ ಗಳಿಸಿದವರಾಗಿದ್ದಾರೆ.
2015ರ ವಿಶ್ವಕಪ್‌ನಲ್ಲಿ ಭಾರತ ಪರ ಅಗ್ರಸ್ಥಾನ
2015ರ 50-ಓವರ್ ವಿಶ್ವಕಪ್‌ನಲ್ಲಿ ಅವರು ಮತ್ತೊಮ್ಮೆ ತಮ್ಮ ದೇಶದ ಪರ ಬ್ಯಾಟಿಂಗ್ ಚಾರ್ಟ್‌ಗಳಲ್ಲಿ ಅಗ್ರಸ್ಥಾನ ಪಡೆದರು. ಇದರಲ್ಲಿ ಅವರು 412 ರನ್ ಗಳಿಸಿದರು ಮತ್ತು ತಮ್ಮ ತಂಡವನ್ನು ಸೆಮಿ-ಫೈನಲ್‌ಗೆ ಕೊಂಡೊಯ್ಯಲು ಸಹಾಯ ಮಾಡಿದರು. ಅವರು ಭಾರತ ತಂಡಕ್ಕಾಗಿ ಮತ್ತು ಒಟ್ಟಾರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ 338 ರನ್ ಗಳಿಸಿ ಬ್ಯಾಟಿಂಗ್ ಚಾರ್ಟ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದರು. ಆ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಸೋತಿತ್ತು.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳು ಭಾರತೀಯ ತಂಡಕ್ಕೆ ಮತ್ತು ಅನುಭವಿಗಳ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಕೆಲವು ಉತ್ತಮ ಪ್ರದರ್ಶನಗಳು ಅವರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತನ್ನನ್ನು ಪುನಃ ತನ್ನ ಅಧಿಪತ್ಯ ಸ್ಥಾಪಿಸಲು ಸಹಾಯ ಮಾಡಬಹುದು ಮತ್ತು ಬಹುಶಃ ತಂಡದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಯೋಜನೆಗಳ ಭಾಗವಾಗಬಹುದು.
ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಡೇಲ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್.